ಅಪ್ಪಾ ಅಂದ್ರೆ ಆಕಾಶ: ಸಾಧಿಕ್ ಬರೆದ ಬರಹ

“ಅಪ್ಪ” ಈ ಶಬ್ಧದಲ್ಲೆ ಅದೆಂಥಾ ಗತ್ತು ಗಾಂಭೀರ್ಯ, ಅಪ್ಪ ಅನ್ನುವ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಎನಿಸುವ ಶಿಸ್ತು. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪ ಅಂದರೆ, ಧೈರ್ಯ, ವಿಶ್ವಾಸ, ಸಹನೆ, ನಗು. ನಿಸ್ಸಂಶಯವಾಗಿ ತಂದೆಯಾಗಿರುವವನು ತನ್ನ ಮಕ್ಕಳ ಸಾಧನೆಯ ಮೂಲ, ಹೆಮ್ಮೆ ಮತ್ತು ಸ್ಪೂರ್ತಿ, ಸಮಾಜದಲ್ಲಿ ಹೇಗೆ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂದು ಕಲಿಸಿಕೊಟ್ಟ ಗುರು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಜೀವನವನ್ನೇ ತನ್ನ ಮಕ್ಕಳಿಗೆ ಮುಡುಪಾಗಿಟ್ಟ ವ್ಯಕ್ತಿ. ತಂದೆಯಾದವನು ತಾನು ವಿದ್ಯೆ ಕಲಿಯದಿದ್ದರು, ತನ್ನ […]

ಸಿಂಪಲ್ಲಾಗೊಂದು ಕ್ರಶ್ ಸ್ಟೋರಿ: ಇಫಾಜ್ ಬರೆದ LOVE ಲಿ ಬರಹ

ಈ ಪ್ರೀತಿ ಎಂಬುದು ಒಂತರಾ ಮಾಯೆ, ಅದು ಹೊತ್ತು-ಗೊತ್ತು, ಜಾತಿ-ಧರ್ಮ ನೋಡದೆ ಹುಟ್ಟೋ ಪ್ರೇಮಲೋಕ. ಅಂದೊಮ್ಮೆ ಅವಳ ಕಣ್ಣು, ನಗು, ಅದರ ಜೊತೆಗೆ ಗುಲಾಬಿಯೇ ನಾಚಿಕೊಳ್ಳುವಂಹ  ತುಟಿ, ಕಣ್ಣಿನ ಮೇಲಿನ ಕಪ್ಪು ನೋಡಿದಾಗೆಲ್ಲ ಮನವೆಲ್ಲ ಕೆಂಪಾಗುವ ಜೊತೆಗೆ, ಅಪ್ಸರೆ ನಾಚುವಂತೆ ಇದ್ದ ಅವಳ ನಡೆ, ಇದನ್ನೆಲ್ಲ ನೋಡಿ ನನ್ನ ಮನಸ್ಸು ಅವಳ ಹಿಂದೆ ಹೋಗುವಂತೆ ಮಾಡಿತು ಎಂದು ನೀವಂದುಕೊಂಡರೆ ಅದು ಸುಳ್ಳು. ಈಗಿನ ಕಾಲದಲ್ಲಿ ಸ್ಟೈಲ್ ಅನ್ನೋದು ರಕ್ತದಲ್ಲಿಯೇ ಹರಿಯತೊಡಗಿದೆ. ಇಂತಹ ಸ್ಟೈಲ್ ಗೆಲ್ಲ ಮರಳಾಗೋ ಹುಡುಗ […]

ನನ್ನೆದೆಯ ಕಾದಂಬರಿಯಲಿ ರಾಜ ನೀನು:ಸುಷ್ಮಾ ಬರೆದ ತಣ್ಣನೆಯ ಬರಹ

ಹಾಗೇ ಸುಮ್ಮನೆ ಏನೋ ಗಾಢವಾದ ಯೋಚನೆಯಲ್ಲಿದ್ದ ಮನಸ್ಸಿಗೆ ಎಲ್ಲಿಂದಲೋ ಒಂದು ಸಿಹಿಗಾಳಿ ಸೋಕಿದಂತಾಯಿತು. ಅದೇಕೋ ತಿಳಿಯದು ತುಸು ಮೆಲ್ಲಗೆ ಮನಸು ಹಿಡಿತ ತಪ್ಪಿತು. ಎಲ್ಲಿಂದಲೋ ಮಧುರವಾಗಿ ಹರಿದು ಬಂದ ಇಂಪಾದ ದನಿಯೊಂದು ನನ್ನೆರಡು ಕರ್ಣಗಳಿಗಪ್ಪಳಿಸಿದವು. ಜಾಗ ಬಿಟ್ಟು ಕದಡಲೇ? ಅಥವಾ ಆ ಮಧುರ ಗೀತೆಯ ಅಲ್ಲೇ ಕುಳಿತು ಆಲಿಸಲೇ? ಮನಸ್ಸಲ್ಲಿ ಕಸಿ-ವಿಸಿ, ಗೊಂದಲ.ಈ ವಯಸ್ಸಿನಲ್ಲಿ ಹಾಗೇ ಅಲ್ವಾ, ಮನಸೊಂದು ಚಂಚಲ. ಆ ಧ್ವನಿಯ ಕಾಣಲೇಬೇಕೆಂದು ಕಣ್ಣುಗಳು, ಅದರೆಡೆಗೆ ನಡೆಯಬೇಕು ಎಂದು ಕಾಲುಗಳು, ಮತ್ತೆ ಕೂರಲು ಸಾಧ್ಯವಿಲ್ಲ. ಮನಸು […]

ಪ್ರೀತಿಯ ಅಲೆಗಳು ಹಗುರನೇ ಮೈ ಸೋಕಿದಾಗ: ಪ್ರೀತಿ ಟಿ ಬರೆದ ಒಲವಿನ ಬರಹ

ಮಧ್ಯಾಹ್ನ ಗೆಳತಿಯರೊಂದಿಗೆ  ಪಿ.ಜಿ ಯಿಂದ ತಿರುಗಾಡಲು ಹೊರಟೆ. ಸ್ವಲ್ಪ ದೂರ ಹೋದ ನಂತರ ಪರಿಚಯವಿಲ್ಲದ ಹುಡುಗನ್ನೊಬ್ಬ ನನ್ನ ಮುಂದೆ ಹಾದು ಹೋದ. ಆದರೆ ಆತನನ್ನು ನೋಡಿದ್ದೇ, ಈತ ನನಗೆ ಪರಿಚಯದವನಲ್ವಾ? ಎನ್ನುವ ಭಾವ ನನ್ನಲ್ಲಿ ಮೂಡಿ ಬಿಟ್ಟಿತು. ನಾನು ಆತನನ್ನು ತಿರುಗಿ ತಿರುಗಿ ನೋಡಲಾರಂಭಿಸಿದೆ. ಆತನು  ಕೂಡ ಪರಿಚಯವಿರುವಂತೆ ನೋಡುತ್ತಿದ್ದ. ನಂತರ ಕೆಲವೇ ಕ್ಷಣಗಳಲ್ಲಿ ಬೈಕ್  ಕಾರ್ ಮಧ್ಯದಲ್ಲಿ ಆತ  ಎಲ್ಲಿ ಮರೆಯಾದ ಎಂದು ನನಗೆ  ತಿಳಿಯಲಿಲ್ಲ ,ಆದರೂ ನನ್ನ ಮನಸು  ಆತನನ್ನು  ಹುಡುಕುತ್ತಲೇ ಇತ್ತು. ಈ […]

ಅಂದು ಕಂಡ ಕನಸಿಂದು ನನಸಾಗಿದೆ

ಅಂದು ನನ್ನ ಕನಸಿನ ದಿನಗಳಲ್ಲಿ ಮುಳುಗಿ ಹೋದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಎಲ್ಲಾ ಹುಡುಗಿಯರ ಹಾಗೆಯೇ ನನ್ನ ಮನಸ್ಸಿನಲ್ಲಿಯು ಒಂದು ಆಸೆ ಮೊಳಕೆಯೊಡೆದಿತ್ತು. ನನ್ನ ಜೀವನದಲ್ಲಿ ಬರುವಂತಹ ಸಂಗಾತಿ, ನನ್ನ ಇಷ್ಟಪಡುವ ಜೀವ ಹೇಗಿರಬೇಕೆಂದು ಊಹಿಸಿಕೊಳ್ಳುವ, ಕನಸ್ಸುಗಳನ್ನು ಕಟ್ಟಿಕೊಳ್ಳುವ ಆ ವಯಸ್ಸು. ಹಾಗೆಯೇ ನಾನೂ ಸಹ ಒಂದು ಸುಂದರ ಕನಸನ್ನು ಕಟ್ಟಿದ್ದೆ. ಆ ದಿನಗಳಲ್ಲಿ ಎಷ್ಟು ಯೋಚಿಸಿದರು ಸಾಕಾಗುತ್ತಿರಲಿಲ್ಲ, ದಿನದ ಎಲ್ಲಾ ಕ್ಷಣಗಳನ್ನು ಯೋಚಿಸುವುದಕ್ಕೆ ಮೀಸಲಿಡುತ್ತಿದ್ದೆ. ನನಗೆ ತಿಳಿಯದೆ ನನ್ನಲ್ಲಿ ಬದಲಾವಣೆಯಾಗುತ್ತಿತ್ತು. ಶಾಲೆಗೆ ಹೋದರೂ, ಸ್ನೇಹಿತರ […]