ಉಡುಪಿ: ನವರಾತ್ರಿ ಸಂಭ್ರಮಕ್ಕೆ ದಾಂಡಿಯಾ ನೃತ್ಯದ ಮೆರುಗು ನೀಡಿದ ಯುವಕ-ಯುವತಿಯರು, ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಓಂ ಫ್ರೆಂಡ್ಸ್ ಮಣಿಪಾಲದ ವತಿಯಿಂದ ಮಣಿಪಾಲದ ಹುಡ್ಕೋ ಕಾಲೊನಿಯಲ್ಲಿ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಣ್ಣಬಣ್ಣದ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕ-ಯುವತಿಯರು ಸಂಗೀತದ ತಾಳಕ್ಕೆ ತಕ್ಕಂತೆ ದಾಂಡಿಯಾ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು.
ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತದ ಮೂಲಕ ನವರಾತ್ರಿ ಹಬ್ಬದ ಸಡಗರವನ್ನು ಹಂಚಿಕೊಂಡ ಯುವಜನರು, ಕಾರ್ಯಕ್ರಮಕ್ಕೆ ಉತ್ಸಾಹದ ಕಳೆ ತುಂಬಿದರು.















