HomeTrendingಜೂ.14: ವಿಶ್ವಸಂಸ್ಥೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಜೂ.14: ವಿಶ್ವಸಂಸ್ಥೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಜೂನ್‌ 14ರಂದು ನಡೆಯಲಿರುವ ವಿಶ್ವಸಂಸ್ಥೆಯ ವರ್ಚುವಲ್ ವಿಧಾನದ ಮೂಲಕ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣಿನ ಗುಣಮಟ್ಟ ನಾಶ, ಮರುಭೂಮೀಕರಣ ಹಾಗೂ ಬರ ಪರಿಸ್ಥಿತಿ ಕುರಿತು ಮಾತನಾಡಲಿದ್ದಾರೆ.

ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್‌ ಬೊಜ್ಕಿರ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು,
ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮೀನಾ ಮೊಹಮ್ಮದ್‌, ಯುಎನ್‌ಸಿಸಿಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಇಬ್ರಾಹಿಂ ಥಾಯ್ವ್ ಸಹ ಈ ಕಾರ್ಯಕ್ರಮವನ್ನು ಉದ್ಧೇಶಿಸಿ ವಿಚಾರ ಮಂಡನೆ ಮಾಡುವರು.

error: Content is protected !!