ನ. 27- 29: ಬ್ರಹ್ಮಾವರದಲ್ಲಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’

ಆಹಾರೋದ್ಯಮಕ್ಕೆ ಉತ್ತೇಜನ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಯುವಜನರಿಗೆ ಸ್ವಯಂ ಉದ್ಯೋಗದ ಅವಕಾಶ ಹಾಗೂ ಕರಾವಳಿಯ ಸಾಂಪ್ರದಾಯಿಕ ಆಹಾರ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಬ್ರಹ್ಮಾವರದಲ್ಲಿ ನವೆಂಬರ್ 27ರಿಂದ ಮೂರು ದಿನಗಳ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಶ್ರೀಧರ್ ಪಿಎಸ್ ಹೇಳಿದರು.ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.), ಬ್ರಹ್ಮಾವರ ಇದರ ಆಶ್ರಯದಲ್ಲಿ ನವೆಂಬರ್ 27ರಿಂದ 29ರವರೆಗೆ ಪ್ರತಿದಿನ ಬೆಳಿಗ್ಗೆ […]
ಮತ್ತೆ ಸುಂಕದ ಶಾಕ್ ನೀಡಿದ ಟ್ರಂಪ್, ಭಾರತ ಸೇರಿದಂತೆ 16 ರಾಷ್ಟ್ರಗಳ ಮೇಲೆ ಹೊಸ ಸುಂಕ ವಿಧಿಸಲು ಅಮೆರಿಕ ಸಿದ್ಧತೆ

ವಾಷಿಂಗ್ಟನ್: ಭಾರತ ಸೇರಿದಂತೆ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟ ಸೇರಿದಂತೆ ಹಲವು ಪ್ರಮುಖ ಆರ್ಥಿಕತೆಗಳ ಮೇಲೆ ಅಮೆರಿಕ ಹೊಸ ಸುಂಕ ವಿಧಿಸುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಹೊಸ ಸುಂಕ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದರಿಂದ ಭಾರತ ಮತ್ತೊಮ್ಮೆ ಅಮೆರಿಕದ ವ್ಯಾಪಾರ ಸುಂಕದ ಬಿಸಿ ಎದುರಿಸುವ ಸಾಧ್ಯತೆಯಿದೆ. ಭಾರತ, ಚೀನಾ, ಯುರೋಪಿಯನ್ ಒಕ್ಕೂಟ ಸೇರಿದಂತೆ ಒಟ್ಟು 16 ರಾಷ್ಟ್ರಗಳ ಕೈಗಾರಿಕಾ ಸಬ್ಸಿಡಿ ಹಾಗೂ ಸರ್ಕಾರದ ಬೆಂಬಲ ನೀತಿಗಳ ಕುರಿತು ಮಾರ್ಚ್ […]
ಹೃದಯಜ್ಯೋತಿ ಯೋಜನೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ವಿಸ್ತರಣೆ: ಯು.ಟಿ. ಖಾದರ್

ಮಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ. ಡಾ. ಪುನೀತ್ ರಾಜ್ಕುಮಾರ್ ಹೃದಯಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ವಿಸ್ತರಿಸುವುದು, ಬಿಪಿಎಲ್ ಕುಟುಂಬಗಳಿಗೆ ಉಚಿತ ಕೀಮೋಥೆರಪಿ ಸೇವೆ ಒದಗಿಸುವುದು ಹಾಗೂ ಹಿಮೋಫಿಲಿಯಾ ರೋಗಿಗಳಿಗೆ ಮುನ್ನೆಚ್ಚರಿಕಾ ಚುಚ್ಚುಮದ್ದು ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಹೃದಯ ಚಿಕಿತ್ಸೆಯನ್ನು ಒದಗಿಸುವ ಡಾ. […]
ಉದ್ಯೋಗವಕಾಶ

ಉಡುಪಿಯ ಪ್ರಸಿದ್ಧ ಪ್ರಿ ಸ್ಕೂಲ್ ಒಂದಕ್ಕೆ ಟೀಚರ್ ಬೇಕಾಗಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9880450014
ಮಣಿಪಾಲದ MSDC ಯಲ್ಲಿ ಬ್ಯೂಟಿ ಮತ್ತು ವೆಲ್ನೆಸ್ ತರಬೇತುದಾರರಾಗಲು ಯುವ ಪ್ರತಿಭೆಗಳಿಗಿದೆ ಮುಕ್ತ ಅವಕಾಶ

ಮಣಿಪಾಲ: ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವ ಯುವ ಪ್ರತಿಭೆಗಳಿಗೆ ಮಣಿಪಾಲದ ಎಂಎಸ್ಡಿಸಿ (MSDC) ಹಾಗೂ ಒರೇನ್ ಇಂಟರ್ನ್ಯಾಷನಲ್ ಸಂಸ್ಥೆಗಳು ಅವಕಾಶ ಕಲ್ಪಿಸಿವೆ. ಸಂಸ್ಥೆಯಲ್ಲಿ ಬ್ಯೂಟಿ ಮತ್ತು ವೆಲ್ನೆಸ್ ತರಬೇತುದಾರರು ಹಾಗೂ ಬೋಧಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎ, ಬಿಕಾಂ ಅಥವಾ ಬಿಎಸ್ಸಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬೋಧನೆ ಮತ್ತು ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಆಸಕ್ತಿ, ಉತ್ತಮ ವ್ಯಕ್ತಿತ್ವ, ಪರಿಣಾಮಕಾರಿ ಸಂವಹನ ಕೌಶಲ, ಆತ್ಮವಿಶ್ವಾಸ ಹಾಗೂ ಹೊಸ ವಿಷಯಗಳನ್ನು ಕಲಿಯುವ […]