ಎಂಟು ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

ನವದೆಹಲಿ: ಎಂಟು ಮಂದಿ ಪ್ರಯಾಣಿಸಬಹುದಾದ ಮೋಟಾರು ವಾಹನಗಳ ಕಾರು ತಯಾರಕರು ಕನಿಷ್ಠ ಆರು ಏರ್‌ ಬ್ಯಾಗ್‌ ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

‘ಇಂಟೆಲ್ ಇಂಡಿಯಾ’ಸ್ ಸೇಫ್ಟಿ ಪಯೋನಿಯರ್ಸ್ ಕಾನ್ಫರೆನ್ಸ್ 2022’ ನಲ್ಲಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ದೇಶಾದ್ಯಂತ ಐದು ಲಕ್ಷ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ಹೇಳಿದರು. ಏರ್‌ಬ್ಯಾಗ್ ಎನ್ನುವುದು ವಾಹನದ ಪ್ರಯಾಣಿಕರ-ಸಂಯಮ ವ್ಯವಸ್ಥೆಯಾಗಿದ್ದು, ಘರ್ಷಣೆಯ ಸಮಯದಲ್ಲಿ ಚಾಲಕ ಮತ್ತು ವಾಹನದ ಡ್ಯಾಶ್‌ಬೋರ್ಡ್ ನಡುವೆ ಮಧ್ಯ ಬರುವುದರಿಂದಾಗಿ ಗಂಭೀರವಾದ ಗಾಯಗಳಾಗುವುದು ತಪ್ಪುತ್ತದೆ.

ಆಟೋಮೊಬೈಲ್ ಉದ್ಯಮ ಸೇರಿದಂತೆ ಎಲ್ಲಾ ಪಾಲುದಾರರಿಂದ ಸಹಾಯ ಕೇಳಿರುವ ಎಂದ ಗಡ್ಕರಿ, ಜನವರಿಯಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಪಾರ್ಶ್ವ ಪ್ರಭಾವದ ವಿರುದ್ಧ ಮೋಟಾರು ವಾಹನಗಳ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ (CMVR), 1989 ಅನ್ನು ತಿದ್ದುಪಡಿ ಮಾಡುವ ಮೂಲಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿತ್ತು, ಅದರಂತೆ ಈಗ ಎಂಟು ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.