HomeTrendingಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ 'ಕನ್ನಡ' ಎಂದ ವೆಬ್ ಸೈಟ್: ನೆಟ್ಟಿಗರ...

ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ‘ಕನ್ನಡ’ ಎಂದ ವೆಬ್ ಸೈಟ್: ನೆಟ್ಟಿಗರ ಹೋರಾಟಕ್ಕೆ ಮಣಿದ ಗೂಗಲ್

ಬೆಂಗಳೂರು: ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರವನ್ನು ನೀಡಿದ ವೆಬ್‌ಸೈಟ್, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಗೂಗಲ್ ಸರ್ಚ್ ಪೇಜ್‌ನಲ್ಲಿ ಕೆಟ್ಟ ಭಾಷೆ ವಿಚಾರ ಟ್ರೆಂಡ್ ಆಗಿದ್ದು, ಸಾವಿರಾರು ಕನ್ನಡಿಗರ ಪೇಜ್‌ನಲ್ಲಿ ಪ್ರದರ್ಶಿತವಾಗಿದೆ. ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು, ಗೂಗಲ್ ಕೆಲವೇ ಸಮಯದಲ್ಲಿ ಜನರ ಆಕ್ರೋಶಕ್ಕೆ ಮಣಿದು, ಅಲ್ಲಿದ್ದ ಪುಟವನ್ನು ತೆಗೆದುಹಾಕಿದೆ.

ಹಾಗೇಯೆ ಈ ಅಸಂಬದ್ಧವನ್ನು ವಿಚಾರವನ್ನು ಜನರು ವಿವಿಧ ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ಖಂಡಿಸಿದ್ದು, ಪುಟವನ್ನು ರಿಪೋರ್ಟ್ ಮಾಡುವ ವಿಧಾನವನ್ನು ಕಿರು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ಇದರ ಪರಿಣಾಮವಾಗಿ ಗೂಗಲ್, ತನ್ನ ಸರ್ಚ್ ಪುಟದಿಂದ debtconsolidationsquad.com ವೆಬ್ ತಾಣವನ್ನೇ ತೆಗೆದುಹಾಕಿದೆ.

error: Content is protected !!