ಜೂನ್ 30 ರಿಂದ ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭ

ಜಮ್ಮು: ಎರಡು ವರ್ಷಗಳ ಅಂತರದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ, ವಾರ್ಷಿಕ ಅಮರನಾಥ ಯಾತ್ರೆಯು ಈ ತಿಂಗಳ 30 ರಂದು ಪ್ರಾರಂಭವಾಗಲಿದೆ. ಈ ವರ್ಷ ಯಾತ್ರೆಯನ್ನು ಸುಗಮವಾಗಿ ನಡೆಸಲು ವ್ಯಾಪಕ ಭದ್ರತೆ ಮತ್ತು ಇತರ ಅಗತ್ಯ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ. ಕಮಿಷನರ್ ಕಾರ್ಯದರ್ಶಿ ಶೇಖ್ ಫಯಾಜ್ ಮತ್ತು ಪ್ರವಾಸೋದ್ಯಮ ಕಾರ್ಯದರ್ಶಿ ಸರ್ಮದ್ ಹಫೀಜ್ ಮಂಗಳವಾರದಂದು ಗಂಡರ್ಬಾಲ್ ಜಿಲ್ಲೆಯ ಸೋನಾಮಾರ್ಗ್‌ಗೆ ಭೇಟಿ ನೀಡಿ, ಗುರುವಾರದಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಸುಗಮವಾಗಿ ನಡೆಸಲು ಸರ್ಕಾರಿ ಇಲಾಖೆಗಳು ಮತ್ತು ಸೇವಾ ಪೂರೈಕೆದಾರರು ಕೈಗೊಂಡಿರುವ […]

ವಿಶ್ವ ನಾಯಕರಿಗೆ ಭಾರತೀಯ ಸಂಸ್ಕೃತಿಯ ವಿಧ ವಿಧ ಕಲಾಕೃತಿ ಉಡುಗರೆ ನೀಡಿದ ಪ್ರಧಾನಿ ಮೋದಿ

ಜರ್ಮನಿಯ ಜಿ-7 ಶೃಂಗ ಸಭೆಯಲ್ಲಿ ಪಾಲ್ಗೊತ್ತಿರುವ ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಉತ್ತರ ಪ್ರದೇಶದ ನಿಜಾಮಾಬಾದ್‌ನ ಕಪ್ಪು ಮಡಿಕೆಗಳನ್ನು, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ಛತ್ತೀಸ್‌ಗಢದಿಂದ ರಾಮಾಯಣ ಥೀಮ್‌ನೊಂದಿಗೆ ಡೋಕ್ರಾ ಕಲಾಕೃತಿಯನ್ನು ಮತ್ತು ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್‌ಗೆ ನಂದಿಯ ಮೂರ್ತಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಯುಪಿಯ ಲಕ್ನೋದಿಂದ ಜರ್ದೋಜಿ ಬಾಕ್ಸ್‌ನಲ್ಲಿ ಇತ್ತರ್ ಬಾಟಲಿ, ಯುಪಿಯ ಬುಲಂದ್‌ಶಹರ್‌ನಿಂದ ಯುಕೆ ಪಿಎಂ ಬೋರಿಸ್ ಜಾನ್ಸನ್‌ಗೆ ಪ್ಲಾಟಿನಂ ಬಣ್ಣದ ಕೈಯಿಂದ […]

ಎಂಟು ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

ನವದೆಹಲಿ: ಎಂಟು ಮಂದಿ ಪ್ರಯಾಣಿಸಬಹುದಾದ ಮೋಟಾರು ವಾಹನಗಳ ಕಾರು ತಯಾರಕರು ಕನಿಷ್ಠ ಆರು ಏರ್‌ ಬ್ಯಾಗ್‌ ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಇಂಟೆಲ್ ಇಂಡಿಯಾ’ಸ್ ಸೇಫ್ಟಿ ಪಯೋನಿಯರ್ಸ್ ಕಾನ್ಫರೆನ್ಸ್ 2022’ ನಲ್ಲಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ದೇಶಾದ್ಯಂತ ಐದು ಲಕ್ಷ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ಹೇಳಿದರು. ಏರ್‌ಬ್ಯಾಗ್ ಎನ್ನುವುದು ವಾಹನದ ಪ್ರಯಾಣಿಕರ-ಸಂಯಮ ವ್ಯವಸ್ಥೆಯಾಗಿದ್ದು, ಘರ್ಷಣೆಯ ಸಮಯದಲ್ಲಿ ಚಾಲಕ ಮತ್ತು […]

ರಬಿ ಋತುವಿನಲ್ಲಿ 187 ಲಕ್ಷ ಮೆಟ್ರಿಕ್ ಟನ್ ಗೋಧಿ, 860 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಿಸಿದ ಸರಕಾರ

ನವದೆಹಲಿ: ರಬಿ ಮಾರುಕಟ್ಟೆ ಋತು 2022-23 ರಲ್ಲಿ ಸರಕಾರವು ಇದುವರೆಗೆ 187 ಲಕ್ಷ 86 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಿದೆ. ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 37 ಸಾವಿರದ ಎಂಟುನೂರ ಐವತ್ತೆರಡು ಕೋಟಿಗೂ ಹೆಚ್ಚಾಗಿದ್ದು, ಸುಮಾರು 17 ಲಕ್ಷ 85 ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಖಾರಿಫ್ ಬೆಳೆ 755 ಲಕ್ಷ ಮೆಟ್ರಿಕ್ ಟನ್ ಮತ್ತು ರಬಿ ಬೆಳೆ 105 ಲಕ್ಷ ಮೆಟ್ರಿಕ್ ಟನ್ ಸೇರಿದಂತೆ 860 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು […]

ಕೇಂದ್ರ ಸರಕಾರದಿಂದ “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಯೋಜನೆ: ಮನ್ ಸುಖ್ ಮಾಂಡವೀಯಾ

ನವದೆಹಲಿ: ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಯಾವುದೇ ಸಮಯದಲ್ಲಿ ದೇಶದಲ್ಲಿ ಎಲ್ಲಿ ಬೇಕಾದರೂ ಚಿಕಿತ್ಸೆಗೊಳಗಾಗಲು ಕೇಂದ್ರ ಸಾರಕಾರವು “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಕಾರ್ಯಕ್ರಮವನ್ನು ಹೊರತರಲಿದೆ ಎಂದು ಆರೋಗ್ಯ ಸಚಿವ ಡಾ.ಮನ್ ಸುಖ್ ಮಾಂಡವಿಯಾ ಹೇಳಿದ್ದಾರೆ. ಮರೀನಾ ಬೀಚ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಆಯೋಜಿಸಿದ್ದ ಸೈಕಲ್ ರಾಲಿಯಲ್ಲಿ ಡಾ ಮನ್ಸುಖ್ ಮಾಂಡವಿಯಾ ಭಾಗವಹಿಸಿದ್ದರು. ಆಬಳಿಕ ನಗರದ ತಮಿಳುನಾಡು ಸರಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ರೊಬೊಟಿಕ್ ಸರ್ಜರಿ ಸೌಲಭ್ಯ ಮತ್ತು ಆರಂಭಿಕ ಗರ್ಭಧಾರಣೆಯ ಅಸಂಗತತೆಗಳ ತಪಾಸಣೆ ಕೇಂದ್ರವನ್ನು ಅವರು […]