ನಕಲಿ ಖಾತೆ ಸೃಷ್ಟಿಸಿ ಬಿಜೆಪಿ ನಾಯಕರ ವಿರುದ್ಧ ಪೋಸ್ಟ್ ಹಾಕುವವರಿಗೆ ಮುಂದಿನ ದಿನಗಳಲ್ಲಿ ಜೈಲೂಟ ಖಚಿತ: ಹರೀಶ್ ಪೂಂಜಾ ಎಚ್ಚರಿಕೆ

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುವವರಿಗೆ ಇಂದೇ ಎಚ್ಚರಿಕೆ ನೀಡುವ ಕೆಲಸ ಮಾಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಂತಹವರಿಗೆ ಜೈಲೂಟ ಮಾಡಿಸದಿದ್ದರೆ ನಾವು ಬಿಜೆಪಿ ಕಾರ್ಯಕರ್ತರೇ ಅಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗುಡುಗಿದರು. ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಬೈಲೂರಿನಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಈ ದೇಶದ ಮಾನ-ಮರ್ಯಾದೆಯನ್ನು ಹಾಳು […]

ಮಣಿಪಾಲ: ನ.23ರಿಂದ 28ರವರೆಗೆ ಉಸಿರಾಟದ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಣಿಪಾಲ: COPD ಜಾಗೃತಿ ಮಾಸದ ಅಂಗವಾಗಿ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸೆ ಹಾಗೂ ಕೌಮಾರಭೃತ್ಯ ವಿಭಾಗದ ವತಿಯಿಂದ ನವೆಂಬರ್ 23ರಿಂದ 28ರವರೆಗೆ ಉಸಿರಾಟದ ಕಾಯಿಲೆಗಳ ಕುರಿತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಉಡುಪಿ ಅಜ್ಜರಕಾಡಿನ ಮುನಿಯಾಲ್ ಆಯುರ್ವೇದ ಫ್ಯಾಮಿಲಿ ಕ್ಲಿನಿಕ್ ಹಾಗೂ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣೆ, ಉಸಿರಾಟದ ಆರೋಗ್ಯ ತಪಾಸಣೆ, ದೀರ್ಘಕಾಲದ ಕೆಮ್ಮು, ಕಫ, ಉಸಿರಾಟದ […]

ಬಿಸ್ಲೆರಿ ಕಂಪೆನಿಯ ಬಾಟಲಿ ನೀರಿನಲ್ಲಿ ಹಾನಿಕಾರಕ ಅಂಶ ಪತ್ತೆ: ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ FSSAI

ನವದೆಹಲಿ: ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿ (Bisleri) ವಿರುದ್ಧ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ಬಿಸ್ಲೆರಿ ನೀರಿನ ಮಾದರಿಗಳ ಪ್ರಯೋಗಾಲಯ ಪರೀಕ್ಷೆಯಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ನೀರನ್ನು ಅಸುರಕ್ಷಿತ ಎಂದು ವರದಿ ಮಾಡಲಾಗಿದೆ. ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಎಫ್‌ಎಸ್‌ಎಸ್‌ಎಐ ಅನುಮತಿ ನೀಡಿದೆ. ಕಂಪನಿಯ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ನೀರಿನಲ್ಲಿ ಬ್ರೋಮೇಟ್ […]

ಅಜೆಕಾರು: ಬೈಕ್ ಗೆ ಕ್ರೇನ್ ಢಿಕ್ಕಿ- ಸವಾರ ಸಾವು

ಉಡುಪಿ: ಬೈಕ್‌ಗೆ ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಮರ್ಣೆ ಗ್ರಾಮದ ಅಜೆಕಾರು ದೊಡ್ಡಪಲ್ಕೆ ಕ್ರಾಸ್ ಬಳಿ ನ.21ರ ರಾತ್ರಿ ನಡೆದಿದೆ. ಅಜೆಕಾರು ಬೊಂಡುಕುಮೇರಿಯ ಲೋಕೇಶ್ ಕುಲಾಲ್ (36) ಮೃತಪಟ್ಟವರು. ನ.21ರಂದು ರಾತ್ರಿ 9 ಗಂಟೆ ಸುಮಾರಿಗೆ ಲೋಕೇಶ್ ಅವರು ಬೈಕ್‌ನಲ್ಲಿ ಅಜೆಕಾರಿನಿಂದ ಮನೆಗೆ ತೆರಳುತ್ತಿದ್ದಾಗ, ದೊಡ್ಡಪಲ್ಕೆ ಕ್ರಾಸ್ ಬಳಿ ಎದುರಿನಿಂದ ಅಜೆಕಾರು ಕಡೆಗೆ ಅತಿವೇಗವಾಗಿ ಬರುತ್ತಿದ್ದ ಕ್ರೇನ್ ರಸ್ತೆ ಬಲಬದಿಗೆ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. […]

ಶಬರಿಮಲೆ ಭಕ್ತರಿಗೆ ಜಿಲ್ಲಾಡಳಿತದ ಮಹತ್ವದ ಸೂಚನೆ, ಪಂಪಾ ನದಿಗೆ ಬಟ್ಟೆ ಎಸೆದರೆ ರೂ.5,000 ದಂಡ!

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಜಿಲ್ಲಾಡಳಿತ ಮಹತ್ವದ ಎಚ್ಚರಿಕೆ ನೀಡಿದೆ. ಪವಿತ್ರ ಪಂಪಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಎಸೆಯುವುದು ಅಥವಾ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದರೆ ಗರಿಷ್ಠ ₹5,000 ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ಪಂಪಾ ನದಿಯ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನದಿಯ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ. ಕೇರಳ ಮುಖ್ಯಮಂತ್ರಿ ವಿ.ಡಿ. […]