ಭಾರತದಲ್ಲಿ ಲಸಿಕೆಯಿಂದ ಮೊದಲ ಸಾವು: ಖಚಿತ ಪಡಿಸಿದ ರಾಷ್ಟ್ರೀಯ ಸರ್ಕಾರಿ ಸಮಿತಿ!

ನವದೆಹಲಿ: ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದ 68 ವರ್ಷದ ವ್ಯಕ್ತಿಯೊಬ್ಬರು ಅನಾಫಿಲ್ಯಾಕ್ಸಿಸ್ ನಿಂದ ಮೃತಪಟ್ಟಿದ್ದಾನೆ ಎಂದು ಸರ್ಕಾರಿ ಸಮಿತಿ ದೃಢಪಡಿಸಿದೆ ಹೌದು ಲಸಿಕೆ ಪಡೆದ ನಂತರ ವ್ಯಕ್ತಿಯಲ್ಲಿ ಅಡ್ಡಪರಿಣಾಮವಾಗಿ ತೀವ್ರ ಅಲರ್ಜಿ ಪರಿಣಾಮ ಉಂಟಾಗಿದ್ದು ಇದರಿಂದಲೇ 2021ರ ಮಾರ್ಚ್ 8ರಂದು ಮೃತಪಟ್ಟಿರುವುದಾಗಿ ರಾಷ್ಟ್ರೀಯ ಎಇಎಫ್‌ಐ ಸಮಿತಿಯ ವರದಿಯಲ್ಲಿ ತಿಳಿಸಿದೆ. ಜನವರಿ 16 ಮತ್ತು 19ರಂದು ಲಸಿಕೆ ಪಡೆದಿದ್ದ ಇಬ್ಬರಿಗೂ ತೀವ್ರ ಅಲರ್ಜಿಯಾಗಿದ್ದು ಕೂಡಲೇ ಅವರು ಆಸ್ಪತ್ರೆಗೆ ದಾಖಲಾದ ನಂತರ ಚೇತರಿಸಿಕೊಂಡಿದ್ದಾರೆ ಎಂದು ಸಮಿತಿ ತಿಳಿಸಿದೆ. 31 ಪ್ರಕರಣಗಳ ಸಾಂದರ್ಭಿಕ […]
ಜೂ.14: ವಿಶ್ವಸಂಸ್ಥೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಜೂನ್ 14ರಂದು ನಡೆಯಲಿರುವ ವಿಶ್ವಸಂಸ್ಥೆಯ ವರ್ಚುವಲ್ ವಿಧಾನದ ಮೂಲಕ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣಿನ ಗುಣಮಟ್ಟ ನಾಶ, ಮರುಭೂಮೀಕರಣ ಹಾಗೂ ಬರ ಪರಿಸ್ಥಿತಿ ಕುರಿತು ಮಾತನಾಡಲಿದ್ದಾರೆ. ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್ ಬೊಜ್ಕಿರ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮೀನಾ ಮೊಹಮ್ಮದ್, ಯುಎನ್‌ಸಿಸಿಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಇಬ್ರಾಹಿಂ ಥಾಯ್ವ್ ಸಹ ಈ ಕಾರ್ಯಕ್ರಮವನ್ನು ಉದ್ಧೇಶಿಸಿ ವಿಚಾರ ಮಂಡನೆ ಮಾಡುವರು.
ಎಲೆಯೊಳಗಿರುವ ಈ ಪಕ್ಷಿಯ ಗೂಡನ್ನು ನೋಡಿದರೆ ಬೆರಗಾಗುತ್ತೀರಿ!

ಪಕ್ಷಿ ಎಲೆಯೊಳಗೆ ಗೂಡನ್ನು ನಿರ್ಮಿಸುವ ವಿಡಿಯೋ ಒಂದು ವೈರಲ್ ಆಗಿದ್ದು ಹಕ್ಕಿಗಳ ಕ್ರಿಯಾಶೀಲತೆಯನ್ನು ಈ ವಿಡಿಯೋ ಸಾರಿ ಹೇಳಿದೆ. ಪ್ರಕೃತಿಯನ್ನು ಆಳವಾಗಿ ನೋಡಿದರೆ ಪರಿಸರದ ಕ್ರಿಯಾಶೀಲತೆ,ಪಕ್ಷಿಗಳ ಕುತೂಹಲಕರ ಬದುಕು ನಮಗೆ ಅರ್ಥವಾಗುತ್ತದೆ. ಹತ್ತು ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ದೊಡ್ಡ ಎಲೆಯನ್ನು ತೋರಿಸುತ್ತದೆ, ಆ ಎರಡೂ ಎಲೆಯ ತುದಿಗಳು ಗಟ್ಟಿಯಾಗಿ ಹೆಣೆದುಕೊಂಡಿದೆ.ಅದರ ನಡುವೆ ಗೂಡೊಂದು ಇದ್ದು ಅದರೊಳಗೆ ಪಕ್ಷಿಯ ಮೊಟ್ಟೆ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದು ಕೆಲವೇ ಕ್ಷಣದಲ್ಲಿ ಭರ್ಜರಿ ವೀಕ್ಷಣೆ ಪಡೆದಿದೆ.
ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ‘ಕನ್ನಡ’ ಎಂದ ವೆಬ್ ಸೈಟ್: ನೆಟ್ಟಿಗರ ಹೋರಾಟಕ್ಕೆ ಮಣಿದ ಗೂಗಲ್

ಬೆಂಗಳೂರು: ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರವನ್ನು ನೀಡಿದ ವೆಬ್‌ಸೈಟ್, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗೂಗಲ್ ಸರ್ಚ್ ಪೇಜ್‌ನಲ್ಲಿ ಕೆಟ್ಟ ಭಾಷೆ ವಿಚಾರ ಟ್ರೆಂಡ್ ಆಗಿದ್ದು, ಸಾವಿರಾರು ಕನ್ನಡಿಗರ ಪೇಜ್‌ನಲ್ಲಿ ಪ್ರದರ್ಶಿತವಾಗಿದೆ. ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು, ಗೂಗಲ್ ಕೆಲವೇ ಸಮಯದಲ್ಲಿ ಜನರ ಆಕ್ರೋಶಕ್ಕೆ ಮಣಿದು, ಅಲ್ಲಿದ್ದ ಪುಟವನ್ನು ತೆಗೆದುಹಾಕಿದೆ. ಹಾಗೇಯೆ ಈ ಅಸಂಬದ್ಧವನ್ನು ವಿಚಾರವನ್ನು ಜನರು ವಿವಿಧ ಸಾಮಾಜಿಕ ಮಾಧ್ಯಮ […]
ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೊರೆ ಹೋದ ನಟಿ ಜೂಹಿ ಚಾವ್ಲ: ಕಾರಣವೇನು ಗೊತ್ತಾ?

ನವದೆಹಲಿ:5 ಜಿ ತರಂಗಾಂತರಗಳಿಂದ ಮನುಷ್ಯನ ಆರೋಗ್ಯದ ಮೇಲೆಯೂ ಸೇರಿದಂತೆ ಇಡೀ ದೇಶದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆಯೂ ಹಾನಿಯಾಗಲಿದೆ. ಜೀವ ವೈವಿದ್ಯಗಳಿಗೂ 5 ಜಿ ಮಾರಕ ಎನ್ನುವ ಮಾಹಿತಿಗಳು ತಜ್ಞರುಗಳಿಂದ ಕೇಳೀ ಬರುತ್ತಿರುವ ಬೆನ್ನಲ್ಲೇ ಇದೀಗ ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. 5 ಜಿ ತಂತ್ರಜ್ಞಾನ ಜಾರಿಯಾದಲ್ಲಿ ಅದರಿಂದ ಈಗಿರುವ ವಿಕರಣಗಳಿಗಿಂತ 10-100 ಪಟ್ಟು ಹೆಚ್ಚಿನ ಆರ್ […]