ಬಿಎಂಡಬ್ಲ್ಯೂ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೆಸ್ಲಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಅಮೇರಿಕಾ ಕಾರು ಕಂಪನಿಯ ಸಾಧನೆ

25 ವರ್ಷಗಳಲ್ಲಿ ಅಮೇರಿಕಾದ ವಾಹನ ತಯಾರಕರು ಮಾಡಲಾಗದ್ದನ್ನು ಟೆಸ್ಲಾ ಮಾಡಿ ತೋರಿಸಿದೆ. 2022 ರಲ್ಲಿ ಯುಎಸ್‌ನ ಅಗ್ರ ಐಷಾರಾಮಿ ಬ್ರಾಂಡ್‌ ಕಾರ್ ನ ಶೀರ್ಷಿಕೆಯನ್ನು ಪಡೆದ ಟೆಸ್ಲಾ, ಇದುವರೆಗೂ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಬಿಎಂಡಬ್ಲ್ಯೂ ಕಾರುಗಳನ್ನು ಹಿಂದಿಕ್ಕಿದೆ. 2021 ರಲ್ಲಿ ಟೆಸ್ಲಾ ಅಮೇರಿಕಾದಲ್ಲಿ ಬಿಎಂಡಬ್ಲ್ಯೂ ಗಿಂತ ಕೇವಲ 23,244 ಕಡಿಮೆ ವಾಹನಗಳನ್ನು ಮಾರಾಟ ಮಾಡಿತ್ತು, ಆದರೆ 2022 ರಲ್ಲಿ ಟೆಸ್ಲಾ ಇದನ್ನು ಸಂಪೂರ್ಣವಾಗಿ ತಿರುಗಿಸಿತು. ಆಟೋಮೋಟಿವ್ ನ್ಯೂಸ್ ರಿಸರ್ಚ್ ಮತ್ತು ಡಾಟಾ ಸೆಂಟರ್‌ನ ಅಂದಾಜಿನ ಪ್ರಕಾರ ಟೆಸ್ಲಾ ಕಳೆದ […]

ಪೆರಾರ ಬಲವಂಡಿ ಕ್ಷೇತ್ರ: ಜ.15 ರಂದು ಬಂಟಕಂಬ ಅನುಜ್ಞಾ ವಿಧಿ

ಬಜಪೆ: ಇಲ್ಲಿನ ಐತಿಹಾಸಿಕ ಶ್ರೀಕ್ಷೇತ್ರ ಪೆರಾರದಲ್ಲಿ ಬ್ರಹ್ಮ ದೇವರು, ಇಷ್ಟದೇವತಾ ಮತ್ತು ಬಲವಂಡಿ ಪಿಲಿಚಂಡಿ ದೈವಸ್ಥಾನದ ಅಜೀರ್ಣ ಸ್ಥಿತಿಯಲ್ಲಿದ್ದ ಛತ್ರದರಸ ಚಾವಡಿ ಬಂಟಕಂಬ ರಾಜಾಂಗಣ, ಪಿಲಿಚಂಡಿ ಡೈವಸ್ಥಾನದ ಪುನರ್ ನಿರ್ಮಾಣಕಾಯವು ಅಂತಿಮ ಹಂತದಲ್ಲಿದ್ದು, ಪವಿತ್ರ ಬಂಟಕಂಬದ ಅನುಜ್ಞಾ ವಿಧಿವಿಧಾನಗಳು ಜ.15 ರಂದು ಬೆಳಗ್ಗೆ 8.30 ಕ್ಕೆ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯ ಹಾಗೂ ಕದಳಿ ಯೋಗೀಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥ ಮಹಾರಾಜ್ ಇವರ ಶುಭಾಶೀರ್ವಾದದೊಂದಿಗೆ ನಡೆಯಲಿದೆ. ಈ ನೂತನ ಬಂಟಕಂಬವನ್ನು ತೈಲದಲ್ಲಿ ಇಡಲಾಗುವ್ದು ಮತ್ತು […]

ಸುರತ್ಕಲ್: ಅನಾಥ ಮಗು ಪತ್ತೆ; ಪೋಷಕರ ಪತ್ತೆಗೆ ಮನವಿ

ಸುರತ್ಕಲ್: ಸುರತ್ಕಲ್ ಠಾಣಾ ವ್ಯಾಪ್ತಿಯ ಸದಾನಂದ ಹೋಟೆಲಿನ ಬಳಿ ಬುಧವಾರದಂದು ಅಂದಾಜು 3-4 ವರ್ಷ ಪ್ರಾಯದ ಹೆಣ್ಣು ಮಗುವೊಂದು ಪತ್ತೆಯಾಗಿದ್ದು, ಮಗುವಿನ ಹೆತ್ತವರಿಗಾಗಿ ಶೋಧ ನಡೆಯುತ್ತಿದೆ. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಗುವಿನ ಹೆತ್ತವರನ್ನು ಶೋಧಿಸುತ್ತಿರುವ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. […]

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಭಜರಂಗದಳ ಪ್ರಮುಖನ ಮೃತದೇಹ ಪತ್ತೆ

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಭಜರಂಗದಳ ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ್ ರಾಜೇಶ್ ಪೂಜಾರಿ (26) ಎಂಬವರ ಮೃತದೇಹ ಪತ್ತೆಯಾಗಿದೆ. ಪಾಣೆಮಂಗಳೂರಿನ ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸೇತುವೆಯ ಮೇಲೆ ದ್ವಿಚಕ್ರವಾಹನ ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡವು ಆಗಮಿಸಿ ಶೋಧ ನಡೆಸಿದೆ. ಈ ಸಂದರ್ಭ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ರಾಜೇಶ್ ಪೂಜಾರಿ […]

ಅಸಂಘಟಿತ ಹಾಗೂ ವಲಸೆ ಕಾರ್ಮಿಕರು ಇ-ಶ್ರಮ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಿ: ಜಿಲ್ಲಾಧಿಕಾರಿ

ಉಡುಪಿ: ಅಸಂಘಟಿತ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಲು, ಕಾರ್ಮಿಕರ ದತ್ತಾಂಶವನ್ನು ಇ-ಶ್ರಮ್ ನಲ್ಲಿ 379 ವಿವಿಧ ವರ್ಗಗಳ ಕಾರ್ಮಿಕರ ನೊಂದಣಿ ನಡೆಯುತ್ತಿದ್ದು, ಇದರಲ್ಲಿ ಪ್ರತಿಯೊಬ್ಬ ಕಾರ್ಮಿಕನೂ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಮಿಕ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಾದ್ಯಂತ 38 ಕೋಟಿಗೂ ಅಧಿಕ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿ ತೊಡಗಿಕೊಂಡಿದ್ದು ಜಿಲ್ಲೆಯಲ್ಲಿ ಇವರ ಸಂಖ್ಯೆ 3 ಲಕ್ಷಕ್ಕೂ […]