ಉಡುಪಿ: ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ತೆಂಗಿನ ಮರ ತೆರವು; ಸಾರ್ವಜನಿಕರಿಗೆ ನಿರಾಳ

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಅಪಾಯಕಾರಿಯಾಗಿ ವಾಲಿಕೊಂಡಿದ್ದ ಬೃಹತ್ ತೆಂಗಿನ ಮರವನ್ನು ನಗರಸಭೆ ತೆರವುಗೊಳಿಸಿದೆ. ಈ ಮೂಲಕ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಮನೆಮಾಡಿದ್ದ ಆತಂಕ ದೂರವಾಗಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಸ್ತೆಯತ್ತ ವಾಲಿಕೊಂಡಿದ್ದ ತೆಂಗಿನ ಮರದಲ್ಲಿನ ಒಣಗಿದ ಗರಿಗಳು ಹಾಗೂ ತೆಂಗಿನಕಾಯಿಗಳು ಆಗಾಗ್ಗೆ ರಸ್ತೆಗೆ ಉದುರುತ್ತಿದ್ದವು. ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಅಪಾಯದ ಭೀತಿಯಲ್ಲೇ ಸಂಚರಿಸುವಂತಾಗಿತ್ತು.ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುವುದಲ್ಲದೆ, […]

ಕೋಟ ಅಮೃತೇಶ್ವರೀ ಮೇಳದ ಪ್ರಥಮ ದೇವರ ಸೇವೆ ಆಟ

ಉಡುಪಿ: ಶತಮಾನಗಳ ಇತಿಹಾಸ ಹೊಂದಿರುವ ಕೋಟ ಶ್ರೀಕ್ಷೇತ್ರದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆ ಆಟ ಶ್ರೀಕ್ಷೇತ್ರದಲ್ಲಿ ಭಕ್ತಿಭಾವದಿಂದ ನೆರವೇರಿತು.ಬೆಳಿಗ್ಗೆ ಗಣಹೋಮ, ರಾತ್ರಿ ಗಣಪತಿ ಪೂಜೆ ಹಾಗೂ ಪ್ರಥಮ ದೇವರ ಸೇವೆ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ನೀಡಲಾಗುವ ದಿ. ನಾರ್ಣಪ್ಪ ಉಳ್ಳೂರ ಪ್ರಶಸ್ತಿಯನ್ನು ಬಿಳಾಲು ಕೊಪ್ಪದ ಸದಾನಂದ ಹೆಬ್ಬಾರ್ ಅವರಿಗೆ ಪ್ರದಾನ ಮಾಡಲಾಯಿತು. ಕೋಟ ವೈಕುಂಠ ಸ್ಮರಣಾರ್ಥ ಉಮೇಶ್ ರಾಜ್ ಬೆಂಗಳೂರು ಅವರು ನೀಡುವ […]

ಮಾರುಕಟ್ಟೆಯಲ್ಲಿ ಹೆಚ್ಎಂಟಿ ವಾಚ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿರುವ ನಕಲಿ ವಾಚ್ ಗಳು: ಫ್ಲಿಪ್‌ಕಾರ್ಟ್‌ಗೂ ನೋಟಿಸ್ ಕೊಟ್ಟ HMT

ಬೆಂಗಳೂರು, : ಹಲವು ದಶಕಗಳ ಕಾಲ ಭಾರತೀಯರ ನೆಚ್ಚಿನ ವಾಚ್ ಬ್ರ್ಯಾಂಡ್ ಆಗಿದ್ದ ಹೆಚ್ಎಂಟಿ (HMT) ಇದೀಗ ಮತ್ತೆ ಗ್ರಾಹಕರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ‘ಗಂಡಭೇರುಂಡ ಕನ್ನಡಿಗ’ ಹೆಸರಿನ ವಿಶೇಷ ವಾಚ್ ಸರಣಿಯನ್ನು ಬಿಡುಗಡೆ ಮಾಡಿರುವುದು ಬ್ರ್ಯಾಂಡ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ಹೆಚ್ಎಂಟಿ ವಾಚ್‌ಗಳ ಮೇಲಿನ ಹೆಚ್ಚುತ್ತಿರುವ ಆಸಕ್ತಿಯನ್ನು ದುರುಪಯೋಗಪಡಿಸಿಕೊಂಡು ಮಾರುಕಟ್ಟೆಯಲ್ಲಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ. ಕಂಪನಿಯ […]

ಉಡುಪಿ: ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯೇ ಹೊಂಡಗುಂಡಿಗಳ ತಾಣ!

ಉಡುಪಿ: ಜಿಲ್ಲಾಡಳಿತದ ಕೇಂದ್ರ ಸ್ಥಾನವಾದ ಮಣಿಪಾಲದ ರಜತಾದ್ರಿ ಸಂಕೀರ್ಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯೇ ಒಂದೂವರೆ ವರ್ಷದಿಂದ ಹೊಂಡಗುಂಡಿಗಳಿಂದ ತುಂಬಿಕೊಂಡಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಮರುದುರಸ್ತಿ ಮಾಡದೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ವಾಹನ ಸವಾರರು ಧೂಳಿನಲ್ಲೇ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯನ್ನು ಯಥಾಸ್ಥಿತಿಗೆ ತರಬೇಕಿದ್ದ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು […]

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಕೋಟ ಪಡುಕೆರೆಯ ಹೋಟೆಲ್ ಉದ್ಯಮಿ ಸಾವು

ಉಡುಪಿ: ಬೆಂಗಳೂರಿನ ಬಿಡದಿ ಸಮೀಪ ಗುರುವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕೋಟ ಪಡುಕೆರೆಯ ನಿವಾಸಿ, ಹೋಟೆಲ್ ಉದ್ಯಮಿ ವಿಶ್ವನಾಥ ಎಚ್. (55) ಮೃತಪಟ್ಟಿದ್ದಾರೆ. ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿ ನರಸಿಂಹ ಮೊಗವೀರ ಅವರ ಪುತ್ರ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸುಮಾರು 33 ವರ್ಷಗಳ ಹಿಂದೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ ವಿಶ್ವನಾಥ ಅವರು, ಬಳಿಕ ಬೆಂಗಳೂರಿಗೆ ತೆರಳಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ […]