ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ 1,000 ವರ್ಷಗಳವರೆಗಿನ ಭಾರತದ ಭದ್ರ ಬುನಾದಿ: ಪ್ರಧಾನಿ ಮೋದಿ

ಅಯೋಧ್ಯೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾ.ಸ್ವ.ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಇಂದು ಶ್ರೀರಾಮಲಲ್ಲಾ ‘ಪ್ರಾಣ ಪ್ರತಿಷ್ಠೆಯ’ ವಿಧಿಗಳನ್ನು ಕೈಗೊಂಡರು. ಪ್ರಧಾನಿಯವರು ಸುಮಾರು 8,000 ವಿಶೇಷ ಆಹ್ವಾನಿತರು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು. ನಮ್ಮ ರಾಮ ಬಂದಿದ್ದಾನೆ! ರಾಮ ಲಲ್ಲಾ ಈಗ ಟೆಂಟ್‌ನಲ್ಲಿ ಇರುವುದಿಲ್ಲ. ಆತ ದೊಡ್ಡ ದೇವಸ್ಥಾನದಲ್ಲಿರುತ್ತಾನೆ ಎಂದು ಭಾಷಣ ಪ್ರಾರಂಭಿಸಿದ ಅವರು ಜ.22 ಈ ಐತಿಹಾಸಿಕ ದಿನವು ಹೊಸ ಯುಗವೊಂದಕ್ಕೆ ನಾಂದಿಯಾಗಲಿದ್ದು ಕಾಲಚಕ್ರವನ್ನು ಬದಲಾಯಿಸಲಿದೆ ಎಂದರು. ನಮ್ಮ […]

ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ಹನುಮನ ಜನುಮ ಭೂಮಿ ಕಿಷ್ಕಿಂಧೆಯ ರಥ!!

ಅಯೋಧ್ಯೆ: ಇಂದಿನ ಕರ್ನಾಟಕದ ಹಂಪಿ ಅಂದಿನ ಹನುಮಂತನ ಜನ್ಮಸ್ಥಳ ಕಿಷ್ಕಿಂಧೆಯ ಟ್ಯಾಬ್ಲೋ ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೂ ಮುನ್ನ ಅಯೋಧ್ಯೆಗೆ ಆಗಮಿಸಿದೆ. ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡಿದ ರಥವು ಅಯೋಧ್ಯೆಗೆ ಆಗಮಿಸುವ ಮೊದಲು ಇಂದಿನ ನೇಪಾಳದ ಸೀತಾ ದೇವಿಯ ಜನ್ಮಸ್ಥಳ ಜನಕಪುರಕ್ಕೆ ಭೇಟಿ ನೀಡಿದೆ. 100 ಭಕ್ತರ ತಂಡವು ರಥದೊಂದಿಗೆ ಪ್ರಯಾಣಿಸಿದೆ. ಭಗವಾನ್ ರಾಮನ ಚಿತ್ರಗಳೊಂದಿಗೆ ಕೇಸರಿ ಧ್ವಜವನ್ನು ಬೀಸುತ್ತಾ ಹಾಡುಗಳು ಮತ್ತು ನೃತ್ಯದೊಂದಿಗೆ “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗುತ್ತಾ ಟ್ಯಾಬ್ಲೋ […]

ವಜ್ರನಗರಿಯಲ್ಲಿ 9,999 ವಜ್ರಗಳಿಂದ ಮೂಡಿಬಂತು ಅಪೂರ್ವ ರಾಮಮಂದಿರ ಕಲಾಕೃತಿ!!

ಸೂರತ್: ವಜ್ರನಗರಿಯೆಂದೇ ಜಗದ್ವಿಖ್ಯಾತವಾಗಿರುವ ಗುಜರಾತಿನ ಸೂರತ್ ನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಮುಂಚಿತವಾಗಿ 9,999 ವಜ್ರಗಳಿಂದ ರಾಮಮಂದಿರದ ಚಿತ್ರವನ್ನು ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ. 9,999 ವಜ್ರಗಳಿಂದ ಕೂಡಿದ ಸುಂದರವಾದ ಸೂರತ್ ಕಸೂತಿಯ ಗೋಡೆಯ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಈ ಗೋಡೆಯ ಚೌಕಟ್ಟಿನಲ್ಲಿ ಶ್ರೀ ರಾಮನನ್ನು ಚಿತ್ರಿಸಲಾಗಿದೆ ಮತ್ತು ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ.

ರಾಮನ ಪ್ರಾಣಪ್ರತಿಷ್ಠೆಯಂದು ವಿತರಿಸಲು ಒಂದು ಲಕ್ಷ ಲಡ್ಡುಗಳನ್ನು ರವಾನಿಸಿದ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನವು ಶುಕ್ರವಾರ ತನ್ನ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ಜನವರಿ 22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ರವಾನಿಸಿದೆ. ಲಡ್ಡುಗಳನ್ನು ಶುದ್ಧ ತುಪ್ಪದಲ್ಲಿ ತಯಾರಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಟ್ರಸ್ಟ್ ಬೋರ್ಡ್ ಅಧ್ಯಕ್ಷ ಕರುಣಾಕರ್ ರೆಡ್ಡಿ ಮತ್ತು ಇಒ ಧರ್ಮಾ ರೆಡ್ಡಿ ವಿಶೇಷ ಪ್ರಯತ್ನ ನಡೆಸಿದ್ದಾರೆ ಎಂದು ಟಿಟಿಡಿ ಹೆಚ್ಚುವರಿ ಇಒ ವೀರ ಬ್ರಹ್ಮಂ ಹೇಳಿದ್ದಾರೆ. ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯ ಸೌರಭ್ ಬೋರಾ ಮತ್ತು ಮಾಜಿ ಮಂಡಳಿಯ […]

ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳ ಶರಣಾಗತಿಯ ಗಡುವನ್ನು ವಿಸ್ತರಿಸಲು ‘ಸುಪ್ರೀಂ’ ನಕಾರ

ನವದೆಹಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಶರಣಾಗತಿಯ ಗಡುವನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಹಿಂದೆ, ಕುಟುಂಬದ ಜವಾಬ್ದಾರಿಗಳು, ವಯಸ್ಸಾದ ಪೋಷಕರ ಆರೈಕೆ, ಚಳಿಗಾಲದ ಬೆಳೆಗಳ ಕೊಯ್ಲು ಮತ್ತು ಆರೋಗ್ಯ ಪರಿಸ್ಥಿತಿಗಳಂತಹ ಕಾರಣಗಳನ್ನು ಉಲ್ಲೇಖಿಸಿ 10 ಅಪರಾಧಿಗಳು ಶರಣಾಗಲು ಹೆಚ್ಚಿನ ಸಮಯ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ, ಒಂಬತ್ತು ಅಪರಾಧಿಗಳು ಇನ್ನೂ ಆರು ವಾರಗಳ ವಿಸ್ತರಣೆಯನ್ನು ಕೋರಿದ್ದರೆ, ಒಬ್ಬರು ನಾಲ್ಕು ವಾರಗಳ ಹೆಚ್ಚುವರಿ ಸಮಯವನ್ನು ಕೇಳಿದ್ದರು. ಅರ್ಜಿಯನ್ನು ತಿರಸ್ಕರಿಸುವ […]