ನಟ ಜಗ್ಗೇ​ಶ್​ಗೆ 6 ವಾರ ದಿಗ್ಬಂಧನ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ.. !

ನಟ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ.ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ನಟ ಸೋಷಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು, “ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ! 6 ವಾರದ ದಿಘ್ಭಂಧನ ನಡಿಗೆಗೆ” ಎಂದು ಬರೆದುಕೊಂಡಿದ್ದಾರೆ.


ಇತ್ತೀಚೆಗಷ್ಟೇ ನಟ ಜಗ್ಗೇಶ್​ ಅಭಿನಯದ ರಾಘವೇಂದ್ರ ಸ್ಟೋರ್ಸ್​ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಫ್ಯಾಮಿಲಿ ಆಡಿಯನ್ಸ್​ಗೆ ಖುಷಿ ನೀಡಿತ್ತು. ಆದರೆ ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈ ಸಿನಿಮಾದಲ್ಲಿ ಜಗ್ಗೇಶ್​ ಪ್ರಬುದ್ಧ ನಟನ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಅವರು ನಿರ್ದೇಶಕ ಗುರುಪ್ರಸಾದ್ ಅವರ ರಂಗನಾಯಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಜಗ್ಗೇಶ್​ ಅಚಾತುರ್ಯದಿಂದ ಕಾಲು ಮುರಿದುಕೊಂಡಿದ್ದು, 6 ವಾರ ರೆಸ್ಟ್​ನಲ್ಲಿದ್ದಾರೆ. ಆದಷ್ಟು ಬೇಗ ತಮ್ಮ ನೆಚ್ಚಿನ ನಟ ಗುಣಮುಖರಾಗಲಿ ಎಂದು ಜಗ್ಗೇಶ್​ ಅಭಿಮಾನಿಗಳು ಸೋಷಿಯಲ್​ ಮೀಡಿಯಾದ ಮೂಲಕ ಹಾರೈಸಿದ್ದಾರೆ.

ಮದುವೆ ಆಗದ ಹಯವದನ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಬಹಳ ನ್ಯಾಚುಲರ್ ಆಗಿ ಕಾಣಿಸಿಕೊಂಡಿದ್ದರು. ನೀರ್ ದೋಸೆ ಚಿತ್ರದ ಬಳಿಕ ಜಗ್ಗೇಶ್ ಹಾಗೂ ಹಿರಿಯ ನಟ ದತ್ತಣ್ಣ ಕಾಂಬಿನೇಷನ್ ಈ ಚಿತ್ರದಲ್ಲಿ ಹೊಸ ರೀತಿಯಲ್ಲಿ ಮಜಾ ನೀಡಿತ್ತು. ಇದರಲ್ಲಿ ಬರುವ ಪಂಚಿಂಗ್ ಡೈಲಾಗ್​ಗಳು ಅಂತೂ ಸಖತ್​ ಆಗಿತ್ತು. ಇನ್ನು ಜಗ್ಗೇಶ್ ಮತ್ತು ದತ್ತಣ್ಣ ಅಲ್ಲದೇ ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಮಿತ್ರ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮದುವೆ ಆಗದ ಹಯವದನ ಜಗ್ಗೇಶ್​ನ ಕೈ ಹಿಡಿಯುವ ವಧುವಾಗಿ ಸಿಂಪಲ್ಲಾಗೊಂದು ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾ ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ನಟಿಸಿದ್ದರು.

ಪ್ರೇಕ್ಷಕರ ಗೆದ್ದ ಸಿಂಗಲ್​ ಸುಂದರ: ನಟ ಜಗ್ಗೇಶ್​ ಹಾಸ್ಯ ಪಾತ್ರಗಳನ್ನೇ ಆಯ್ದುಕೊಳ್ಳುತ್ತಾರೆ. ಏಪ್ರಿಲ್​ 28 ರಂದು ಬಿಡುಗಡೆಯಾಗಿದ್ದ ರಾಘವೇಂದ್ರ ಸ್ಟೋರ್ಸ್​ ಸಿನಿಮಾದಲ್ಲಿ ಜಗ್ಗೇಶ್​ ಪಾತ್ರ ವಿಶೇಷವಾಗಿ ಎಲ್ಲರನ್ನೂ ಆಕರ್ಷಿಸಿತ್ತು. ಈ ಕಾಲದಲ್ಲಿ ಎಲ್ಲಾ ತರಹದ ಸೌಕರ್ಯ ಮತ್ತು ಸೌಲಭ್ಯ ಇದ್ದು ಹುಡುಗಿ ಸಿಗೋದು ಕಷ್ಟ. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇಲ್ಲದ ಹುಡುಗರು, ಹುಡುಗಿಗಾಗಿ ಎಷ್ಟೆಲ್ಲಾ ಹುಡುಕಾಟ ನಡೆಸ್ತಾರೆ ಅಲ್ವಾ? ಇಂತಹದ್ದೇ ವಿಷಯವನ್ನು ಇಟ್ಟುಕೊಂಡು ರಾಘವೇಂದ್ರ ಸ್ಟೋರ್ಸ್, ಹೊಟೇಲ್ ಅಡುಗೆ ಭಟ್ಟನಿಗೆ ಹುಡುಗಿ ಹುಡುಕೋದಿಕ್ಕೆ ಏನೆಲ್ಲಾ ಚಾಲೆಂಜ್​ಗಳು ಎದುರು ಆಗುತ್ತವೆ ಎಂಬುದನ್ನು ತೋರಿಸಿದ್ದರು.