ವಂದೇ ಭಾರತ್ ಹಾರಾಟ: 1.25 ಲಕ್ಷ ಮಂದಿ ತವರಿಗೆ

ನವದೆಹಲಿ: ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆ ವಂದೇ ಭಾರತ್   ಅಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಸುಮಾರು 1,25,000  ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಹೊರ ದೇಶದಿಂದ ಜೂ.23ರಂದು 6,037 ಮಂದಿ ಭಾರತಕ್ಕೆ ಮರಳಿ ಬಂದಿದ್ದು, ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಭರವಸೆ ಮತ್ತು ಸಂತೋಷದ ಧ್ಯೇಯವಾಗಿ ಮುಂದುವರೆದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ವಿದೇಶದಲ್ಲಿ ಸಿಲುಕಿರುವ 1,25,000 ಮಂದಿ ಭಾರತೀಯರು ಮಿಷನ್ ವಂದೇ ಭಾರತ್ ವಿಮಾನಗಳಲ್ಲಿ ತವರಿಗೆ ಮರಳಿ ಬಂದಿದ್ದು, […]

ವಿಶ್ವದ 10 ಸಿರಿವಂತರ ಪಟ್ಟಿಯಲ್ಲಿ ರಿಲಾಯನ್ಸ್ ನ ಮುಕೇಶ್ ಅಂಬಾನಿ

ಬೆಂಗಳೂರು: ವಿಶ್ವದ 10 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು  ಸೇರ್ಪಡೆಯಾಗಿದ್ದು, ಒರಾಕಲ್‌ ಕಾರ್ಪೊರೇಷನ್ನಿನ ಲ್ಯಾರಿ ಎಲಿಸನ್‌ ಮತ್ತು ಫ್ರಾನ್ಸ್‌ನ ಸಿರಿವಂತ ಮಹಿಳೆ ಫ್ರೆನ್ಸ್‌ವಾಸ್‌ ಬೆಟೆನ್‌ಕೋರ್ಟ್‌ ಮೆಯೆರ್ಸ್‌ ಅವರನ್ನು ಹಿಂದಿಕ್ಕಿ 9ನೇ ಸ್ಥಾನ ಪಡೆದಿದ್ದಾರೆ. ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, ಮುಕೇಶ್ ಅಂಬಾನಿಯವರು 4,83,750‬ ಕೋಟಿ ರೂ. ಮೊತ್ತದ ಸಂಪತ್ತಿನ ಗೌರವಕ್ಕೆ ಪಾತ್ರರಾಗಿದ್ದು, ಏಷ್ಯಾದ ಏಕೈಕ ಉದ್ಯಮಿಯಾಗಿ ವಿಶ್ವದ ಮೊದಲ 10 ಮಂದಿ ಸಿರಿವಂತರ ಸಾಲಿಗೆ ಮುಕೇಶ್‌ ಅಂಬಾನಿ ಅವರು ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ […]

ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಉಭಯ ಪಡೆಗಳ ನಿರ್ಧಾರ

ಬೀಜಿಂಗ್: ಗಡಿಯಲ್ಲಿ ಉದ್ಭವಿಸಿರುವ ಯುದ್ಧದ ಸ್ಥಿತಿಯನ್ನು ತಣ್ಣಗಾಗಿಸಲು ಭಾರತ ಹಾಗೂ ಚೀನಾದ ಸೇನಾಪಡೆಗಳು ಮುಂದಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಎರಡೂ ಕಡೆಗಳ ಉದ್ವಿಗ್ನತೆ ಶಮನ ಮಾಡುವ ಉದ್ದೇಶದಿಂದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ಟಿಬೆಟ್‌ನ ಮೇಜರ್ ಜನರಲ್ ಲು ಲಿನ್ ನಡುವೆ  ಸೋಮವಾರ ಸುದೀರ್ಘ 11 ಗಂಟೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಜೂನ್ 22ರಂದು ನಡೆದ ಕಮಾಂಡರ್ ಹಂತದ ಮಾತುಕತೆಯಲ್ಲಿ ಪರಸ್ಪರರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು. ‘ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಮೂಡಿದ್ದ […]

ಭಯೋತ್ಪಾದಕರ ದಾಳಿ ಮಾಹಿತಿ: ದೆಹಲಿಯಲ್ಲಿ ಅಲರ್ಟ್

ನವದೆಹಲಿ: ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಸುಳಿವು ನೀಡಿದ್ದು, ಕಟ್ಟೀಚರ ಕ್ರಮ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಲ್ಕೈದು ಉಗ್ರರು ದೆಹಲಿಗೆ ನುಸುಳಿ ದಾಳಿ ನಡೆಸುವ ಶಂಕೆಯಿದೆ ಎಂದು ಗುಪ್ತಚರ ಏಜೆನ್ಸಿಗಳು ದೆಹಲಿಯ ಪೊಲೀಸರಿಗೆ ಎಚ್ಚರಿಕೆ ನೀಡಿವೆ. ಕ್ರೈ ಬ್ರಾಂಚ್, ವಿಶೇಷ ದಳ ಸೇರಿದಂತೆ ದೆಹಲಿಯ 15 ಪೊಲೀಸ್ ವಿಭಾಗಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ದೆಹಲಿಯ ಗಡಿ ಭಾಗಗಳಲ್ಲಿ ವಿಶೇಷ ನಿಗಾ ವಹಿಸಿದ್ದು, ಮಾರುಕಟ್ಟೆ ಪ್ರದೇಶ, ರೋಗಿಗಳಿರುವ ಆಸ್ಪತ್ರೆ ಹಾಗೂ ಹಲವು ಕಡೆಗಳಲ್ಲಿ […]

ಭಾರತ, ಚೀನಾ ಗಡಿ ವಿವಾದ: ಸಮಸ್ಯೆ ಬಗೆಹರಿಸಲು ನೆರವು: ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಮಧ್ಯೆ ಉಂಟಾಗಿರುವ ಗಡಿ ವಿವಾದವನ್ನು ಬಗೆಹರಿಸಲು ಸಹಾಯ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾದ ಶ್ವೇತಭವನದಲ್ಲಿ ಸುದ್ದಿಗಾರರಲ್ಲಿ ಟ್ರಂಪ್  ಮಾತನಾಡಿದ್ದಾರೆ. ಭಾರತ ಮತ್ತು ಚೀನಾದ ಜತೆ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಕಠಿಣವಾಗಿದೆ. ಅವರು ದೊಡ್ಡ ಸಮಸ್ಯೆಯಲ್ಲಿದ್ದಾರೆ’ ಎಂದಿದ್ದಾರೆ. ‘ಅವರು ಸಂಘರ್ಷಕ್ಕಿಳಿದಿದ್ದು,  ಏನಾಗುತ್ತೋ ಎಂದು ಮುಂದೆ ಕಾದುನೋಡೋಣ. ಅವರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.