ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್​ ಗೋಲ್ಡ್​​ ಮೆಚ್ಚುಗೆ

ಟೆಕ್ಸಾಸ್( ಅಮೆರಿಕ)​: ಭಾರತದ ಚಂದ್ರಯಾನ-3 ಯೋಜನೆಯೇ ಒಂದು ದೊಡ್ಡ ಯಶಸ್ಸು ಎಂದು ನಾಸಾದ ಮಾಜಿ ಅಧಿಕಾರಿ ಮತ್ತು ರೆಡ್​ವೈರ್​ನ ಮುಖ್ಯ ಅಭಿವೃದ್ಧಿ ಅಧಿಕಾರಿ ಮೈಕ್​ ಗೋಲ್ಡ್ ಪ್ರಶಂಸಿದ್ದಾರೆ.ಇಂದು ಸಂಜೆ ಚಂದ್ರಯಾನ-3 ಯೋಜನೆ​​ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವಲ್ಲಿ ಯಶಸ್ವಿಯಾಗಲಿ ಅಥವಾ ಬಿಡಲಿ, ಭಾರತದ ಈ ಯೋಜನೆಯೇ ಒಂದು ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ಚಂದ್ರಯಾನ-3 ಯಶಸ್ಸಿಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದ್ದು, ಭಾರತದ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತದ ಚಂದ್ರಯಾನ ಕುರಿತು ಮಾತನಾಡಿರುವ ಅವರು, ನಾವು ಹೊಸ ಕಾಲಕ್ಕೆ ಪ್ರವೇಶಿಸುತ್ತಿದ್ದೇವೆ. ಚಂದ್ರನ ಪರಿಶೋಧನೆಯ ಆರ್ಟೆಮಿಸ್ ಯುಗದಲ್ಲಿ ಕೇವಲ ಒಂದೆರಡು ಬಾರಿಯಲ್ಲ ಶಾಶ್ವತವಾಗಿ ಚಂದ್ರನ ಮೇಲೆ ಛಾಪು ಮೂಡಿಸಲು ಮುಂದಾಗಿದ್ದೇವೆ. ಈ ಯೋಜನೆಯು ಚಂದ್ರನ ಕುರಿತು ಅರ್ಥೈಸಿಕೊಳ್ಳಲು ಮತ್ತು ದತ್ತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಚಂದ್ರನ ಮೇಲೆ ನೆಲೆ ಸ್ಥಾಪಿಸಲಿದ್ದೇವೆ. ಹೀಗಾಗಿ ಈ ಪ್ರಕ್ರಿಯೆ ಭಾಗವಾಗಿ ನಾವಿದ್ದೇವೆ. ಈ ಯೋಜನೆ ಯಶಸ್ವಿಯಾಗಲಿ ಅಥವಾ ಬಿಡಲಿ, ಈ ಯೋಜನೆಯೇ ದೊಡ್ಡ ಮಟ್ಟದ ಯಶಸ್ಸು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಚಂದ್ರಯಾನ ಕೂಡ ಆರ್ಟಿಮಿಸ್​ ಲಕ್ಷಣವಾಗಿದ್ದು, ನಾವು ಭೂಮಿಯ ಕಕ್ಷೆಯನ್ನು ಮೀರಿ ಚಂದ್ರನ ಮೇಲ್ಮೆಗೆ ಹೋಗುವುದನ್ನು ನೋಡುತ್ತಿದ್ದೇವೆ. ಮುಂದಿನ ಯುಗದಲ್ಲಿ ರೋಬೋಟಿಕ್​ ಮತ್ತು ಮಾನವ ಬಾಹ್ಯಕಾಶದ ಅನ್ವೇಷಣೆ ಕಾರ್ಯಗತವಾಗಲಿದೆ ಎಂದು ಅವರು ಹೇಳಿದರು.ಮೈಕ್ ಗೋಲ್ಡ್ ಆರ್ಟೆಮಿಸ್ ರೆಕಾರ್ಡ್​​ನ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ. ಅಲ್ಲದೇ ಅವರು ನಾಸಾದಲ್ಲಿ ಬಾಹ್ಯಾಕಾಶ ನೀತಿ ಮತ್ತು ಪಾಲುದಾರಿಕೆಗಳ ಮಾಜಿ ಸಹಾಯಕ ನಿರ್ವಾಹಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ

ಚಂದ್ರಯಾನ-3 ವಿಕ್ರಮ್​ ಲ್ಯಾಂಡರ್​​ ಇಂದು ಸಂಜೆ 6.04 ಚಂದ್ರನ ಮೇಲ್ಮೈನಲ್ಲಿ ಸಾಫ್ಟ್​ ಲ್ಯಾಂಡ್​ ಆಗುವ ಮೂಲಕ ನೂತನ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಈ ಘಟನೆಗೆ ಇಡೀ ದೇಶ ಸೇರಿದಂತೆ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. (ಎಎನ್​ಐ)ಚಂದ್ರನ ಸಹಯೋಗದೊಂದಿಗೆ ನಾವು ಸಾಗುತ್ತಿದ್ದೇವೆ. ಪ್ರಸ್ತುತ ನಾಸಾ ಮತ್ತು ಇಸ್ರೋ ಸಹಯೋಗವೂ ಭೂಮಿ ಮೇಲೆ ಹೆಚ್ಚು ಕೇಂದ್ರಿಕೃತವಾಗಿದೆ. ಇದು ಭಯಂಕರವಾಗಿದ್ದು ನಿಸಾರ್​​ನಂತಹ ಯೋಜನೆ ಆಗಿದೆ. ಭಾರತ ರಾಡರ್​ ವ್ಯವಸ್ಥೆ ಮೂಲಕ ಭೂಮಿಯನ್ನು ಅಧ್ಯಯನ ನಡೆಸಲು ಮುಂದಾಗಿದೆ. ಜೊತೆಗೆ ಹವಾಮಾನ ಬದಲಾವಣೆ ಮತ್ತು ಹವಾಮಾನದಲ್ಲಿನ ನಮ್ಮ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ದತ್ತಾಂಶದ ಭಾಗವನ್ನು ಸೃಷ್ಟಿಸಿದೆ. ಇದು ಭಾರತ, ಅಮೆರಿಕ ಮತ್ತು ಇಡೀ ಜಗತ್ತಿಗೆ ಪ್ರಮುಖ ವಿಷಯವಾಗಿದೆ ಎಂದರು.