ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತವಾಗಲು ಕಾರಣವೇನು? ನಿಮ್ಮ ಹೃದಯದ ದನಿ ಕೇಳಿಸಿಕೊಳ್ಳಿ…

ಇತ್ತೀಚೆಗೆ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಜಿಮ್ ನಲ್ಲಿ ಇತರ ರೀತಿಯ ತೀವ್ರವಾದ ವ್ಯಾಯಾಮವನ್ನು ಮಾಡುವಾಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚು ಕಂಡುಬರುತ್ತಿವೆ. ವ್ಯಾಯಾಮವು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೃದಯಾಘಾತವನ್ನು ತಡೆಯುತ್ತದೆ ಎಂದು ನಂಬಲಾಗುತ್ತಿದ್ದರೂ ಇದರಿಂದ ಪ್ರತಿಕೂಲ ಪರಿಣಾಮಗಳಾಗುತ್ತಿರುವುದು ಎಲ್ಲರನ್ನೂ ವ್ಯಾಯಾಮದ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ವ್ಯಾಯಮಕ್ಕೂ ಪೂರ್ವದ ಆರೋಗ್ಯ ಸ್ಥಿತಿಯ ನಿರ್ದಿಷ್ಟ ಸಂದರ್ಭಗಳು ಮತ್ತು ವ್ಯಾಯಾಮದ ತೀವ್ರತೆಯು ಸಂದರ್ಭಾನುಸಾರವಾಗಿ ಬದಲಾಗಬಹುದು. ಈ ಸ್ಪಷ್ಟ ವಿರೋಧಾಭಾಸವನ್ನು ವಿವರಿಸಲು ಸಹಾಯ ಮಾಡುವ ಕೆಲವು […]

ಹಗಲಿರುಳೆನ್ನದೆ ಮನುಕುಲದ ಒಳಿತಿಗಾಗಿ ದುಡಿಯುತ್ತಿರುವ ಎಲ್ಲ ವೈದ್ಯರಿಗೂ ಸಲಾಂ…..

“ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೆ ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ” ಎನ್ನುವ ಶ್ಲೋಕವೊಂದಿದೆ. ಮನುಷ್ಯನ ಶರೀರವು ವ್ಯಾಧಿಗ್ರಸ್ತವಾಗಿ ಸಾಯುವ ಸ್ಥಿತಿ ತಲುಪಿದಾಗ ಬದುಕಿಸುವವನು ಭಗವಂತ. ಸಾಕ್ಷಾತ್ ‘ಶ್ರೀಮನ್ನಾರಾಯಣನೇ ವೈದ್ಯ’ ಎಂದು ಉಲ್ಲೇಖಿಸುವ ಶ್ಲೋಕವಿದು. ಇವತ್ತು ಈ ಶ್ಲೋಕವನ್ನು ವೈದ್ಯರಿಗೆ ಅನ್ವರ್ಥವಾಗಿ ಬಳಸಲಾಗುತ್ತದೆ. ಹೇಗೆ ಶ್ರೀಮನ್ನಾರಾಯಣ ಸಾಯುವ ಸ್ಥಿತಿಯಲ್ಲಿರುವವರನ್ನು ಬದುಕಿಸುತ್ತಾನೋ, ಅದೇ ರೀತಿ ವೈದ್ಯರೂ ಕೂಡಾ ತಮ್ಮ ಜೀವದ ಹಂಗು ತೊರೆದು ರೋಗಿಗಳನ್ನು ಬದುಕಿಸುತ್ತಾರೆ ಎನ್ನುವ ಅರ್ಥದಲ್ಲಿ ಈ ಉಕ್ತಿ ಬಹುವಾಗಿ ಬಳಕೆಯಾಗುತ್ತದೆ. ಕೋವಿಡ್ […]

ವೈದ್ಯರ ನಿಸ್ವಾರ್ಥ ಸೇವೆಗೊಂದು ದೊಡ್ಡ ಸಲಾಂ: ಲಾವಣ್ಯ ಬರೆದ ಡಾಕ್ಟರ್ ಡೇ ಸ್ಪೆಷಲ್ ಬರಹ

  ಆರೋಗ್ಯವೇ ಭಾಗ್ಯ ಎನ್ನುವ ಮಾತು ಸರ್ವಕಾಲಿಕವಾದದ್ದು. ಆರೋಗ್ಯವನ್ನು ರಕ್ಷಿಸಿ ರೋಗಿಗಳ ಆರೋಗ್ಯಕ್ಕೆ ಮದ್ದು ನೀಡುವ ವೈದ್ಯರನ್ನು ದೇವರ ರೀತಿಯಲ್ಲಿ ಕಾಣುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಾನವರಾದ ನಾವುಗಳು ದೇವರನ್ನು ಪೂಜಿಸುತ್ತೇವೆ ಮತ್ತು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೇವರ ಶಕ್ತಿ ಪಡೆದು ಕಣ್ಣೆದುರಿಗೆ ನಿಲ್ಲುವ ದೇವರು ಎಂದರೆ ತಪ್ಪಾಗಲಾರದು. ಆದ್ದರಿಂದಲೇ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತು ಅಕ್ಷರಶಃ […]

ಜೀವ ಉಳಿಸೋ ವೈದ್ಯರಿಗೂ ಇವೆ ನೂರಾರು ಒತ್ತಡ: ಡಾ. ಶಫೀಕ್. ಎ ಎಂ ಬರೆದ ಡಾಕ್ಟರ್ ಡೇ ಬರಹ

ಭಾರತದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದು ವೈದ್ಯರನ್ನು ನೆನಪಿಸಿಕೊಳ್ಳುವ ದಿನವಾಗಿರುವುದಲ್ಲದೆ, ವೈಯಕ್ತಿಕವಾಗಿ ಮತ್ತು ಒಂದು ಸಮಾಜವಾಗಿ ನಮಗೆ ವೈದ್ಯರು ಸಲ್ಲಿಸುವ ಎಲ್ಲಾ ಸೇವೆಗಳಿಗೆ ಕೃತಜ್ಞತೆ ಸಲ್ಲಿಸುವಂತಹ ದಿನ ಇದಾಗಿರುತ್ತದೆ. ಆದರೆ, ಅವರು ಕೂಡ ಮನುಷ್ಯರು ಎಂಬುದನ್ನು ನಾವು ಎಷ್ಟು ಬಾರಿ ಅರ್ಥ ಮಾಡಿಕೊಂಡಿದ್ದೇವೆ? ಮತ್ತು ಇತ್ತೀಚೆಗೆ ದೀರ್ಘಕಾಲದ ಕೆಲಸದ ಗಂಟೆಗಳಿಂದ ಮತ್ತು ಸತತವಾಗಿ ಹೆಚ್ಚುತ್ತಿರುವ ರೋಗಿಗಳ ಒತ್ತಡದಿಂದ ವೈದ್ಯರು ತೀವ್ರ ರೀತಿಯಲ್ಲಿ ಭಾವನಾತ್ಮಕವಾಗಿ ಮತ್ತು ತೀವ್ರ ರೀತಿಯಲ್ಲಿ ದೈಹಿಕವಾಗಿ ಸುಸ್ತಿಗೆ ಒಳಗಾಗಿರುವ ಹಲವಾರು […]

5 ಕೋಟಿ ಯೂನಿಟ್‌ಗಳಷ್ಟು ರಕ್ತದ ಅವಶ್ಯಕತೆ ಇರುವ ಭಾರತದಲ್ಲಿ ಪೂರೈಕೆಯಾಗುವುದು 50% ಮಾತ್ರ

ಆರೋಗ್ಯ ಸೇವೆಯಲ್ಲಿ ರಕ್ತ ವರ್ಗಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ತದ ಕೊರತೆ ಕಾಡುತ್ತದೆ. ಭಾರತಕ್ಕೆ ಹಲವಾರು ವೈದ್ಯಕೀಯ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಸುಮಾರು 5 ಕೋಟಿ ಯೂನಿಟ್‌ಗಳಷ್ಟು ರಕ್ತದ ಬೃಹತ್ ಅವಶ್ಯಕತೆ ಇರುತ್ತದೆ. ಪೂರೈಕೆ ಮತ್ತು ಬೇಡಿಕೆಗಳ ನಡುವಿನ ಅಂತರ ಬಹುತೇಕ ಅರ್ಧದಷ್ಟು ಇದೆ. ವಾಸ್ತವವಾಗಿ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ದೇಶದ ಯಾವುದೋ ಒಂದು ಸ್ಥಳದಲ್ಲಿ ರಕ್ತ ವರ್ಗಾವಣೆಯ ಅವಶ್ಯಕತೆ ಇರುತ್ತದೆ. ಅಂದರೆ ಪ್ರತಿ ದಿನ 35,000ಕ್ಕೂ ಹೆಚ್ಚಿನ ರಕ್ತದಾನಗಳ ಅಗತ್ಯವಿರುತ್ತದೆ ಎಂದು […]