ಅಮೆಜಾನ್ ಕಸ್ಟಮರ್ ಕೇರ್ ಹೆಸರಲ್ಲಿ ಹೀಗೂ ಮೋಸ ಮಾಡ್ತಾರೆ ಎಚ್ಚರ: ಫ್ಯಾನ್ ಕೊಳ್ಳಲು ಹೋಗಿ 1.30 ಲಕ್ಷ ಕಳೆದುಕೊಂಡ ಮಂಗಳೂರಿನ ಮಹಿಳೆ!

ಮಂಗಳೂರು: ಆನ್ಲೈನ್ನಲ್ಲಿ ಖರೀದಿಸಿದ್ದ ಸೀಲಿಂಗ್ ಫ್ಯಾನ್ ಆರ್ಡರ್ ರದ್ದಾಗಿ, ಹಣ ಮರುಪಾವತಿ ಪಡೆಯಲು ಗೂಗಲ್ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ನಂಬರ್ ಹುಡುಕಿದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.30 ಲಕ್ಷ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು 37 ವರ್ಷದ ಮಹಿಳೆಯೊಬ್ಬರು ಮಂಗಳೂರಿನ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ. ರಿಫಂಡ್ ಹೆಸರಿನಲ್ಲಿ ವಂಚನೆ ದೂರಿನ […]
ಇಂದು ಮಧ್ಯರಾತ್ರಿಯಿಂದಲೇ ಸರಕಾರಿ ಬಸ್ ದರ ಏರಿಕೆ! ಎಷ್ಟು ಏರಿದೆ ಪ್ರಯಾಣ ದರ?

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರವನ್ನೂ ಪರಿಷ್ಕರಿಸಲಾಗಿದೆ. ವಾಯವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್ಆರ್ಟಿಸಿ ಬಸ್ಗಳ ಪ್ರಯಾಣ ದರದಲ್ಲಿ ಶೇ.23ರಷ್ಟು ಹಾಗೂ ಬಿಎಂಟಿಸಿ ಬಸ್ಗಳ ಪ್ರಯಾಣ ದರದಲ್ಲಿ ಶೇ.35ರಷ್ಟು ಹೆಚ್ಚಳ ಮಾಡಲಾಗಿದೆ. ಹೊಸ ದರಗಳು ಇಂದೇ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಡೀಸೆಲ್ ಬೆಲೆ […]
ಗೂಗಲ್ ಪೇನಲ್ಲೇ ಇನ್ನು ಶಾಪಿಂಗ್ ಭಾಗ್ಯ: ವರ್ಚುವಲ್ ಟ್ರಯಲ್ ನೋಡಿ ಬಟ್ಟೆ ಖರೀದಿಸುವ ವಿನೂತನ ಫೀಚರ್: ಗೂಗಲ್ ನಿಂದ ಶುರುವಾಯ್ತು ‘ಡಿಸ್ಕವರ್ ಶಾಪ್’

ಭಾರತೀಯರ ದೈನಂದಿನ ಹಣಕಾಸು ವಹಿವಾಟಿನ ಪ್ರಮುಖ ಆಪ್ ಆಗಿರುವ ಗೂಗಲ್ ಪೇ (Google Pay) ಇದೀಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ. ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಆಪ್ನಲ್ಲಿ ಇನ್ಮುಂದೆ ಫ್ಯಾಷನ್ ಉತ್ಪನ್ನಗಳ ಶಾಪಿಂಗ್ಗೂ ಅವಕಾಶ ಕಲ್ಪಿಸಲು ಗೂಗಲ್ ಮುಂದಾಗಿದೆ. ಇದಕ್ಕಾಗಿ ‘ಡಿಸ್ಕವರ್ ಶಾಪ್’ (Discover Shop) ಎಂಬ ಹೊಸ ವೈಶಿಷ್ಟ್ಯವನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದೆ. ಗೂಗಲ್ ತನ್ನ ಅಧಿಕೃತ ಬ್ಲಾಗ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸದ್ಯ ಆಯ್ದ ಕೆಲವು ಬಳಕೆದಾರರಿಗೆ ಮಾತ್ರ […]
ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳು ಪೊಲೀಸರು ವಶಕ್ಕೆ

ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಪ್ರದೀಪ್ ಪೂಜಾರಿ ಅವರ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದ್ದು, ಬಂಧನಕ್ಕೆ ಸಂಬಂಧಿಸಿದ ಅಧಿಕೃತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆರೋಪಿಗಳ […]
ಮುರಸು ಚಂಡಮಾರುತಕ್ಕೆ ಆಂಧ್ರಪ್ರದೇಶ ತತ್ತರ: ಇಬ್ಬರು ಸಾವು, 344 ಕೋಟಿ ರೂ. ನಷ್ಟ; ನೆರವಿಗೆ ಧಾವಿಸಿದ ಕರ್ನಾಟಕ

ಅಮರಾವತಿ: ಕಳೆದ 14 ವರ್ಷಗಳಲ್ಲೇ ಅತ್ಯಂತ ಪ್ರಬಲ ಚಂಡಮಾರುತಗಳಲ್ಲಿ ಒಂದೆಂದು ಹೇಳಲಾಗುತ್ತಿರುವ ‘ಮುರಸು’ ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರಿ ಹಾನಿ ಉಂಟುಮಾಡಿದೆ. ಚಂಡಮಾರುತದ ಅಬ್ಬರಕ್ಕೆ ಇಬ್ಬರು ಮೃತಪಟ್ಟಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 344 ಕೋಟಿ ರೂ. ನಷ್ಟ ಸಂಭವಿಸಿದೆ. ನವೆಂಬರ್ 2ರ ತಡರಾತ್ರಿ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಬಿರುಗಾಳಿ ಸಹಿತ ಮಳೆ, ನವೆಂಬರ್ 3ರ ಬೆಳಗಿನ ಜಾವ ಕರಾವಳಿ ದಾಟಿ ದುರ್ಬಲಗೊಂಡಿದೆ. ಆದರೂ ಚಂಡಮಾರುತದ ಪರಿಣಾಮದಿಂದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 1.75 ಲಕ್ಷ […]