ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ

ಕ್ರೀಡಾಕ್ಷೇತ್ರದೊಂದಿಗೆ ಸಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ. ಬದುಕಿನ ಅಂಧಕಾರ ಕಳೆಯುವ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಏನಾದರೊಂದು ವಿಶೇಷ ಜ್ಞಾನ ನೀಡುವುದು ಈ ಸಂಘಟನೆಯ ವಿಶಿಷ್ಟತೆಯಾಗಿದೆ. ತುಳು ಭಾಷೆಗೆ ಮಾನ್ಯತೆಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ತುಳು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದೆ. ಹೀಗಾಗಿ ತುಳುನಾಡಿನ ವಿಶಿಷ್ಟತೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನ ಬಿಂಬಿಸುವ ಬೃಹತ್ […]
ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಪುತ್ತಿಗೆ ಶ್ರೀಗಳಿಂದ ಗೋಪೂಜೆ

ಅಮೆರಿಕ: ಬಲಿಪ್ರತಿಪದೆಯ ಪುಣ್ಯ ಸಂದರ್ಭದಲ್ಲಿ ಉಡುಪಿ ಶ್ರೀಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋದಲ್ಲಿರುವ ಗೋಶಾಲೆಗೆ ಭೇಟಿ ನೀಡಿ, ಗೋಮಾತೆಯ ಪೂಜೆಯನ್ನು ಭಕ್ತಿಶ್ರದ್ಧೆಯಿಂದ ನೆರವೇರಿಸಿದರು. ಶ್ರೀಕಂಠ ಶಾಸ್ತ್ರಿಗಳು ನಿರ್ವಹಿಸುತ್ತಿರುವ ಈ ಗೋಶಾಲೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಪಾದರು, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಭಕ್ತರನ್ನು ಅನುಗ್ರಹಿಸಿದರು. ಗೋಶಾಲೆಯ ಆವರಣದಲ್ಲಿರುವ ಭವ್ಯ ದೇವಾಲಯಕ್ಕೂ ಶ್ರೀಪಾದರು ಭೇಟಿ ನೀಡಿದರು. ಪರಮಪೂಜ್ಯ ಪುತ್ತಿಗೆ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಮಠದ ಪ್ರಸಾದಾಚಾರ್ಯರು ಪೂಜಾ ವಿಧಿವಿಧಾನಗಳನ್ನು […]
ನಿರಂತರ ಕಲಿಕೆ ಅಭಿವೃದ್ಧಿಗೆ ಅಗತ್ಯ, ಸದಾ ಬದಲಾವಣೆಗೆ ಹೊಂದಿಕೊಳ್ಳಿ: ಶಶಿ ಶೇಖರ್ ವೆಂಪತಿ ಅಭಿಪ್ರಾಯ

ಕಾರ್ಕಳ: ಪದವಿ ಪಡೆದು ವೃತ್ತಿಜೀವನಕ್ಕೆ ಪ್ರವೇಶಿಸುವುದು ಕಲಿಕೆಯ ಅಂತ್ಯವಲ್ಲ, ಬದಲಾಗಿ ಹೊಸ ಸವಾಲುಗಳನ್ನು ಎದುರಿಸುವ ಪಯಣದ ಆರಂಭ. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ನಿರಂತರ ಕಲಿಕೆ, ವಿಷಯಾಧಾರಿತ ಜ್ಞಾನ, ಉತ್ತಮ ಸಂವಹನ ಹಾಗೂ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಸಾರ ಭಾರತಿಯ ಮಾಜಿ ಸಿಇಒ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಧ್ಯಕ್ಷ ಶಶಿ ಶೇಖರ್ ವೆಂಪತಿ ಅಭಿಪ್ರಾಯಪಟ್ಟರು. ಶನಿವಾರ ನಿಟ್ಟೆ ಕ್ಯಾಂಪಸ್ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಮೂರನೇ ಅಧಿವೇಶನದಲ್ಲಿ ಘಟಿಕೋತ್ಸವ ಭಾಷಣ ಮಾಡಿದ […]