ರೈತನಿಂದ ಅನ್ನ ಉಣ್ಣುವ ನಾವು ಈ ಪ್ರತಿಜ್ಞೆಗಳನ್ನು ಮಾಡಲೇಬೇಕು: ರಾಷ್ಟ್ರೀಯ ಕೃಷಿಕರ ದಿನದ ವಿಶೇಷ ಇದು

ಇಂದು ರಾಷ್ಟ್ರೀಯ ಕೃಷಿಕರ ದಿನ. ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳ ಕಷ್ಟವಿದೆ. ಹಾಗಾಗಿ ಪ್ರತಿದಿನವೂ ಕೃಷಿಕರ ದಿನವೇ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ. ಇದು ಉಡುಪಿ xpress ಕಾಳಜಿ • ಅವಶ್ಯವಿದ್ದಷ್ಟೇ ಆಹಾರ ತೆಗೆದುಕೊಂಡು ಒಂದಿಷ್ಟನ್ನೂ ತಟ್ಟೆಯಲ್ಲಿ ವ್ಯರ್ಥ‌ಮಾಡದೇ ಊಟ/ತಿಂಡಿ ಮಾಡೋಣ. • ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ […]

ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ: ಇದು ಹಳೆ ಸೀರೆಯ ಹೊಸ ಮೋಡಿ!

»ಸುಲಭಾ ಆರ್.ಭಟ್, ಉಡುಪಿ ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ.”ವ್ಹಾವ್ ಎಷ್ಟು ಚೆಂದ ಆಯ್ತಲ್ಲಾ ನನ್ನ ಹಳೆ ಸೀರೆಯ ಹೊಸ ಲುಕ್” ಅಂತ ನೀವೇ ನೋಡಿ ಖುಷಿ ಪಡ್ತೀರಿ. ಯಸ್”ಸೀರೆ ಸುಂದರವಾಗಿಯೂ ಆಕರ್ಷಕವಾಗಿಯೂ ಹಾಗೂ ಸ್ತ್ರೀಯರಿಗೆ ಗತ್ತುಗೈರತ್ತುಗಳನ್ನು ನೀಡುವಂತ ಉಡುಗೆ. ಆದರೆ ಕೆಲವೊಮ್ಮೆ ಮತ್ತೆ ಮತ್ತೆ ಹಳೆಯ ಸೀರೆಗಳನ್ನೇ  ಉಟ್ಟುಕೊಳ್ಳುವುದಕ್ಕೇ ಬೇಸರವೆಂದೆನಿಸುತ್ತದೆ ಅಲ್ಲವೇ? ಹಾಗಿದ್ದಲ್ಲಿ ಆ ಹಳೆಯ ರೇಷ್ಮೆ ಸೀರೆಗಳನ್ನು ಮರುಬಳಸಬಹುದು. ಇದು ಹೇಗೆ ಸಾಧ್ಯ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. […]

ಈ ಸಮಯದಲ್ಲಿ ನೀವು ಹೂಡಿಕೆ ಹಾಗೂ ಉಳಿತಾಯ ಯೋಜನೆ ಬಗ್ಗೆ ಯೋಚಿಸಲೇಬೇಕು :ನಿಮ್ಮ ಬದುಕು ಕಾಪಾಡೋ ಯೋಜನೆಗಳಿವು!

ಕಷ್ಟಕಾಲಕ್ಕೆ ಒಂದಷ್ಟು ಸಂಪತ್ತನ್ನು ಶೇಖರಿಸಿಡಬೇಕು ಎಂದು ಚಾಣಕ್ಯ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಬಹಳ ವರ್ಷಗಳ ಹಿಂದೆ ನಮ್ಮ ಉಳಿತಾಯದ ಅಥವ ಹೂಡಿಕೆಯ ಅವಕಾಶಗಳು ಕಡಿಮೆ ಇದ್ದವು. ಆದರೆ ಈಗ ಕಾಲ ಬದಲಾಗಿದೆ. ಒಬ್ಬ ಸಾಮಾನ್ಯ ಪ್ರಜೆಯೂ ಹೂಡಿಕೆ ಹಾಗೂ ಉಳಿತಾಯ ಮಾಡಲು ಸಾಧ್ಯವಾಗುವ೦ತಹ ಹಲವು ಯೋಜನೆಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಿದ್ದಾರೆ ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ  ವಿಕ್ರಮ್ ವತ್ಸ ♦ಫಿಕ್ಸೆಡ್ ಡೆಪೋಸಿಟ್: ಇದು ಎಲ್ಲರಿಗೂ ತಿಳಿದಿರುವ ಜನಪ್ರಿಯ ಯೋಜನೆ.ಆದರೆ ಇದರಿ೦ದ ಬರುವ […]

ನಮ್ಮ ನಿಮ್ಮ ನಡುವೆಯೂ ಇಂತವರಿರಬಹುದು ಜಾಗ್ರತೆ!

ಲೈಂಗಿಕತೆಯ ಕುರಿತು ಅರಿವೇ ಇರದ ಆ ಹುಡುಗಿಗೆ ಕದ್ದು ಮುಚ್ಚಿ ಯಾವ್ಯಾವುದೋ ಅಂಗಗಳನ್ನು ನೋಡುತ್ತಿದ್ದ ಈತನ ನೋಟಗಳು‌ ಮೊದಮೊದಲಿಗೆ ಅಸಹಜವೆನ್ನಿಸತೊಡಗಿದರೂ ಗುರುವಿನ ಮೇಲಿನ ಗೌರವದಿಂದ ನಿರ್ಲಕ್ಷಿಸಿದಳು.

ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ

ಕುಂದಾಪುರ: ವ್ಯಕ್ತಿಯೋರ್ವ ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಹಾಗೂ ಕಳವಳಕಾರಿ ಘಟನೆಯೊಂದು ಕುಂದಾಪುರದಲ್ಲಿ ಭಾನುವಾರ ನಡೆದಿದೆ. ಕತ್ತಿಯಿಂದ ಕಡಿದುಕೊಂಡ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಿವಾಸಿ ಮುದಿಯಪ್ಪ(35) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್‍ನಲ್ಲಿ ಕೂತು ಕತ್ತಿಯಿಂದ ತನ್ನ ವೃಷಣ ಭಾಗವನ್ನು ಕುಯ್ದುಕೊಳ್ಳುತ್ತಿರುವಾಗ ಸಾರ್ವಜನಿಕರು ನೋಡಿ ಕತ್ತಿಯನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಕೂಡಲೇ ಆತ ಕತ್ತಿಯನ್ನು ಬೀಸುತ್ತಲೇ ತನ್ನ ಕುತ್ತಿಗೆ ಭಾಗವನ್ನು ಕಡಿಕೊಳ್ಳುತ್ತಾ ರಾಮಮಂದಿರ ರಸ್ತೆ ಮಾರ್ಗವಾಗಿ […]