ಸುರತ್ಕಲ್: ಅನಾಥ ಮಗು ಪತ್ತೆ; ಪೋಷಕರ ಪತ್ತೆಗೆ ಮನವಿ

ಸುರತ್ಕಲ್: ಸುರತ್ಕಲ್ ಠಾಣಾ ವ್ಯಾಪ್ತಿಯ ಸದಾನಂದ ಹೋಟೆಲಿನ ಬಳಿ ಬುಧವಾರದಂದು ಅಂದಾಜು 3-4 ವರ್ಷ ಪ್ರಾಯದ ಹೆಣ್ಣು ಮಗುವೊಂದು ಪತ್ತೆಯಾಗಿದ್ದು, ಮಗುವಿನ ಹೆತ್ತವರಿಗಾಗಿ ಶೋಧ ನಡೆಯುತ್ತಿದೆ.

ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಗುವಿನ ಹೆತ್ತವರನ್ನು ಶೋಧಿಸುತ್ತಿರುವ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. 9480802321 ಅಥವಾ ಮಹಿಳಾ ಸಮನ್ವಯ ಅಧಿಕಾರಿ ಮೊ.: 9448332713ನ್ನು ಸಂಪರ್ಕಿಸುವಂತೆ ಸುರತ್ಕಲ್ ಪೊಲೀಸ್ ಠಾಣಾ ಪ್ರಕಟನೆ ತಿಳಿಸಿದೆ.