ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ವತಿಯಿಂದ ದೀಪಾವಳಿ ಹಬ್ಬ ಆಚರಣೆ

ಹಿರಿಯಡಕ: ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ಇವರ ವತಿಯಿಂದ ಕೊಂಡಾಡಿ ಪುರದೊಡೆಯ ಶ್ರೀರಾಮ ದೇವರ ಸನ್ನಿಧಿಯಲ್ಲಿ ಹಣತೆ ದೀಪಗಳನ್ನು ಹಚ್ಚಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಸಂಘದ ಸದಸ್ಯರಾದ ತುಶಾಂತ್ ಕೊಂಡಾಡಿ ಇವರ ಕೈಚಳಕದಿಂದ ಸುಮಾರು 300 ಗೆರಟೆಗಳಿಂದ ತಯಾರಿಸಲ್ಪಟ್ಟ ಗೂಡು ದೀಪವನ್ನು ಏರಿಸಿಲಾಯಿತು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿರಂತರ 28 ಗಂಟೆಗಳ ಗಾಯನದ ಮೂಲಕ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿರುವ ಯಶವಂತ್ ಎಂ. ಜಿ ಯವರಿಗೆ ಅಭಿನಂದಿಸಲಾಯಿತು.

ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್: ಇ-ಕೆವೈಸಿ ಗಡುವು ನವೆಂಬರ್ 30ರವರೆಗೆ ವಿಸ್ತರಣೆ

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಪಡಿತರ ಚೀಟಿಗೆ ಇ-ಕೆವೈಸಿ (e-KYC) ಮಾಡಿಸಲು ನೀಡಲಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಆಹಾರ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ನವೆಂಬರ್ 10 ಇ-ಕೆವೈಸಿ ಮಾಡಿಸಲು ಕೊನೆಯ ದಿನವಾಗಿತ್ತು. ಆದರೆ, ಫಲಾನುಭವಿಗಳಿಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸುವ ಉದ್ದೇಶದಿಂದ ಗಡುವನ್ನು ವಿಸ್ತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆಯನ್ನು ಎರಡು ವಿಧಾನಗಳಲ್ಲಿ ಪೂರ್ಣಗೊಳಿಸಬಹುದು. ಮನೆಯಲ್ಲೇ ಕುಳಿತು ಅನ್ನಸೇವೆ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಇ-ಕೆವೈಸಿ ಮಾಡಿಸಿಕೊಳ್ಳಬಹುದು. […]

ಉದ್ಯೋಗಾವಕಾಶ

ಉಡುಪಿಯಲ್ಲಿ ಆಫೀಸ್ ಅಸಿಸ್ಟೆಂನ್ಸ್ ಹುದ್ದೆಗೆ ಉದ್ಯೋಗಾವಕಾಶ ನಡೆಯುತ್ತಿದೆ ಆಸಕ್ತರು ಕೂಡಲೇ ಸಂಪರ್ಕಿಸಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9342231885

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಉಡುಪಿಯ ಅಜಯ್ ಪುರುಷೋತ್ತಮ ಶೆಟ್ಟಿ

ಉಡುಪಿ, ನ.7: ಉಡುಪಿಯ ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ಅವರು ನವದೆಹಲಿಯ ೭ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಭೇಟಿಯಾಗಿ ಸಂವಾದ ನಡೆಸಿದರು. ಉಡುಪಿಯ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರಧಾನಿಯವರಿಗೆ ಸ್ಮರಣಿಕೆಯಾಗಿ ನೀಡಿದರು.ಭೇಟಿಯ ಸಂದರ್ಭದಲ್ಲಿ ಭಾರತದ ನಾಗರಿಕ ಪರಂಪರೆ, ಆಧ್ಯಾತ್ಮಿಕತೆ, ತಾಂತ್ರಿಕ ಸ್ವಾವಲಂಬನೆ, ರಾಷ್ಟ್ರೀಯ ಸ್ಥಿರತೆ ಮತ್ತು ‘ವಿಕಸಿತ ಭಾರತ 2047’ರ ದೃಷ್ಟಿಕೋನದ ಕುರಿತು ವಿಸ್ತ್ರತ ಚರ್ಚೆ ನಡೆಯಿತು.ದ್ವಾರಕೆ ಮತ್ತು ಉಡುಪಿ ನಡುವಿನ ಪವಿತ್ರ ನಂಟನ್ನು ಸ್ಮರಿಸಿದ ಮೋದಿಜಿ, ಉಡುಪಿ […]

Youth Festival: ನಿಮ್ಮಲ್ಲಿ ಪ್ರತಿಭೆ ಇದೆಯೇ? ಹಾಗಾದ್ರೆ ಸರ್ಕಾರವೇ ಕೊಡಲಿದೆ ವೇದಿಕೆ! ಈ 4 ದಾಖಲೆ ರೆಡಿ ಇಟ್ಟುಕೊಳ್ಳಿ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನವೆಂಬರ್ 18ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರು: ಜಿಲ್ಲೆಯ ಯುವ ಪ್ರತಿಭೆಗಳಿಗೆ ತಮ್ಮ ಕಲಾ ಕೌಶಲ್ಯ ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಬಂದಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 18ರಂದು ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ. 15ರಿಂದ 29 ವರ್ಷದೊಳಗಿನ ಜಿಲ್ಲೆಯ ಯುವಕ-ಯುವತಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. 2026-27ನೇ ಸಾಲಿನ ಸ್ವಾಮಿ […]