ಮುರಸು ಚಂಡಮಾರುತಕ್ಕೆ ಆಂಧ್ರಪ್ರದೇಶ ತತ್ತರ: ಇಬ್ಬರು ಸಾವು, 344 ಕೋಟಿ ರೂ. ನಷ್ಟ; ನೆರವಿಗೆ ಧಾವಿಸಿದ ಕರ್ನಾಟಕ

ಅಮರಾವತಿ: ಕಳೆದ 14 ವರ್ಷಗಳಲ್ಲೇ ಅತ್ಯಂತ ಪ್ರಬಲ ಚಂಡಮಾರುತಗಳಲ್ಲಿ ಒಂದೆಂದು ಹೇಳಲಾಗುತ್ತಿರುವ ‘ಮುರಸು’ ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರಿ ಹಾನಿ ಉಂಟುಮಾಡಿದೆ. ಚಂಡಮಾರುತದ ಅಬ್ಬರಕ್ಕೆ ಇಬ್ಬರು ಮೃತಪಟ್ಟಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 344 ಕೋಟಿ ರೂ. ನಷ್ಟ ಸಂಭವಿಸಿದೆ. ನವೆಂಬರ್ 2ರ ತಡರಾತ್ರಿ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಬಿರುಗಾಳಿ ಸಹಿತ ಮಳೆ, ನವೆಂಬರ್ 3ರ ಬೆಳಗಿನ ಜಾವ ಕರಾವಳಿ ದಾಟಿ ದುರ್ಬಲಗೊಂಡಿದೆ. ಆದರೂ ಚಂಡಮಾರುತದ ಪರಿಣಾಮದಿಂದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 1.75 ಲಕ್ಷ […]

ನಾಸಾದ 22 ವರ್ಷ ಹಳೆಯ ಉಪಗ್ರಹ ಇಂದು ಭೂಮಿಗೆ: ಬೆಂಗಳೂರಿಗೂ ಬೀಳಲಿದೆಯಂತೆ ಉಪಗ್ರಹದ ಅವಶೇಷ!

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ‘ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ’ (Neil Gehrels Swift Observatory) ಹೆಸರಿನ ಈ ಉಪಗ್ರಹದ ಅವಶೇಷಗಳು ಭೂಮಿಯ ಯಾವ ಭಾಗದಲ್ಲಿ ಪತನಗೊಳ್ಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳೂ ಸೇರಿರುವುದು ಕುತೂಹಲ ಮೂಡಿಸಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ ಸುಮಾರು 2 […]

ಪ್ರದೀಪ್ ಪೂಜಾರಿಗೆ ಹಲ್ಲೆಗೈದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶದಿಂದ ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಕೃತವಾಗಿ ಬಂಧಿಸಿದ ಬಳಿಕ ಆರೋಪಿಗಳ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್ ತಿಳಿಸಿದ್ದಾರೆ.

14 ವರ್ಷದಲ್ಲೇ ಪ್ರಬಲ ಚಂಡಮಾರುತ – ಮುರಸು ಅಬ್ಬರಕ್ಕೆ 2 ಬಲಿ, 344 ಕೋಟಿ ನಷ್ಟ

ಅಮರಾವತಿ: ಮುರಸು ಚಂಡಮಾರುತ 14 ವರ್ಷದಲ್ಲೇ ಪ್ರಬಲ ಚಂಡಮಾರುತ (Cyclone) ಇದಾಗಿದ್ದು, ಅಬ್ಬರಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಬರೋಬ್ಬರಿ 344 ಕೋಟಿ ನಷ್ಟವಾಗಿದೆ. ಆಂಧ್ರಪ್ರದೇಶದ (Andhra Pradesh) ಕರಾವಳಿ (Karavali) ಭಾಗದಲ್ಲಿ ಮುರಸು ಚಂಡಮಾರುತ ಭಾರಿ ನಷ್ಟವನ್ನುಂಟು ಮಾಡಿದೆ. ಸೋಮವಾರ (ನ.2) ತಡರಾತ್ರಿ ಅಪ್ಪಳಿಸಿದ ಈ ಬಿರುಗಾಳಿ ಮಳೆಯು, ಮಂಗಳವಾರ (ನ.3) ಬೆಳಗಿನ ಜಾವ ಕರಾವಳಿ ದಾಟಿ ದುರ್ಬಲಗೊಂಡಿದೆ. ಆದರೆ ಇದರ ಪ್ರಭಾವದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.  ಚಂಡಮಾರುತದ ಸಂಬಂಧಿತ ಅವಘಡಗಳಿಗೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 1.75 […]

ತಮಿಳುನಾಡಿಗೆ ನಿರಂತರವಾಗಿ ನೀರು – ಮತ್ತೆ 100 ಅಡಿಗೆ ಕುಸಿದ ಕೆಆರ್‌ಎಸ್

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ (KRS) ಜಲಾಶಯದ ನೀರಿನ ಮಟ್ಟ ಮತ್ತೆ 100 ಅಡಿಗೆ ಕುಸಿದಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ವಾರದ ಹಿಂದೆ 104 ಅಡಿ ಇದ್ದ ಜಲಾಶಯದ ನೀರಿನ ಮಟ್ಟ, ಇದೀಗ ಮತ್ತೊಮ್ಮೆ ನೂರು ಅಡಿಗೆ ಕುಸಿದಿದೆ. ಸದ್ಯ ಜಲಾಶಯಕ್ಕೆ ಕೇವಲ 548 ಕ್ಯೂಸೆಕ್ ಮಾತ್ರ ಒಳಹರಿವು ಇದ್ದು, 7,871 ಕ್ಯೂಸೆಕ್ ಹೊರಹರಿವು ಇದೆ. ಇದರಿಂದ ಸದ್ಯ ಜಲಾಶಯದಲ್ಲಿ 100.12 ಅಡಿ ನೀರಿನ […]