ಬಹು ಮುಖ್ಯವಾಗಿ ಜಿಲ್ಲೆಯಲ್ಲಿ ವಿವಿಧ ವಲಯಗಳಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ಗೌರವಿಸುವುದು ಉಡುಪಿ ಜಿಲ್ಲೆಯಲ್ಲಿ ಅನುಚಾನವಾಗಿ ನಡೆದು ಬಂದ ಸಂಪ್ರದಾಯವು ಹೌದು.ಎಲ್ಲರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಿಸುವುದು ಕಷ್ಟ ಸಾಧ್ಯ.ಇದು ಸರಕಾರಕ್ಕೆ ಆಥಿ೯ಕವಾಗಿ ಹೊರೆಯು ಆಗ ಬಹುದು.ಆದರೆ ಜಿಲ್ಲಾ ಮಟ್ಟದಲ್ಲಿ ಗುರುತಿಸಿ ನೀಡುವ ಪ್ರಶಸ್ತಿ ಪತ್ರ ಸಂಮಾನ ಕೇವಲ ಒಂದು ಶಾಲು ಹೂವಿನಹಾರ ಬಿಟ್ಟರೆ ಮತ್ತೇನು ಹೆಚ್ಚಿನ ಖಚಿ೯ಲ್ಲಿದೆ ನಡೆಯುವ ಜಿಲ್ಲಾ ಮಟ್ಟದಲ್ಲಿ ಸಾಧಕರಿಗೆ ನೀಡುವ ಗೌರವವಿದು.ಇದಕ್ಕೂ ಕತ್ತರಿ ಹಾಕುವುದೆಂದರೆ ಅತ್ಯಂತ ವಿಷಾದನೀಯ ಬೆಳವಣಿಗೆ.
*ಇದು ಉಡುಪಿ ಜಿಲ್ಲೆ ಪ್ರಾರಂಭ ದಿನದಿಂದ ನಡೆದು ಕೊಂಡು ಬಂದ ಗೌರವದ ಕಾರ್ಯಕ್ರಮ ಮಾತ್ರವಲ್ಲ ಇದೊಂದು ಜಿಲ್ಲೆಯ ಗೌರವದ ಹೆಮ್ಮೆಯ ಸಂಕೇತ.ಅದೇ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದ ಕುರಿತಾಗಿ ಪತ್ರಿಕಾ ಪ್ರಕಟಣೆ ಬಂದಿದೆ.ಆದರೆ ಉಡುಪಿ ಜಿಲ್ಲೆಯಲ್ಲಿ ಈ ಕುರಿತಾಗಿ ಯಾವುದೇ ಸುದ್ದಿ ಇಲ್ಲ.ಮಾತ್ರವಲ್ಲ;ಈ ಬಾರಿ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡುವ ಅಪಸ್ವರ ಸ್ವಲ್ಪ ದೂರದಿಂದ ಕೇಳಿ ಬರುತ್ತಿದೆ.ಇದು ನಿಜಕ್ಕೂ ಅತ್ಯಂತ ಬೇಸರದ ಗಾಳಿ ಸುದ್ದಿ. ಒಮ್ಮೆ ಇದು ನಿಂತು ಬಿಟ್ಟರೆ ಇದು ಶಾಶ್ವತವಾಗಿ ನಿಲ್ಲುವುದಂತು ಗ್ಯಾರಂಟಿ.ಉಡುಪಿ ಜಿಲ್ಲೆಗೆ ಬರಗಾಲದ ಗಾಳಿ ಬೀಸಿದೆ ಅನ್ನುವ ಕಾರಣಕ್ಕೆ ಜಿಲ್ಲಾಡಾಳಿತ ಈ ನಿಧಾ೯ರಕ್ಕೆ ಬಂದಿದೆಯಾ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ.ಮಾತ್ರವಲ್ಲ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಬಹುದೂರದವರಾದ ಕಾರಣ ಅವರಿಗೂ ಈ ಸುದ್ದಿ ಕೇಳಿಸಿದೆಯೊ ಗೊತ್ತಿಲ್ಲ.
ನನಗೇನು ಈ ಪ್ರಶಸ್ತಿ ಬೇಕಿಲ್ಲ ಮಾತ್ರವಲ್ಲ ಪ್ರಶಸ್ತಿ ಪಡೆಯುವ ಆಹ೯ತೆಯು ನನಗಿಲ್ಲ.ಆದರೆ ಅದೇಷ್ಟೊ ಮಂದಿ ಹಿರಿಯರು ಸಾಧನೆ ಮಾಡಿದವರು ಇದ್ದಾರೆ..ಅಂತವರನ್ನು ಕನ್ನಡ ರಾಜ್ಯೇೂತ್ಸವ ಸಂದರ್ಭದಲ್ಲಿ ಗುರುತಿಸದೇ ಹೇೂದರೆ ಉಡುಪಿ ಜಿಲ್ಲೆಗೂ ಅತೀ ದೊಡ್ಧ ಕಳಂಕ ಅನ್ನುವುದು ಉಡುಪಿ ಜಿಲ್ಲೆಯ ಕನ್ನಡ ಅಭಿಮಾನಿಗಳ ಸಾವ೯ತ್ರಿಕ ಅಭಿಪ್ರಾಯ ಮತ್ತು ಜಿಲ್ಲಾಡಳಿತಕ್ಕೆ ಕಳಕಳಿಯ ಮನವಿ. ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.ನಿವೃತ್ತ ಮುಖ್ಯಸ್ಥ ರಾಜ್ಯ ಶಾಸ್ತ್ರ ವಿಭಾಗ ಎಂಜಿಎಂ.ಕಾಲೇಜು ಉಡುಪಿ.















