ಜ. 30 ಮತ್ತು 31ರಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ‘ಪವರ್ ಫೆಸ್ಟ್ ’27’ ಉತ್ಸವ

ಉಡುಪಿ: ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ಮತ್ತು ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪವರ್ ಸಂಸ್ಥೆಯ ವತಿಯಿಂದ ‘ಪವರ್ ಫೆಸ್ಟ್ ’27’ ಉತ್ಸವವನ್ನು ಜ. 30 ಮತ್ತು 31ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಹಾಗೂ ಮುದ್ದಣ್ಣ ಮಂಟಪದಲ್ಲಿ ಆಯೋಜಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷೆ ವೀಣಾ ಕುಡ್ವ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಣ್ಣ […]
‘ನನಗೆ ಹಣ ಕೊಟ್ಟಿದ್ದರೆ ಬ್ಯಾಂಕ್ ಮೂಲಕವೋ, ಗೋಣಿ ಚೀಲದಲ್ಲೋ? ಸುನಿಲ್ ಕುಮಾರ್ ಬಹಿರಂಗಪಡಿಸಲಿ’; ಮುನಿಯಾಲು ಉದಯಕುಮಾರ್ ಶೆಟ್ಟಿ ಸವಾಲು

ಉಡುಪಿ: ತಾನು ಎಷ್ಟು ಮಂದಿಗೆ ಹಣ ನೀಡಬೇಕಿದೆ ಎಂಬುದರ ಪಟ್ಟಿಯನ್ನು ನೀಡಲು ಸಿದ್ಧನಿದ್ದೇನೆ. ಅದಕ್ಕಾಗಿ ಶಾಸಕ ಸುನಿಲ್ ಕುಮಾರ್ ಮನೆಮನೆಗೆ ಹೋಗಿ ಹಣ ಕೇಳುವ ಅಗತ್ಯವಿಲ್ಲ. ನಾನು ಎಷ್ಟು ಜನರಿಗೆ ದುಡ್ಡು ಕೊಡಲು ಬಾಕಿ ಇದೆ ಎಂಬುವುದರ ಬಗ್ಗೆ ನನ್ನ ಕಚೇರಿಯ ಯುವಕರಿಗೆ ಮಾಹಿತಿ ನೀಡಿದರೆ ಸಾಕು. ತಕ್ಷಣವೇ ಪಟ್ಟಿ ಸಿದ್ಧವಾಗುತ್ತದೆ. ಅದು ನನ್ನ ವ್ಯವಹಾರ, ಉದ್ದಿಮೆ ಅದನ್ನು ನಾನು ತಕ್ಷಣವೇ ಕಳುಹಿಸಿಕೊಡುತ್ತೇನೆ. ಅದನ್ನು ಶಾಸಕರು ಪರಿಶೀಲಿಸಲಿ. ಅದೇ ರೀತಿ, ನನಗೆ ಎಷ್ಟು ಹಣ ನೀಡಿದ್ದಾರೆ, ಬ್ಯಾಂಕ್ […]
ಪರಿಸರ ಪ್ರಿಯರ ವಿರೋಧಕ್ಕೆ ಮಣಿದ ಸರಕಾರ, ಲಾಲ್ಬಾಗ್ ಮೂಲಕ ಸುರಂಗ ಮಾರ್ಗ ನಿರ್ಮಾಣ ಪ್ರಸ್ತಾವನೆಯೇ ಡ್ರಾಪ್!

ಬೆಂಗಳೂರು: ಪರಿಸರವಾದಿಗಳ ವಿರೋಧದ ಹಿನ್ನೆಲೆಯಲ್ಲಿ ಲಾಲ್ಬಾಗ್ ಮೂಲಕ ಹಾದುಹೋಗಲಿರುವ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಬದಲಿಗೆ ಎರಡು ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಸುತ್ತಿದ್ದು, ಈ ಪೈಕಿ ಒಂದು ಮಾರ್ಗವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ 16.75 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಲಾಲ್ಬಾಗ್ನ ಬಂಡೆಯ ಕೆಳಗೆ ಸುರಂಗ ಹಾದುಹೋಗುವಂತೆ ಹಾಗೂ ಸಸ್ಯೋದ್ಯಾನದೊಳಗೆ […]
ಆಂಡ್ರಾಯ್ಡ್ ಬಳಕೆದಾರರಿಗೆ ಡ್ಯುಯಲ್ ಕ್ಯಾಮೆರಾ ಮೋಡ್ ಪರಿಚಯಿಸಿದ ವಾಟ್ಸ್ಆ್ಯಪ್: ಏನಿದೆ ಹೊಸ ಫೀಚರ್?

ಮೆಟಾ ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್, ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಡ್ಯುಯಲ್ ಕ್ಯಾಮೆರಾ (Dual Camera) ಮೋಡ್ ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳನ್ನು ಏಕಕಾಲದಲ್ಲಿ ಬಳಸಿಕೊಂಡು ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯಬಹುದು. ಹೊಸ ವೈಶಿಷ್ಟ್ಯದಲ್ಲಿ ಒಂದು ಕ್ಯಾಮೆರಾದ ದೃಶ್ಯವು ಪೂರ್ಣ ಪರದೆಯಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಕ್ಯಾಮೆರಾದ ದೃಶ್ಯವು ಚಿಕ್ಕ ಫ್ರೇಮ್ನಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಬಳಕೆದಾರರು ತಮ್ಮ ಮುಂದಿರುವ ದೃಶ್ಯವನ್ನು ಸೆರೆಹಿಡಿಯುವ ಜತೆಗೆ ತಮ್ಮ ಮುಖಭಾವ ಹಾಗೂ ಪ್ರತಿಕ್ರಿಯೆಯನ್ನೂ ದಾಖಲಿಸಬಹುದು. ವಾಟ್ಸ್ಆ್ಯಪ್ನ […]
ಉದ್ಯೋಗವಕಾಶ

ಉಡುಪಿಯ ಪ್ರಸಿದ್ಧ ಇನ್ಟಚ್ ಮಾರ್ಕೆಟಿಂಗ್ ಸೊಲ್ಯೂಷನ್ ಕಂಪನಿ ಒಂದಕ್ಕೆ ಉದ್ಯೋಗವಕಾಶ ನಡೆಯುತ್ತಿದು ಆಸಕ್ತರು ಕೂಡಲೆ ಸಂಪರ್ಕಿಸಿ : 8105732895