ರೈತ ಕುಟುಂಬಗಳಿಗೆ ರೂ.5,000 ಬರ ಪರಿಹಾರ: ಎರಡು ಹಂತಗಳಲ್ಲಿ ಹಣ ಬಿಡುಗಡೆಗೆ ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲಿನ ಗೊಂದಲಗಳನ್ನು ಸರಿಪಡಿಸಿ, ಎಲ್ಲ ಅರ್ಹ ಕುಟುಂಬಗಳಿಗೂ ಹಣ ತಲುಪಿಸಲು ಸರ್ಕಾರ ಮುಂದಾಗಿದೆ. ಪ್ರತಿ ರೈತ ಕುಟುಂಬಕ್ಕೆ ಒಟ್ಟು 5,000 ರೂ. ಪರಿಹಾರ ನೀಡಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ 2,500 ರೂ. ಹಾಗೂ ಎರಡನೇ ಹಂತದಲ್ಲಿ ಮತ್ತೆ 2,500 ರೂ. ನೀಡಲು ನಿರ್ಧರಿಸಲಾಗಿದೆ. ಬರ ಪರಿಹಾರ ವಿತರಣೆಯ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪರಿಹಾರ […]
ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ: ಎರಡು-ಮೂರು ದಿನಕ್ಕೊಮ್ಮೆ ವೈದ್ಯರ ಭೇಟಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ನ್ಯಾಯಾಲಯದ ಆದೇಶದ ಮೇರೆಗೆ ಜೈಲಿನಲ್ಲೇ ಫಿಸಿಯೋಥೆರಪಿ (Physiotherapy) ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಸಂಜಯ್ ಗಾಂಧಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರು ಜೈಲಿಗೆ ಭೇಟಿ ನೀಡಿ ದರ್ಶನ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಜೈಲಾಧಿಕಾರಿಗಳು ಆಸ್ಪತ್ರೆಯ ವೈದ್ಯರಿಗೆ ಮನವಿ ಮಾಡಿದ್ದು, ಅದರಂತೆ ಚಿಕಿತ್ಸೆ ಆರಂಭಿಸಲಾಗಿದೆ. ಪ್ರತಿ ಎರಡು-ಮೂರು ದಿನಗಳಿಗೊಮ್ಮೆ ತಜ್ಞ ವೈದ್ಯರು ಜೈಲಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಿದ್ದಾರೆ. ಬ್ಯಾರಕ್ನಲ್ಲೇ ಒಂದೂವರೆ ಗಂಟೆ ಚಿಕಿತ್ಸೆ ಫಿಸಿಯೋಥೆರಪಿಗೆ ಅಗತ್ಯವಿರುವ ವೈದ್ಯಕೀಯ […]
ಎರಡು ಬಾರಿ ಕ್ಯಾನ್ಸರ್ ಭೀತಿ ಎದುರಿಸಿದ್ದ ಸೋನಿಯಾ ಗಾಂಧಿ: ಆತ್ಮಕಥನದಲ್ಲಿ ಆರೋಗ್ಯದ ಗಂಭೀರ ಮಾಹಿತಿಗಳ ಬಹಿರಂಗ

ನವದೆಹಲಿ: ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕಥನ ‘Belonging: A Journey of Love’ ಪುಸ್ತಕದಲ್ಲಿ ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಎರಡು ಬಾರಿ ಕ್ಯಾನ್ಸರ್ ಭೀತಿ ಎದುರಿಸಿದ್ದ ಸಂಗತಿ ಸೇರಿದಂತೆ ತಾವು ನಡೆಸಿಕೊಂಡ ರಹಸ್ಯ ಶಸ್ತ್ರಚಿಕಿತ್ಸೆಗಳ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದಾಗ ಆಘಾತ ಮತ್ತು ಆತಂಕಕ್ಕೆ ಒಳಗಾಗಿದ್ದೆ ಎಂದು ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಎರಡನೇ ಬಾರಿ ಕ್ಯಾನ್ಸರ್ ಭೀತಿ ಎದುರಾದಾಗ […]
ಉಡುಪಿಯಲ್ಲಿದೆ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ತಂತ್ರಜ್ಞರ ಹುದ್ದೆಗೆ ನೇಮಕಾತಿ: ಅರ್ಹತೆ ಏನು? ಸೌಲಭ್ಯಗಳೇನು?

ಉಡುಪಿ: ಹಡಗು ನಿರ್ಮಾಣ ಉದ್ಯಮದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಯ ಶಿಪ್ಯಾರ್ಡ್ ಘಟಕದಲ್ಲಿ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ತಂತ್ರಜ್ಞರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ವರ್ಕ್ ಮಿತ್ರ (Workmithra) ಸಂಸ್ಥೆಯ ಮೂಲಕ ಪವರ್ ನೆಟ್ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಈ ನೇಮಕಾತಿ ನಡೆಯಲಿದೆ. ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ಐಟಿಐ ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜತೆಗೆ ನಿರ್ವಹಣಾ ವಿಭಾಗದಲ್ಲಿ 2ರಿಂದ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ […]
ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ವತಿಯಿಂದ ದೀಪಾವಳಿ ಹಬ್ಬ ಆಚರಣೆ

ಹಿರಿಯಡಕ: ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ಇವರ ವತಿಯಿಂದ ಕೊಂಡಾಡಿ ಪುರದೊಡೆಯ ಶ್ರೀರಾಮ ದೇವರ ಸನ್ನಿಧಿಯಲ್ಲಿ ಹಣತೆ ದೀಪಗಳನ್ನು ಹಚ್ಚಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಸಂಘದ ಸದಸ್ಯರಾದ ತುಶಾಂತ್ ಕೊಂಡಾಡಿ ಇವರ ಕೈಚಳಕದಿಂದ ಸುಮಾರು 300 ಗೆರಟೆಗಳಿಂದ ತಯಾರಿಸಲ್ಪಟ್ಟ ಗೂಡು ದೀಪವನ್ನು ಏರಿಸಿಲಾಯಿತು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿರಂತರ 28 ಗಂಟೆಗಳ ಗಾಯನದ ಮೂಲಕ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿರುವ ಯಶವಂತ್ ಎಂ. ಜಿ ಯವರಿಗೆ ಅಭಿನಂದಿಸಲಾಯಿತು.