ಏಕನಾಥ್ ಶಿಂಧೆಗೆ ‘ಮಹಾ’ ಕಮಾನು: ಶಿವಸೇನೆಗೆ ಬೆಂಬಲ ನೀಡಲಿದೆ ಬಿಜೆಪಿ

ಮುಂಬಯಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾದ ಫಡ್ನವಿಸ್ ಮತ್ತು ಶಿಂಧೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬಿಜೆಪಿ ಬೆಂಬಲ ನೀಡಲಿದ್ದು, ಶಿಂಧೆ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಸಂಜೆ 7.30 ಕ್ಕೆ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಶಿಂಧೆ ಜೊತೆಗಿದ್ದ ಶಾಸಕರು […]
ಮಹಾರಾಷ್ಟ್ರದಲ್ಲಿ ಏಕ್ ಬಾರ್ ಫಿರ್ ದೇವೇಂದ್ರ ಸರಕಾರ್? ಮುದುಡಿದ ತಾವರೆ ಅರಳಿಸುವರೆ ಶಿಂಧೆ?

ಮುಂಬಯಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಪತನವಾಗಿ ಶಿವಸೇನಾ ನಾಯಕ ಉದ್ದವ್ ಠಾಕ್ರೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ದೇವೇಂದ್ರ ಫಡ್ನವಿಸ್ ಅವರ ನಾಯಕತ್ವದ ಬಿಜೆಪಿ ಏಕೈಕ ದೊಡ್ಡ ಪಕ್ಷ ವಾಗಿದ್ದು, ಸರ್ಕಾರ ರಚಿಸಲು ಹಕ್ಕು ಸಾಧಿಸಬಹುದು. ಬಿಜೆಪಿ ಬಳಿ 106 ಶಾಸಕರಿದ್ದು, ಮ್ಯಾಜಿಕ್ ಫಿಗರ್ 144 ರಿಂದ ತುಸುವೆ ದೂರವಿದೆ. ಸರಕಾರ ರಚಿಸಲು ಬಹುಮತ ಸಾಬೀತು ಪಡಿಸುವ ಅಗತ್ಯವಿದ್ದು, 156 ಶಾಸಕರ ಬೆಂಬಲವಿದೆ ಎನ್ನಲಾಗಿದೆ. ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ […]
ಆಜಾದಿ ಕಾ ಅಮೃತ್ ಮಹೋತ್ಸವ್: ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿರುವ ಯುಕೆ

ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಿಂದ ಬ್ರಿಟನ್‌ನಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ನೀಡಲು ಯುಕೆ ಸರ್ಕಾರವು ನಿರ್ಧರಿಸಿದ್ದು, ಭಾರತದಲ್ಲಿನ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ನಡೆಸಿದೆ. ಇಲ್ಲಿಯವರೆಗೆ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ನೀಡಲಾದ ಅತಿ ಹೆಚ್ಚು ಸಂಖ್ಯೆಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನ ಇದಾಗಿದೆ ಎಂದು ಬ್ರಿಟಿಷ್ ಹೈ ಕಮಿಷನ್ ಹೇಳಿದೆ. ಎಚ್‌ಎಸ್‌ಬಿಸಿ, ಪಿಯರ್ಸನ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ ಮುಂತಾದ ಕಂಪನಿಗಳು […]
ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ 28% ತೆರಿಗೆ: ವರದಿಯನ್ನು ಮುಂದೂಡಿದ ಜಿ.ಎಸ್.ಟಿ ಕೌನ್ಸಿಲ್

ನವದೆಹಲಿ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕಾರ್ಯವಿಧಾನದ ವಿಸ್ತರಣೆ ಮತ್ತು ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಗರಿಷ್ಠ 28 ಪ್ರತಿಶತ ತೆರಿಗೆ ದರದ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು, ಕುದುರೆ ರೇಸಿಂಗ್ ಕುರಿತು ಸಚಿವರ ಗುಂಪು ವರದಿ(ಜಿಒಎಂ)ಯನ್ನು ಮುಂದೂಡಲಾಗಿದೆ. ಜಿಒಎಂ ಈಗ 15 ದಿನಗಳಲ್ಲಿ ನಿಯಮಗಳ ಕುರಿತು ಸಲಹೆಗಳನ್ನು ಸಲ್ಲಿಸಲಿದೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಜಿಒಎಂ, ಆನ್‌ಲೈನ್ ಗೇಮಿಂಗ್‌ಗೆ ಆಟಗಾರರು ಆಟದಲ್ಲಿ ಭಾಗವಹಿಸುವಾಗ ಪಾವತಿಸುವ ಸ್ಪರ್ಧೆಯ ಪ್ರವೇಶ […]
ಉದಯ್‌ಪುರ ಟೈಲರ್ ಹತ್ಯೆ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲು ಗೃಹ ಸಚಿವಾಲಯದ ನಿರ್ದೇಶನ

ಉದಯಪುರ: ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ನ ಭೀಕರ ಹತ್ಯೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆಗಳನ್ನು ಬೆಂಬಲಿಸಿದ್ದಕ್ಕಾಗಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಮಂಗಳವಾರದಂದು ಅಂಗಡಿಯಲ್ಲಿದ್ದ ಕನ್ಹಯ್ಯಾನ ಶಿರಚ್ಛೇದ ಮಾಡಿದ್ದಲ್ಲದೆ ಈ ಬಗ್ಗೆ ವೀಡಿಯೋ ಮಾದಿ ಹರಿಬಿಟ್ಟು, ದೇಶದ ಪ್ರಧಾನಿ ಮೋದಿಗೂ ಇದೇ ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿದ್ದಾರೆ. ರಿಯಾಜ್ ಅಖ್ತರ್ ಮತ್ತು ಘೋಸ್ ಮೊಹಮ್ಮದ್ ತಮ್ಮ ಭೀಬತ್ಸ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ […]