ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆ

ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪವಿತ್ರ ಪರಮ ಪ್ರಸಾದದೊಂದಿಗೆ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಕ್ತಿ ಪೂರಕವಾಗಿ ಭಾನುವಾರ ನಡೆಯಿತು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ವಿಶೇಷ ಬಲಿಪೂಜೆಯ ನೇತೃತ್ವವನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ. ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ವಹಿಸಿದ್ದರು. ಬಲಿ ಪೂಜೆಯ ಬಳಿಕ ಮಿಲಾಗ್ರಿಸ್ ಕ್ಯಾಥೆಡ್ರಲ್ ನಿಂದ ಆರಂಭಿಸಿ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ವರೆಗೆ ಪವಿತ್ರ ಪರಮ ಪ್ರಸಾದವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಯಿತು. ಮೂರು ಸಾವಿರಕ್ಕೂ ಅಧಿಕ […]

ಇಂದು ರಾಷ್ಟ್ರೀಯ ಗೋಡಂಬಿ ದಿನ: ಪ್ರತೀ ದಿನ ನೆನೆಸಿದ ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೊಂದೆಲ್ಲಾ ಲಾಭಗಳಿವೆ!

ಗೋಡಂಬಿ ಎಂದರೆ ಬಹುತೇಕರಿಗೆ ಇಷ್ಟವಾದ ಡ್ರೈಫ್ರೂಟ್ಸ್‌ಗಳಲ್ಲಿ ಒಂದು. ರುಚಿಯ ಜೊತೆಗೆ ಪೋಷಕಾಂಶಗಳನ್ನೂ ಹೊಂದಿರುವ ಗೋಡಂಬಿಯನ್ನು ಆರೋಗ್ಯದ ಕಣಜ ಎಂದೇ ಕರೆಯಲಾಗುತ್ತದೆ. ಸಾಮಾನ್ಯವಾಗಿ ಗೋಡಂಬಿಯನ್ನು ಹಸಿಯಾಗಿಯೇ ಅಥವಾ ಹುರಿದು ಸೇವಿಸುವವರೇ ಹೆಚ್ಚು. ಆದರೆ, ಗೋಡಂಬಿಯನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದಲೂ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿದಿನ ಐದು ನೆನೆಸಿದ ಗೋಡಂಬಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು ಇಲ್ಲಿವೆ. ಪೋಷಕಾಂಶಗಳ ಆಗರ ಗೋಡಂಬಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್, ಫೈಬರ್ ಹಾಗೂ ವಿವಿಧ ಜೀವಸತ್ವಗಳು ಮತ್ತು ಖನಿಜಾಂಶಗಳಿವೆ. ಇದನ್ನು ನೆನೆಸುವುದರಿಂದ ಮೃದುವಾಗುತ್ತದೆ […]

ನಾಲ್ಕು ವರ್ಷಗಳಲ್ಲಿ 1,389 ಭಾರತೀಯ ಮಕ್ಕಳು ಅಮೆರಿಕಾದ ವಶಕ್ಕೆ, ಟ್ರಂಪ್ ವಲಸೆ ನೀತಿಯ ಪರಿಣಾಮ

ಆದರೆ ಗಮನಿಸಬೇಕಾದ ಸಂಗತಿಯೆಂದರೆ, ವರ್ಷದಿಂದ ವರ್ಷಕ್ಕೆ ಇಂತಹ ಮಕ್ಕಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿದೆ. ಅಮೆರಿಕಾದ ಕಟ್ಟುನಿಟ್ಟಿನ ವಲಸೆ ನಿಯಮಗಳು ಮತ್ತು ತ್ವರಿತ ಗಡಿಪಾರು ಕ್ರಮಗಳು ಈ ಬದಲಾವಣೆಗೆ ಕಾರಣವಾಗಿರಬಹುದು ಎಂದು ವಲಸೆ ಜಾಲಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ಹೇಳಿವೆ.  ನವದೆಹಲಿ(ನ.23): ಅಮೆರಿಕಾದಲ್ಲಿ ಅಕ್ರಮ ವಲಸಿಗರ ವಿರುದ್ಧದ ಕ್ರಮ ಮತ್ತಷ್ಟು ಬಿಗಿಯಾಗುತ್ತಿರುವ ಬೆನ್ನಲ್ಲೇ, ಭಾರತೀಯ ಮಕ್ಕಳಿಗೆ ಸಂಬಂಧಿಸಿದ ಅಚ್ಚರಿಯ ಅಂಕಿ ಅಂಶವೊಂದು ಹೊರಬಿದ್ದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪೋಷಕರು ಅಥವಾ ಪಾಲಕರ ಜೊತೆಗಿಲ್ಲದೆ ಅಮೆರಿಕಾಗೆ ಬಂದಿದ್ದ 1,389 […]

ಶಬರಿಮಲೆ ಯಾತ್ರಾರ್ಥಿಗಳಿಗೆ ವಾರ್ನಿಂಗ್‌ – ಪಂಪಾ ನದಿಗೆ ಬಟ್ಟೆ ಎಸೆದರೆ 5,000 ದಂಡ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ (Ayyappa Swamy Temple) ಭೇಟಿ ನೀಡುವ ಭಕ್ತರಿಗೆ ಜಿಲ್ಲಾಡಳಿತ ಮಹತ್ವದ ಎಚ್ಚರಿಕೆ ನೀಡಿದೆ. ಪವಿತ್ರ ಪಂಪಾ ನದಿಗೆ ಬಟ್ಟೆಗಳನ್ನ ಎಸೆಯುವುದು ಅಥವಾ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದರೆ ಇನ್ಮುಂದೆ ಗರಿಷ್ಠ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ನದಿಯ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪಂಪಾ ನದಿಯ (Pamba river) ಪಾವಿತ್ರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಭಕ್ತರಲ್ಲಿ ಮನವಿ […]