ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಉಡುಪಿಯ ಅಜಯ್ ಪುರುಷೋತ್ತಮ ಶೆಟ್ಟಿ

ಉಡುಪಿ, ನ.7: ಉಡುಪಿಯ ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ಅವರು ನವದೆಹಲಿಯ ೭ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಭೇಟಿಯಾಗಿ ಸಂವಾದ ನಡೆಸಿದರು. ಉಡುಪಿಯ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರಧಾನಿಯವರಿಗೆ ಸ್ಮರಣಿಕೆಯಾಗಿ ನೀಡಿದರು.ಭೇಟಿಯ ಸಂದರ್ಭದಲ್ಲಿ ಭಾರತದ ನಾಗರಿಕ ಪರಂಪರೆ, ಆಧ್ಯಾತ್ಮಿಕತೆ, ತಾಂತ್ರಿಕ ಸ್ವಾವಲಂಬನೆ, ರಾಷ್ಟ್ರೀಯ ಸ್ಥಿರತೆ ಮತ್ತು ‘ವಿಕಸಿತ ಭಾರತ 2047’ರ ದೃಷ್ಟಿಕೋನದ ಕುರಿತು ವಿಸ್ತ್ರತ ಚರ್ಚೆ ನಡೆಯಿತು.ದ್ವಾರಕೆ ಮತ್ತು ಉಡುಪಿ ನಡುವಿನ ಪವಿತ್ರ ನಂಟನ್ನು ಸ್ಮರಿಸಿದ ಮೋದಿಜಿ, ಉಡುಪಿ […]
Youth Festival: ನಿಮ್ಮಲ್ಲಿ ಪ್ರತಿಭೆ ಇದೆಯೇ? ಹಾಗಾದ್ರೆ ಸರ್ಕಾರವೇ ಕೊಡಲಿದೆ ವೇದಿಕೆ! ಈ 4 ದಾಖಲೆ ರೆಡಿ ಇಟ್ಟುಕೊಳ್ಳಿ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನವೆಂಬರ್ 18ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರು: ಜಿಲ್ಲೆಯ ಯುವ ಪ್ರತಿಭೆಗಳಿಗೆ ತಮ್ಮ ಕಲಾ ಕೌಶಲ್ಯ ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಬಂದಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 18ರಂದು ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ. 15ರಿಂದ 29 ವರ್ಷದೊಳಗಿನ ಜಿಲ್ಲೆಯ ಯುವಕ-ಯುವತಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. 2026-27ನೇ ಸಾಲಿನ ಸ್ವಾಮಿ […]
ಪಡಿತರ ಚೀಟಿದಾರರಿಗೆ ಸರ್ಕಾರ ಗುಡ್ ನ್ಯೂಸ್ – ನ.30 ರವರೆಗೆ ಇ-ಕೆವೈಸಿ ಅವಧಿ ವಿಸ್ತರಣೆ

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇ-ಕೆವೈಸಿಗೆ (e-KYC) ನೀಡಿದ್ದ ಗಡುವನ್ನು ಸರ್ಕಾರ ವಿಸ್ತರಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನವೆಂಬರ್ 30 ರವರೆಗೂ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿದೆ. ನ.30 ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ. ಯೋಜನೆಗಳ ಸೌಲಭ್ಯಗಳು ನಿರಂತರವಾಗಿ ಮುಂದುವರಿಯಲು, ಬಾಕಿ ಇರುವ ಎಲ್ಲಾ ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಮರು ಇ- ಕೆವೈಸಿ ಮಾಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ. ನ.10 ರವರೆಗೂ ಇ-ಕೆವೈಸಿಗೆ […]
ಮುಂದುವರಿದ ಯಶ್ ನಟನೆಯ ‘ರಾಮಾಯಣ’ ಅಬ್ಬರ; 6 ದಿನಗಳಲ್ಲಿ 823 ಕೋಟಿ ರೂ. ಕಲೆಕ್ಷನ್

ನಿತೇಶ್ ತಿವಾರಿ ಅವರ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana: Rise of a Legend) ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಆರು ದಿನಗಳಲ್ಲೇ ಜಾಗತಿಕ ಮಟ್ಟದಲ್ಲಿ 800 ಕೋಟಿ ರೂಪಾಯಿಗಳ ಗಳಿಕೆಯನ್ನು ದಾಟಿದೆ. ರಣಬೀರ್ ಕಪೂರ್, ಯಶ್ (Yash) ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಪೌರಾಣಿಕ ಮಹಾಕಾವ್ಯವು, ಮಂಗಳವಾರ ಒಂದೇ ದಿನ ಭಾರತದಲ್ಲಿ 94.10 ಕೋಟಿ ರೂ. ಗಳಿಸಿದೆ. ದೇಶೀಯ ಒಟ್ಟು ಗಳಿಕೆ 526.50 ಕೋಟಿ ರೂ.ಗೆ ತಲುಪಿದ್ದು, […]
ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ

ಕ್ರೀಡಾಕ್ಷೇತ್ರದೊಂದಿಗೆ ಸಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ. ಬದುಕಿನ ಅಂಧಕಾರ ಕಳೆಯುವ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಏನಾದರೊಂದು ವಿಶೇಷ ಜ್ಞಾನ ನೀಡುವುದು ಈ ಸಂಘಟನೆಯ ವಿಶಿಷ್ಟತೆಯಾಗಿದೆ. ತುಳು ಭಾಷೆಗೆ ಮಾನ್ಯತೆಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ತುಳು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದೆ. ಹೀಗಾಗಿ ತುಳುನಾಡಿನ ವಿಶಿಷ್ಟತೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನ ಬಿಂಬಿಸುವ ಬೃಹತ್ […]