ಜೂನ್ 30 ರಿಂದ ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭ

ಜಮ್ಮು: ಎರಡು ವರ್ಷಗಳ ಅಂತರದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ, ವಾರ್ಷಿಕ ಅಮರನಾಥ ಯಾತ್ರೆಯು ಈ ತಿಂಗಳ 30 ರಂದು ಪ್ರಾರಂಭವಾಗಲಿದೆ. ಈ ವರ್ಷ ಯಾತ್ರೆಯನ್ನು ಸುಗಮವಾಗಿ ನಡೆಸಲು ವ್ಯಾಪಕ ಭದ್ರತೆ ಮತ್ತು ಇತರ ಅಗತ್ಯ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ.

ಕಮಿಷನರ್ ಕಾರ್ಯದರ್ಶಿ ಶೇಖ್ ಫಯಾಜ್ ಮತ್ತು ಪ್ರವಾಸೋದ್ಯಮ ಕಾರ್ಯದರ್ಶಿ ಸರ್ಮದ್ ಹಫೀಜ್ ಮಂಗಳವಾರದಂದು ಗಂಡರ್ಬಾಲ್ ಜಿಲ್ಲೆಯ ಸೋನಾಮಾರ್ಗ್‌ಗೆ ಭೇಟಿ ನೀಡಿ, ಗುರುವಾರದಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಸುಗಮವಾಗಿ ನಡೆಸಲು ಸರ್ಕಾರಿ ಇಲಾಖೆಗಳು ಮತ್ತು ಸೇವಾ ಪೂರೈಕೆದಾರರು ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಸೇವಾ ಪೂರೈಕೆದಾರರ ವ್ಯವಸ್ಥೆಗಳನ್ನು ಶ್ಲಾಘಿಸಿದ ಕಾರ್ಯದರ್ಶಿಗಳು, ಪ್ರವಾಸಿಗರು ಮತ್ತು ಯಾತ್ರಿಗಳನ್ನು ದೀರ್ಘಕಾಲದಿಂದಲೂ ತೆರೆದ ತೋಳುಗಳಿಂದ ಸ್ವಾಗತಿಸುವ ಸ್ಥಳೀಯ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಮರನಾಥ ಯಾತ್ರಾ ಮಾರ್ಗದಲ್ಲಿ ತೀರ್ಥಯಾತ್ರಿಗಳ ಊಟದ ವ್ಯವಸ್ಥೆಗಾಗಿ ಈಗಾಗಲೇ ಲಂಗರ್ ವ್ಯವಸ್ಥೆಗಳನ್ನು ಏರ್ಪಾಟು ಮಾಡಲಾಗಿದೆ. ಭಯೋತ್ಪಾದಕರಿಂದ ಯಾತ್ರಾರ್ಥಿಗಳ ಮೇಲೆ ಹಲ್ಲೆಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಕಣಿವೆಯಲ್ಲಿ ಭಾರತೀಯ ಸೈನಿಕರಿಂದ ಉಗ್ರರ ಬೇಟೆ ಮುಂದುವರಿದಿದೆ.

ಜಮ್ಮು ಮತ್ತು ಕಾಶ್ಮೀರ ಎಲ್ ಜಿ ಮನೋಜ್ ಸಿನ್ಹಾ, ಅಮರನಾಥ ಯಾತ್ರೆಯ ಮೊದಲ ಬ್ಯಾಚ್ ಅನ್ನು ಜಮ್ಮು ಬೇಸ್ ಕ್ಯಾಂಪ್ ನಿಂದ ಬೀಳ್ಕೊಟ್ಟು ಯಾತ್ರೆಗೆ ಅಧಿಕೃತ ಚಾಲನೆ ನೀಡಿದ್ದಾರೆ