ಮಣಿಪಾಲ: ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವ ಯುವ ಪ್ರತಿಭೆಗಳಿಗೆ ಮಣಿಪಾಲದ ಎಂಎಸ್ಡಿಸಿ (MSDC) ಹಾಗೂ ಒರೇನ್ ಇಂಟರ್ನ್ಯಾಷನಲ್ ಸಂಸ್ಥೆಗಳು ಅವಕಾಶ ಕಲ್ಪಿಸಿವೆ.
ಸಂಸ್ಥೆಯಲ್ಲಿ ಬ್ಯೂಟಿ ಮತ್ತು ವೆಲ್ನೆಸ್ ತರಬೇತುದಾರರು ಹಾಗೂ ಬೋಧಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎ, ಬಿಕಾಂ ಅಥವಾ ಬಿಎಸ್ಸಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಬೋಧನೆ ಮತ್ತು ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಆಸಕ್ತಿ, ಉತ್ತಮ ವ್ಯಕ್ತಿತ್ವ, ಪರಿಣಾಮಕಾರಿ ಸಂವಹನ ಕೌಶಲ, ಆತ್ಮವಿಶ್ವಾಸ ಹಾಗೂ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ಹೊಂದಿರುವ ಅಭ್ಯರ್ಥಿಗಳನ್ನು ನಿರೀಕ್ಷಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ನೀಡುವುದರ ಜೊತೆಗೆ ಉದ್ಯೋಗದ ಭರವಸೆಯನ್ನೂ ಸಂಸ್ಥೆ ನೀಡಲಿದೆ. ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ವೃತ್ತಿಪರರಾಗಲು ಆಸಕ್ತಿ ಹೊಂದಿರುವ ಯುವಜನರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಆಸಕ್ತರು 8123165068 ಅಥವಾ 9591427761 ಸಂಖ್ಯೆಗೆ ಕರೆ ಮಾಡಬಹುದು. ತಮ್ಮ ಅರ್ಜಿಯನ್ನು [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ವಿಳಾಸ: ಒರೇನ್ ಇಂಟರ್ನ್ಯಾಷನಲ್, 3ನೇ ಮಹಡಿ, ಎಂಎಸ್ಡಿಸಿ ಕಟ್ಟಡ, ಡಾ. ಟಿಎಂಎ ಪೈ ಕ್ಯಾಂಪಸ್, ಈಶ್ವರನಗರ, ಮಣಿಪಾಲ–576104.
ವೆಬ್ಸೈಟ್: msdcskills.org/beauty-wellness/















