ಡೆಲ್ಟಾ ರೂಪಾಂತರ ತಳಿಯ ಸೋಂಕು ಹೆಚ್ಚುವ ಸಾಧ್ಯತೆ: ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನಿವಾ: ಕೊರೊನಾ ಸೋಂಕಿನ ರೂಪಾಂತರ ತಳಿ ‘ಡೆಲ್ಟಾ ವೈರಸ್’ ವಿಶ್ವದ 100 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ರೂಪಾಂತರ ತಳಿಯ ಸೋಂಕು ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಕೋವಿಡ್‌–19 ಪಿಡುಗು ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ವಾರದ ದತ್ತಾಂಶ ಪ್ರಕಟಿಸಿದ್ದು, ಅದರಂತೆ ಜೂನ್ 29 ರವರೆಗೆ, 96 ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿಯ ಸೋಂಕು ಪ್ರಸರಣಗೊಂಡಿದೆ. ರೂಪಾಂತರ ತಳಿಗಳ ಪತ್ತೆಗೆ ಅಗತ್ಯವಾದ ಪರಿಕರಗಳ ಕೊರತೆಯ ಕಾರಣವೂ ಡೆಲ್ಟಾ ರೂಪಾಂತರ ತಳಿ […]

ಹಲ್ಲುಗಳ ಅಂದ-ಚೆಂದ ಹೆಚ್ಚಿಸೋದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ ಸಾಕು

ನಗು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ನಗುವನ್ನು ಆಕರ್ಷಕವಾಗಿಸುವಲ್ಲಿ ನಮ್ಮ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತದೆ. ಸುಂದರ ಬಿಳಿ ಹಲ್ಲುಗಳು ನಗುವಿನ ಜೊತೆ ಮುಖದ ಚೆಲುವನ್ನು ಕೂಡ ಹೆಚ್ಚಿಸುತ್ತದೆ. ಆದರೆ ಕೆಲವರ ಹಲ್ಲು ಹಳದಿ ಅಥವಾ ಡಲ್‌ ಆಗಿರುತ್ತದೆ. ಅದಕ್ಕಾಗಿ ಪದೇಪದೇ ಡೆಂಟಿಸ್ಟ್‌ ಬಳಿ ಓಡಲು ಸಾಧ್ಯವಿಲ್ಲ. ಸರಳ ವಿಧಾನದಿಂದ ಇದೆಲ್ಲವೂ ಸಾಧ್ಯ  ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ . ಅವಧಿಯ […]

ಜಿಟಿ ಜಿಟಿ ಮಳೆಗೆ ಈ ಆರೋಗ್ಯಕರ ಸೂಪ್ ಜೊತೆಗಿದ್ರೆ ಆಹಾ ಏನ್ ಮಜಾ ಅಂತೀರಿ!

  ಮಳೆಗಾಲ ಶುರುವಾಯ್ತು ಅಂದ್ರೆ ಏನಾದರೂ ಬಿಸಿ-ಬಿಸಿ ಮಾಡಿ ತಿನ್ನಬೇಕು ಅಥವಾ ಕುಡಿಯಬೇಕು ಎಂಬ ಬಯಕೆಯಾಗುವುದು ಸಹಜ. ಜೋರಾಗಿ ಮಳೆ ಸುರಿಯುವ ಸಮಯದಲ್ಲಿ ಬಿಸಿ-ಬಿಸಿ ಸೂಪ್ ಮಾಡಿ ಕುಡಿಯುವುದರಲ್ಲಿರುವ ಮಜಾ ಬೇರ್ಯಾವುದರಲ್ಲೂ ಇಲ್ಲ. ಇದರಿಂದ ನಾಲಿಗೆಗೆ ರುಚಿಯೂ ಹೆಚ್ಚುತ್ತದೆ, ಮೈಯ ಚಳಿಯೂ ಬಿಡುತ್ತದೆ. ಆಲಸ್ಯದಿಂದ ಕೂಡಿರುವ ದೇಹಕ್ಕೆ ಉಲ್ಲಾಸ ನೀಡುತ್ತದೆ. ಮಳೆಗಾಲದಲ್ಲಿ ಬಿಸಿ-ಬಿಸಿಯಾದ ಸೂಪ್ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಸೂಪ್ ನ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ  ಎನ್ನುತ್ತಾರೆ  ಸಿಂಥಿಯಾ ಮೆಲ್ವಿನ್.  ಅವರ  ಈ ವಾರದ  “ನಮ್ಮ ಆರೋಗ್ಯ […]

ಕುತ್ತಿಗೆ ಸುತ್ತಲು ಕಪ್ಪಾಗಿದ್ದರೆ ಅಂಗೈಯಲ್ಲೇ ಇದೆ ಪರಿಹಾರ!

ನಿಮ್ಮ ಮುಖ ಮುದ್ದು ಮುದ್ದಾಗಿ, ಯಾವುದೆ ಕಲೆಗಳಿಲ್ಲದೇ ಚೆನ್ನಾಗಿಯೇ ಇರಬಹುದು. ಆದರೆ ನೀವು ಕಪ್ಪು ಕುತ್ತಿಗೆ ಹೊಂದಿದ್ದರೆ, ನಿಮ್ಮ ಮುಖದ ಆಕರ್ಷಣೆ ಕಡಿಮೆಯಾಗೋದು ಖಂಡಿತಾ. ಕಪ್ಪು ಕುತ್ತಿಗೆಗೆ ಕಾರಣವೇನು ಯೋಚಿಸಿದ್ದೀರಾ? ಕಪ್ಪಾದ ಕುತ್ತಿಗೆಗೆ ಪ್ರಾಥಮಿಕ ಕಾರಣವೆಂದರೆ ನೈರ್ಮಲ್ಯ ಕಳಪೆಯಾಗಿರಬಹುದು. ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು, ಮಾಲಿನ್ಯಕಾರಕ ಮತ್ತು ಇತರ ಕೆಲವು ಕಾರಣಗಳು.  ಈ ಸಮಸ್ಯೆಗೆ ನಮ್ಮ ಅಂಗೈಯಲ್ಲೇ ಪರಿಹಾರವಿದೆ ಎನ್ನುತ್ತಾರೆ ರಮಿತಾ ಶೈಲೇಂದ್ರ ರಾವ್ ಕಿತ್ತಳೆ ಸಿಪ್ಪೆ ಹುಡಿ ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ […]

ಮುಖದ ಮೇಲೆ ಕೂದಲು ಬೆಳೆದ್ರೆ ಮುಜುಗರ ಆಗುತ್ತೆ ಎನ್ನುವ ಹೆಣ್ಣು ಮಕ್ಕಳೇ ಒಮ್ಮೆ ಓದಿ

ಮುಖದ ಮೇಲೆ ಕೂದಲು ಬಂದರೆ ಹೆಣ್ಣು ಮಕ್ಕಳಿಗೆ ತುಂಬಾ ಮುಜುಗರ ಉಂಟಾಗುವುದು. ತೆಳುವಾದ ಕೂದಲು ಹೆಚ್ಚಿನವರ ಮುಖದಲ್ಲಿ ಕಂಡು ಬರುತ್ತದೆ, ಆದರೆ ಕೂದಲು ಸ್ವಲ್ಪ ತೆಳ್ಳಗೆ ಆಗಿದ್ದು, ಗಲ್ಲ ಮತ್ತು ಮೂಗಿನ ಕೆಳಗೆ ಕೂದಲು ಎದ್ದು ಕಾಣುವಂತಿದ್ದರೆ ತುಂಬಾ ಮುಜುಗರ ಉಂಟಾಗುತ್ತದೆ, ಯಾವ ಮೇಕಪ್ ನಿಂದಲೂ ಮುಖದಲ್ಲಿರುವ ಕೂದಲನ್ನು ಮರೆಮಾಚಲು ಆಗುವುದಿಲ್ಲ. ಸ್ತ್ರೀಯರ ಮುಖದಲ್ಲಿ ಬೇಡದ ಕೂದಲು ಇಲ್ಲದಿದ್ದರೆ ಮಾತ್ರ ಆಕರ್ಷಕವಾಗಿ ಕಾಣುವುದು. ಇದಕ್ಕೆ ನಾವು ಏನು ಮಾಡಬಹುದು ಎನ್ನುವ ಕುರಿತು          […]