ಮಾರ್ಪಳ್ಳಿ ದೇವಸ್ಥಾನದಲ್ಲಿ ಚಂಡಿಕಾ ಹೋಮ

ಉಡುಪಿ: ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಚಂಡಿಕಾ ಹೋಮ ಶ್ರದ್ಧಾಭಕ್ತಿಯಿಂದ ನಡೆಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಹೋಮದಲ್ಲಿ ಯಾಗ ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು. ಸಂಜೆ ದೇವರಿಗೆ ವಿಶೇಷ ರಂಗಪೂಜೆ ಜರುಗಿತು. ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಮಣಿಪಾಲದಲ್ಲಿ ದಾಂಡಿಯಾ ವೈಭವ: ಡಿಜೆ ಸದ್ದಿಗೆ ಯುವಕ ಯುವಕರಿಂದ ಜಬರ್ದಸ್ತ್ ಸ್ಟೆಪ್!

ಉಡುಪಿ: ನವರಾತ್ರಿ ಸಂಭ್ರಮಕ್ಕೆ ದಾಂಡಿಯಾ ನೃತ್ಯದ ಮೆರುಗು ನೀಡಿದ ಯುವಕ-ಯುವತಿಯರು, ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಓಂ ಫ್ರೆಂಡ್ಸ್ ಮಣಿಪಾಲದ ವತಿಯಿಂದ ಮಣಿಪಾಲದ ಹುಡ್ಕೋ ಕಾಲೊನಿಯಲ್ಲಿ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಣ್ಣಬಣ್ಣದ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕ-ಯುವತಿಯರು ಸಂಗೀತದ ತಾಳಕ್ಕೆ ತಕ್ಕಂತೆ ದಾಂಡಿಯಾ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು. ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತದ ಮೂಲಕ ನವರಾತ್ರಿ ಹಬ್ಬದ ಸಡಗರವನ್ನು ಹಂಚಿಕೊಂಡ ಯುವಜನರು, ಕಾರ್ಯಕ್ರಮಕ್ಕೆ ಉತ್ಸಾಹದ ಕಳೆ ತುಂಬಿದರು.

ಉಡುಪಿ ಜಿಲ್ಲೆಗೆ ಕನ್ನಡ ರಾಜ್ಯೇೂತ್ಸವ ಪ್ರಶಸ್ತಿ “ಬರ” ರಾಜ್ಯೇೂತ್ಸವ ಕನ್ನಡ ನಾಡಿನ ಅಸ್ಮಿತೆಯ ಸಂಕೇತ ಸಂಭ್ರಮ ಸಡಗರದ ಸಂದಭ೯.

ಬಹು ಮುಖ್ಯವಾಗಿ ಜಿಲ್ಲೆಯಲ್ಲಿ ವಿವಿಧ ವಲಯಗಳಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ಗೌರವಿಸುವುದು ಉಡುಪಿ ಜಿಲ್ಲೆಯಲ್ಲಿ ಅನುಚಾನವಾಗಿ ನಡೆದು ಬಂದ ಸಂಪ್ರದಾಯವು ಹೌದು.ಎಲ್ಲರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಿಸುವುದು ಕಷ್ಟ ಸಾಧ್ಯ.ಇದು ಸರಕಾರಕ್ಕೆ ಆಥಿ೯ಕವಾಗಿ ಹೊರೆಯು ಆಗ ಬಹುದು.ಆದರೆ ಜಿಲ್ಲಾ ಮಟ್ಟದಲ್ಲಿ ಗುರುತಿಸಿ ನೀಡುವ ಪ್ರಶಸ್ತಿ ಪತ್ರ ಸಂಮಾನ ಕೇವಲ ಒಂದು ಶಾಲು ಹೂವಿನಹಾರ ಬಿಟ್ಟರೆ ಮತ್ತೇನು ಹೆಚ್ಚಿನ ಖಚಿ೯ಲ್ಲಿದೆ ನಡೆಯುವ ಜಿಲ್ಲಾ ಮಟ್ಟದಲ್ಲಿ ಸಾಧಕರಿಗೆ ನೀಡುವ ಗೌರವವಿದು.ಇದಕ್ಕೂ ಕತ್ತರಿ ಹಾಕುವುದೆಂದರೆ ಅತ್ಯಂತ ವಿಷಾದನೀಯ ಬೆಳವಣಿಗೆ.*ಇದು ಉಡುಪಿ ಜಿಲ್ಲೆ […]

ಉಡುಪಿ | ಅ.21ರಂದು ಆಭರಣ ಜುವೆಲ್ಲರ್ಸ್ ನ ನವೀಕೃತ ಶೋರೂಂ ಲೋಕಾರ್ಪಣೆ

ಉಡುಪಿ: 1935ರಲ್ಲಿ ಉಡುಪಿ ನಗರದ ಸಿಬಿ ರಸ್ತೆಯಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ನ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಈ ನವೀಕೃತ ಶೋರೂಂ ಅ.21ರಂದು ಪುನಾರಂಭಗೊಳ್ಳಲಿದೆ. ಆಭರಣ ಜುವೆಲ್ಲರ್ಸ್ ಪೆವೇಟ್ ಲಿ. ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಸುಮಾರು 9 ದಶಕಗಳಿಗೂ ಹೆಚ್ಚು ಕಾಲ ಸಂಸ್ಥೆಯ ಇತಿಹಾಸ ಹಾಗೂ ಗುರುತಿನೊಂದಿಗೆ ಬೆಸೆದುಕೊಂಡಿದೆ. ಪ್ರಸ್ತುತ ಈ ಶೋರೂಂ ಸಂಸ್ಥೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.ಉಡುಪಿಯಲ್ಲಿ ಒಂದು ಮಳಿಗೆಯಿಂದ ಆರಂಭಗೊಂಡಿದ್ದ ಆಭರಣ […]

ಉಡುಪಿ-ಉಚ್ಚಿಲ ದಸರಾ ಶೋಭಾಯಾತ್ರೆ: ಅ.21ರಂದು ಹೆದ್ದಾರಿಯಲ್ಲಿ ಘನ ವಾಹನ ಸಂಚಾರ ನಿರ್ಬಂಧ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ–2026ರ ಸಮಾರೋಪದ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಹಾಗೂ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 11ರಂದು ಆರಂಭಗೊಂಡಿರುವ ಉಚ್ಚಿಲ ದಸರಾ ಮಹೋತ್ಸವ ಅ.21ರಂದು ಸಮಾಪನಗೊಳ್ಳಲಿದ್ದು, ಅಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ […]