ತಮಿಳುನಾಡಿಗೆ ನಿರಂತರವಾಗಿ ನೀರು – ಮತ್ತೆ 100 ಅಡಿಗೆ ಕುಸಿದ ಕೆಆರ್ಎಸ್

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್ಎಸ್ (KRS) ಜಲಾಶಯದ ನೀರಿನ ಮಟ್ಟ ಮತ್ತೆ 100 ಅಡಿಗೆ ಕುಸಿದಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ವಾರದ ಹಿಂದೆ 104 ಅಡಿ ಇದ್ದ ಜಲಾಶಯದ ನೀರಿನ ಮಟ್ಟ, ಇದೀಗ ಮತ್ತೊಮ್ಮೆ ನೂರು ಅಡಿಗೆ ಕುಸಿದಿದೆ. ಸದ್ಯ ಜಲಾಶಯಕ್ಕೆ ಕೇವಲ 548 ಕ್ಯೂಸೆಕ್ ಮಾತ್ರ ಒಳಹರಿವು ಇದ್ದು, 7,871 ಕ್ಯೂಸೆಕ್ ಹೊರಹರಿವು ಇದೆ. ಇದರಿಂದ ಸದ್ಯ ಜಲಾಶಯದಲ್ಲಿ 100.12 ಅಡಿ ನೀರಿನ […]
ಸೋನಮ್ ವಾಂಗ್ಚುಕ್ ಶಾಲೆ ಬಂದ್ ಮಾಡಲು ಲಡಾಖ್ ಆಡಳಿತದಿಂದ ನೋಟಿಸ್

ಶ್ರೀನಗರ: ಪರಿಸರ ಕಾರ್ಯಕರ್ತ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ (Sonam Wangchuk) ಸ್ಥಾಪಿಸಿರುವ ಲಡಾಖ್ನ ಡೆಸರ್ಟ್ ಫ್ಲವರ್ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಲಡಾಖ್ ಆಡಳಿತ ಸೂಚಿಸಿದೆ. ಶಾಲೆಗೆ ಸಂಬಂಧಿಸಿದ ಭೂಮಿ ಹಂಚಿಕೆ ರದ್ದತಿ ಪ್ರಕರಣ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೋನಮ್ ವಾಂಗ್ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (HIAL) ಸಂಸ್ಥೆಗೆ ಈ ಸೂಚನೆ ನೀಡಲಾಗಿದೆ. ಲೇಹ್ನ […]
ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್, ಕಾಂಗ್ರೆಸ್ಗೆ ಸೋಲುವ ಸಿಚುವೇಶನ್: ಆರ್ ಅಶೋಕ್

ಬೆಂಗಳೂರು: ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಕಾಂಗ್ರೆಸ್ ನಾಯಕರೇ ಎಂಬುದು ಸಾಬೀತಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸ್ಟಿಂಗ್ ಆಪರೇಷನ್ ವಿವಾದದ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೂ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು […]
ಉಡುಪಿ: ಬೈಲೂರು ವಾರ್ಡ್ ಮುಖ್ಯರಸ್ತೆ ಡಾಮರೀಕರಣಕ್ಕೆ ಮಾಜಿ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ಮನವಿ….

31ನೇ ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದಿಂದ ಪಿ.ಪಿ.ಸಿ ಕಾಲೇಜಿನ ಕಡೆ ಸಾಗುವ ಮುಖ್ಯ ರಸ್ತೆಯಲ್ಲಿರುವ ಒಳಚರಂಡಿ ಪೈಪ್ಲೈನ್ ಸಣ್ಣ ಗಾತ್ರದಲ್ಲಿದ್ದ ಕಾರಣದಿಂದಾಗಿ ಕಳೆದ 13 ವರ್ಷದಿಂದ ನಿರಂತರವಾಗಿ ಒಳಚರಂಡಿಯಿಂದ ಕೊಳಚೆ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದ ಕಾರಣ ಅಲ್ಲಿನ ನಾಗರಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿರುವದನ್ನು ಮನಗಂಡು ನಗರಸಭೆಯಿಂದ ರೂ. 97 ಲಕ್ಷವನ್ನು ಒಳಚರಂಡಿಯ ದೊಡ್ಡ ಗಾತ್ರದ ಪೈಪ್ಲೈನ್ಗೆ ಹಾಗೂ ರಸ್ತೆಯ ಸಂಪೂರ್ಣ ಪೆವರ್ ಫಿನಿಷ್ ಮಾದರಿಯಲ್ಲಿ ಡಾಮರೀಕರಣ ಮಾಡಲು ಮೀಸಲಿಟ್ಟಿದ್ದು ಒಳಚರಂಡಿಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು […]