ಭಾರತದ ಕೂಟನೀತಿಗೆ ಜಯ: ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯ ವಾಪಾಸ್ ಪಡೆದ ಚೀನಾ

ವಿಯೆನ್ನಾ: ಶನಿವಾರ ವಿಯೆನ್ನಾದಲ್ಲಿ ನಡೆದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸಾಮಾನ್ಯ ಸಮ್ಮೇಳನದಲ್ಲಿ ಅಮೇರಿಕಾ-ಯುಕೆ-ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ಒಪ್ಪಂದದ ವಿರುದ್ಧ ನಿರ್ಣಯವನ್ನು ಅಂಗೀಕರಿಸುವ ಚೀನಾದ ಪ್ರಯತ್ನವನ್ನು ತಡೆಯುವಲ್ಲಿ ಭಾರತದ ಚತುರ ರಾಜತಾಂತ್ರಿಕತೆಯು ನೆರವಾಗಿದೆ. ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾಕ್ಕೆ ಒದಗಿಸುವ ಎ.ಯುಕೆ.ಯುಎಸ್ ಸಂಯುಕ್ತ ಸಂಘಟೆನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಚೀನಾ ಪ್ರಯತ್ನಿಸುತ್ತಿತ್ತು.

ಆದರೆ ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯಕ್ಕೆ ಬಹುಮತದ ಬೆಂಬಲ ಸಿಗದಂತೆ ನೋಡಿಕೊಳ್ಳಲು ಭಾರತವು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಅನೇಕ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದೆ ಮತ್ತು ಜಾಗತಿಕ ಮಂಚದಲ್ಲಿ ಚೀನಾವನ್ನು ಏಕಾಂಗಿಯನ್ನಾಗಿಸಿ ಮುಖಭಂಗವಾಗುವಂತೆ ಮಾಡಿದೆ. ಭಾರತವು ಉಪಕ್ರಮದ ವಸ್ತುನಿಷ್ಠ ದೃಷ್ಟಿಕೋನವನ್ನು ತೆಗೆದುಕೊಂಡಿದ್ದು, ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ತಾಂತ್ರಿಕ ಮೌಲ್ಯಮಾಪನದ ಸದೃಢತೆಯನ್ನು ಗುರುತಿಸಿದೆ. ಭಾರತದ ಪಾತ್ರವು ಚೀನಾದ ಪ್ರಸ್ತಾಪದ ಬಗ್ಗೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಲು ಅನೇಕ ಸಣ್ಣ ದೇಶಗಳಿಗೆ ಸಹಾಯ ಮಾಡಿದೆ.

ತನ್ನ ನಿರ್ಣಯಕ್ಕೆ ಬಹುಮತದ ಬೆಂಬಲ ಸಿಗುವುದಿಲ್ಲ ಎಂದು ಮನಗಂಡ ಚೀನಾ ತನ್ನ ಕರಡು ನಿರ್ಣಯವನ್ನು ಹಿಂತೆಗೆದುಕೊಂಡಿದೆ. ಭಾರತದ ಚತುರ ಮತ್ತು ಪ್ರಭಾವಶಾಲಿ ರಾಜತಾಂತ್ರಿಕತೆಯನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸದಸ್ಯ ರಾಷ್ಟ್ರಗಳು, ವಿಶೇಷವಾಗಿ ಎ.ಯುಕೆ.ಯುಎಸ್ ಪಾಲುದಾರರು ಬಹುವಾಗಿ ಮೆಚ್ಚಿದ್ದಾರೆ ಎಂದು ಎಐಆರ್ ವರದಿ ಮಾಡಿದೆ.