ವಿವಾಹಿತ ಮಹಿಳೆ ನಾಪತ್ತೆ

ಮೂಡುಬಿದಿರೆ: ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿವಾಹಿತ ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ತೆರಳದೆ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗದಗದವರಾಗಿರುವ, ಇದೀಗ ಮಾರ್ಪಾಡಿ ಗ್ರಾಮದ ಕಡದಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಭುವನೇಶ್ವರಿ (28) ನಾಪತ್ತೆಯಾಗಿರುವ ಮಹಿಳೆ. ಭುವನೇಶ್ವರಿ ಅವರು ಮೂಡುಬಿದಿರೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ನ.10ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಪತಿಯು ಪತ್ನಿಯನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಹೋಗಿದ್ದರು. ಪ್ರತಿದಿನ ಸಂಜೆ 6:30ಕ್ಕೆ ಮನೆಗೆ ಮರಳುತ್ತಿದ್ದ ಭುವನೇಶ್ವರಿ […]

ಉದ್ಯಮಿ ರಮೇಶ್ ನಾಯಕ್ ಆತ್ರಾಡಿ ಇವರಿಗೆ “ಉದ್ಯಮ ರತ್ನ” ಪ್ರಶಸ್ತಿ ಪ್ರದಾನ.

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ತ್ಯುತ್ತಮ ದರ್ಜೆಯ ಅವಲಕ್ಕಿಯನ್ನು ಉತ್ಪಾದನೆ ಮಾಡುತ್ತಿರುವ ಮಾರುತಿ ಉದ್ಯಮ ಇದರ ಪ್ರವರ್ತಕರಾದ ರಮೇಶ್ ನಾಯಕ್ ಆತ್ರಾಡಿ ಇವರ ಉದ್ಯಮ ಶೀಲತೆಯ ಪಯಣ, ಉದ್ಯೋಗ ದಲ್ಲಿ ನಾವಿನ್ಯತೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಜತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡಿ ಕಾರ್ಮಿಕರ ಪ್ರೀತಿ ಯನ್ನು ಗಳಿಸಿರುವ ಸಾಧನೆಗಳನ್ನು ಗಮನಿಸಿ NKSSIA (ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಹುಬ್ಬಳ್ಳಿಯ ಕಾಟನ್ ಕೌಂಟಿ ಕ್ಲಬ್ ನಲ್ಲಿ ಜರಗಿದ ತನ್ನ ವಾರ್ಷಿಕ […]

ತಾಯಿಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತ ರವಿ ಪೂಜಾರಿ

ಉಡುಪಿ: ಭೂಗತ ಲೋಕದಲ್ಲಿ ಕುಖ್ಯಾತಿ ಗಳಿಸಿದ್ದ ರವಿ ಪೂಜಾರಿ, ಆರು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದು, ತಾಯಿಯ ಅಂತಿಮ ದರ್ಶನಕ್ಕಾಗಿ ಶುಕ್ರವಾರ ಹುಟ್ಟೂರಿಗೆ ಬಂದಾಗ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಮಲ್ಪೆ ಸಮೀಪದ ನೆರ್ಗಿಯಲ್ಲಿರುವ ಹಿರಿಯರ ಮನೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಅವರು, ತಾಯಿಯ ಮೃತದೇಹ ಕಂಡ ಕೂಡಲೇ ಬಿಕ್ಕಿ ಬಿಕ್ಕಿ ಅತ್ತರು. ಉಡುಪಿ ಮೂಲದ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ (86) ಗುರುವಾರ ರಾತ್ರಿ ನಿಧನರಾಗಿದ್ದರು. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ರಾಜ್ಯ ಹೈಕೋರ್ಟ್ […]

ಮಂಚಿ ಕುಮೇರಿಯಲ್ಲಿ ವಿದ್ಯುತ್ ಸಮಸ್ಯೆ: ಗ್ರಾಮಸ್ಥರ ಪರದಾಟ

ಉಡುಪಿ: ಮಂಚಿ ಕುಮೇರಿ ಪ್ರದೇಶದಲ್ಲಿ ಕಳೆದ ಹಲವು ಸಮಯದಿಂದ ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪದೇಪದೆ ವಿದ್ಯುತ್ ವ್ಯತ್ಯಯವಾಗುತ್ತಿರುವುದಲ್ಲದೆ, ವೋಲ್ಟೇಜ್ ಏರಿಳಿತದಿಂದಾಗಿ ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಹಾಳಾಗುತ್ತಿವೆ ಎಂಬುದು ಗ್ರಾಮಸ್ಥರ ಅಳಲಾಗಿದೆ. ಈ ಪ್ರದೇಶಕ್ಕೆ ಉದ್ಯಾವರ ಹಾಗೂ ಉಡುಪಿ ಕಡೆಯಿಂದ ಎರಡು ವಿದ್ಯುತ್ ಲೈನ್‌ಗಳ ಸಂಪರ್ಕವಿದ್ದರೂ, ಕೆಲವು ಮನೆಗಳಿಗೆ ಉದ್ಯಾವರ ಫೀಡರ್‌ನಿಂದಲೇ ವಿದ್ಯುತ್ ಪೂರೈಕೆಯಾಗುತ್ತಿದೆ. ಉದ್ಯಾವರ ಫೀಡರ್‌ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದರೂ ಮಂಚಿ ಕುಮೇರಿ ಭಾಗದ ಈ ಮನೆಗಳಿಗೂ […]

ಹೆಬ್ರಿ ಗ್ರಾಮ ಪಂಚಾಯತ್‌ನಲ್ಲಿ ಲಕ್ಷಾಂತರ ರೂಪಾಯಿ ದುರ್ಬಳಕೆ ಆರೋಪ, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ; ಸಮಗ್ರ ತನಿಖೆಗೆ ಒತ್ತಾಯ

ಹೆಬ್ರಿ: ಹೆಬ್ರಿ ಸಮಾಜ ಮಂದಿರದಲ್ಲಿ ನ. 13ರಂದು ನಡೆದ ಹೆಬ್ರಿ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಹೆಬ್ರಿ ಗ್ರಾಮ ಪಂಚಾಯತ್‌ನಲ್ಲಿ ಹಿಂದಿನ ಅವಧಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಸದಾಶಿವ ಸೇರ್ವೆಗಾರವರಿಂದ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ತೀವ್ರ ಚರ್ಚೆಗೆ ಗ್ರಾಸವಾಯಿತು. ಕೋಟ್ಯಂತರ ರೂಪಾಯಿ ವೆಚ್ಚದ ಎಸ್‌ಆರ್‌ಎಂ ಘಟಕದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯಿಂದ ಖರ್ಚು ಮಾಡಿರುವ ಬಗ್ಗೆ ಮಾಹಿತಿಯನ್ನು ಕೇಳಿದಾಗ ತಪ್ಪು ಮಾಹಿತಿಯನ್ನು ನೀಡಿದ್ದು ಯಾಕೆ.ಎಸ್‌ಆರ್‌ಎಂ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ […]