ಮಲ್ಲಿಕಾರ್ಜುನ ಖರ್ಗೆ ಅವರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ: ಶಶಿ ತರೂರ್

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಅವರು ಈಗಿರುವ ಪದ್ಧತಿಯನ್ನೇ ಮುಂದುವರಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣಾ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ವಾದವನ್ನು ಮಂಡಿಸಿದ ಶಶಿ ತರೂರ್ ತಾವು ಆಯ್ಕೆಯಾದರೆ ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುವುದಾಗಿ ಹೇಳಿದ್ದಾರೆ. ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ. ಇದು ನಮ್ಮ ಪಕ್ಷದ ಭವಿಷ್ಯದ ಸಮೀಕ್ಷೆ. ಕಾಂಗ್ರೆಸ್ ಪಕ್ಷದ ಪ್ರಮುಖ ಮೂವರು ನಾಯಕರಲ್ಲಿ […]
ಭಾರತದ ಕೂಟನೀತಿಗೆ ಜಯ: ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯ ವಾಪಾಸ್ ಪಡೆದ ಚೀನಾ

ವಿಯೆನ್ನಾ: ಶನಿವಾರ ವಿಯೆನ್ನಾದಲ್ಲಿ ನಡೆದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸಾಮಾನ್ಯ ಸಮ್ಮೇಳನದಲ್ಲಿ ಅಮೇರಿಕಾ-ಯುಕೆ-ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ಒಪ್ಪಂದದ ವಿರುದ್ಧ ನಿರ್ಣಯವನ್ನು ಅಂಗೀಕರಿಸುವ ಚೀನಾದ ಪ್ರಯತ್ನವನ್ನು ತಡೆಯುವಲ್ಲಿ ಭಾರತದ ಚತುರ ರಾಜತಾಂತ್ರಿಕತೆಯು ನೆರವಾಗಿದೆ. ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾಕ್ಕೆ ಒದಗಿಸುವ ಎ.ಯುಕೆ.ಯುಎಸ್ ಸಂಯುಕ್ತ ಸಂಘಟೆನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಚೀನಾ ಪ್ರಯತ್ನಿಸುತ್ತಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯಕ್ಕೆ ಬಹುಮತದ ಬೆಂಬಲ ಸಿಗದಂತೆ ನೋಡಿಕೊಳ್ಳಲು ಭಾರತವು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಅನೇಕ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ […]
ಕೇರಳ ಹೈಕೋರ್ಟ್ ನಿಂದ ಪಿಎಫ್‌ಐ ಗೆ ತಪರಾಕಿ: ಬಂದ್ ವೇಳೆಯ ಹಾನಿಗಾಗಿ 5.20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ

ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರ ಬಂಧನವನ್ನು ವಿರೋಧಿಸಿ ಸೆಪ್ಟೆಂಬರ್ 23 ರಂದು ಕರೆ ನೀಡಿದ್ದ ಬಂದ್ ವೇಳೆ ಉಂಟಾದ ಹಾನಿಗೆ ಪರಿಹಾರವಾಗಿ 5.20 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಕೇರಳ ಹೈಕೋರ್ಟ್ ಗುರುವಾರ ಆದೇಶಿಸಿದೆ. ಈ ಮೊತ್ತವನ್ನು 2 ವಾರಗಳಲ್ಲಿ ಠೇವಣಿ ಮಾಡುವಂತೆ ಕೋರ್ಟ್ ತಾಕೀತು ಮಾಡಿದೆ. ವಿಭಾಗೀಯ ಪೀಠ ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರ ನಂಬಿಯಾರ್ ಮತ್ತು ಸಿ.ಪಿ.ಮೊಹಮ್ಮದ್ ನಿಯಾಸ್ ಅವರು ಪಿಎಫ್‌ಐ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಪರಿಹಾರವಿಲ್ಲದೆ ಜಾಮೀನು […]
ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಮುಂದಿನ ಸಿಡಿಎಸ್

ನವದೆಹಲಿ: ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಮುಂದಿನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ನೇಮಿಸಲಾಗಿದೆ ಎಂದು ಭಾರತ ಸರ್ಕಾರ ಬುಧವಾರ ತಿಳಿಸಿದೆ. ಅವರು ಭಾರತ ಸರ್ಕಾರದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಡಿಸೆಂಬರ್ 2021 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಮರಣದ ಒಂಬತ್ತು ತಿಂಗಳ ನಂತರ ಚೌಹಾಣ್ ಅವರನ್ನು ಸಿಡಿಎಸ್ ಆಗಿ ನೇಮಿಸಲಾಗಿದೆ. ಚೌಹಾಣ್ ರವರು ನ್ಯಾಷನಲ್ […]
ಇ-ಕಾಮರ್ಸ್ ಡೆಲಿವರಿ ವಂಚನೆ: ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಗಳ ಬದಲಿಗೆ ಬರುತ್ತಿವೆ ಡಿಟರ್ಜೆಂಟ್ ಸೋಪುಗಳು!

ಮುಂಬೈ: ದೇಶದಲ್ಲಿ ಹಬ್ಬದ ವಾತಾವರವಿದ್ದು, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಂತಹ ಇ ಕಾಮರ್ಸ್ ಕಂಪನಿಗಳು ಎಲ್ಲಾ ಉತನ್ನಗಳನ್ನು ರಿಯಾಯತಿ ದರದಲ್ಲಿ ಮಾರುತ್ತಿದ್ದು, ಈ ಕಂಪನಿಗಳ ಮೂಲಕ ಉತ್ಪನ್ನಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ಉತ್ಪನ್ನಗಳ ಬದಲಿಗೆ ಡಿಟರ್ಜೆಂಟ್ ಸೂಪುಗಳು, ಕಲ್ಲು, ಬಟಾಟೆ ಮುಂತಾದ ವಸ್ತುಗಳು ಪೂರೈಕೆಯಾಗುತ್ತಿವೆ ಎಂದು ಮಾಧ್ಯಮ ವರದಿಗಳಾಗಿವೆ. ಮುಂಬೈನ ಸಯನ್ ನಿವಾಸಿಯೊಬ್ಬರು ಇತ್ತೀಚೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ರೂ 54,999 ಮೌಲ್ಯದ ವನ್ ಪ್ಲಸ್ 10ಟಿ 5ಜಿ ಸ್ಮಾರ್ಟ್ ಫೋನ್ ಅನ್ನು ಆರ್ಡರ್ […]