ನಾಲ್ಕು ವರ್ಷಗಳಲ್ಲಿ 1,389 ಭಾರತೀಯ ಮಕ್ಕಳು ಅಮೆರಿಕಾದ ವಶಕ್ಕೆ, ಟ್ರಂಪ್ ವಲಸೆ ನೀತಿಯ ಪರಿಣಾಮ

ಆದರೆ ಗಮನಿಸಬೇಕಾದ ಸಂಗತಿಯೆಂದರೆ, ವರ್ಷದಿಂದ ವರ್ಷಕ್ಕೆ ಇಂತಹ ಮಕ್ಕಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿದೆ. ಅಮೆರಿಕಾದ ಕಟ್ಟುನಿಟ್ಟಿನ ವಲಸೆ ನಿಯಮಗಳು ಮತ್ತು ತ್ವರಿತ ಗಡಿಪಾರು ಕ್ರಮಗಳು ಈ ಬದಲಾವಣೆಗೆ ಕಾರಣವಾಗಿರಬಹುದು ಎಂದು ವಲಸೆ ಜಾಲಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ಹೇಳಿವೆ. 

ನವದೆಹಲಿ(ನ.23): ಅಮೆರಿಕಾದಲ್ಲಿ ಅಕ್ರಮ ವಲಸಿಗರ ವಿರುದ್ಧದ ಕ್ರಮ ಮತ್ತಷ್ಟು ಬಿಗಿಯಾಗುತ್ತಿರುವ ಬೆನ್ನಲ್ಲೇ, ಭಾರತೀಯ ಮಕ್ಕಳಿಗೆ ಸಂಬಂಧಿಸಿದ ಅಚ್ಚರಿಯ ಅಂಕಿ ಅಂಶವೊಂದು ಹೊರಬಿದ್ದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪೋಷಕರು ಅಥವಾ ಪಾಲಕರ ಜೊತೆಗಿಲ್ಲದೆ ಅಮೆರಿಕಾಗೆ ಬಂದಿದ್ದ 1,389 ಭಾರತೀಯ ಅಪ್ರಾಪ್ತ ಮಕ್ಕಳನ್ನು ಅಲ್ಲಿನ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ಅಮೆರಿಕಾದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ (USCBP) ಅಂಕಿ ಅಂಶಗಳನ್ನು ಆಧರಿಸಿದ ವರದಿ ಈ ಮಾಹಿತಿ ಬಹಿರಂಗಪಡಿಸಿದೆ.

ಆದರೆ ಗಮನಿಸಬೇಕಾದ ಸಂಗತಿಯೆಂದರೆ, ವರ್ಷದಿಂದ ವರ್ಷಕ್ಕೆ ಇಂತಹ ಮಕ್ಕಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿದೆ. ಅಮೆರಿಕಾದ ಕಟ್ಟುನಿಟ್ಟಿನ ವಲಸೆ ನಿಯಮಗಳು ಮತ್ತು ತ್ವರಿತ ಗಡಿಪಾರು ಕ್ರಮಗಳು ಈ ಬದಲಾವಣೆಗೆ ಕಾರಣವಾಗಿರಬಹುದು ಎಂದು ವಲಸೆ ಜಾಲಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ಹೇಳಿವೆ.

730ರಿಂದ 51ಕ್ಕೆ ಇಳಿದ ಮಕ್ಕಳ ಸಂಖ್ಯೆ!

ಅಮೆರಿಕದ ಹಣಕಾಸು ವರ್ಷಗಳ ಪ್ರಕಾರ ಪೋಷಕರು ಅಥವಾ ಪಾಲಕರಿಲ್ಲದೆ ಪ್ರಯಾಣಿಸುತ್ತಿದ್ದ ಭಾರತೀಯ ಮಕ್ಕಳ ಸಂಖ್ಯೆ ಹೀಗಿದೆ:

FY 2023: 730 ಮಕ್ಕಳು

FY 2024: 517 ಮಕ್ಕಳು