ವಿಶ್ವದ 10 ಸಿರಿವಂತರ ಪಟ್ಟಿಯಲ್ಲಿ ರಿಲಾಯನ್ಸ್ ನ ಮುಕೇಶ್ ಅಂಬಾನಿ

ಬೆಂಗಳೂರು: ವಿಶ್ವದ 10 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು  ಸೇರ್ಪಡೆಯಾಗಿದ್ದು, ಒರಾಕಲ್‌ ಕಾರ್ಪೊರೇಷನ್ನಿನ ಲ್ಯಾರಿ ಎಲಿಸನ್‌ ಮತ್ತು ಫ್ರಾನ್ಸ್‌ನ ಸಿರಿವಂತ ಮಹಿಳೆ ಫ್ರೆನ್ಸ್‌ವಾಸ್‌ ಬೆಟೆನ್‌ಕೋರ್ಟ್‌ ಮೆಯೆರ್ಸ್‌ ಅವರನ್ನು ಹಿಂದಿಕ್ಕಿ 9ನೇ ಸ್ಥಾನ ಪಡೆದಿದ್ದಾರೆ.
ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, ಮುಕೇಶ್ ಅಂಬಾನಿಯವರು 4,83,750‬ ಕೋಟಿ ರೂ. ಮೊತ್ತದ ಸಂಪತ್ತಿನ ಗೌರವಕ್ಕೆ ಪಾತ್ರರಾಗಿದ್ದು, ಏಷ್ಯಾದ ಏಕೈಕ ಉದ್ಯಮಿಯಾಗಿ ವಿಶ್ವದ ಮೊದಲ 10 ಮಂದಿ ಸಿರಿವಂತರ ಸಾಲಿಗೆ ಮುಕೇಶ್‌ ಅಂಬಾನಿ ಅವರು ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗೆ ಬಂಡವಾಳ ಹೂಡಿಕೆಯಲ್ಲಿ ಸಂಸ್ಥೆಯ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ ರಿಲಯನ್ಸ್‌ನಲ್ಲಿ ಶೇ 42ರಷ್ಟು ಪಾಲು ಬಂಡವಾಳ ಹೊಂದಿರುವ ಮುಕೇಶ್‌ ಅಂಬಾನಿ ಅವರ ಸಂಪತ್ತು ಹೆಚ್ಚಾಗಿಸಿದೆ.
ಕಂಪನಿಯ ಷೇರು ಬೆಲೆಯು ಮಾರ್ಚ್‌ ತಿಂಗಳಲ್ಲಿ ದುಪ್ಪಟ್ಟು ಹೆಚ್ಚಾಗಿದ್ದು, ಅಲ್ಲದೆ ಕೊರೊನಾ ವೈರಸ್‌ ನಿಂದಾಗಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿರುವ ಅನೇಕರ ಸಂಪತ್ತು ಕುಸಿತಗೊಂಡಿದೆ.
ಕೊರೊನಾ ಲಾಕ್‌ಡೌನ್‌ ಹೊತ್ತಿನಲ್ಲಿ ದೂರಸಂಪರ್ಕದ ದೈತ್ಯ ಕಂಪನಿ ಜಿಯೊದ ಹಣಕಾಸು ಪರಿಸ್ಥಿತಿಯು ಸಮೃದ್ಧವಾಗಿದ್ದು, ಹೀಗಾಗಿ ಮುಕೇಶ್‌ ಅವರ ವೈಯಕ್ತಿಕ ಸಂಪತ್ತು ಗಮನಾರ್ಹವಾಗಿ ಹೆಚ್ಚಳಗೊಂಡಿದೆ.