ರೈಲಿನಲ್ಲಿ ಜೋರಾಗಿ ಹಾಡು ಹಾಕುವವರೇ, ಗಲಾಟೆ ಮಾಡುವವರೇ ಇಲ್ಲಿ ಕೇಳಿ,ಇನ್ನು ಹೀಗೆ ಮಾಡಿದ್ರೆ ಕಾದಿದೆ ನಿಮಗೆ ದಂಡ, ಶಿಕ್ಷೆ!

ರೈಲಿನಲ್ಲಿ ಪ್ರಯಾಣಿಸುವಾಗ ಕೆಲವರು ಮೊಬೈಲ್ ಸ್ಪೀಕರ್‌ನಲ್ಲಿ ಜೋರಾಗಿ ಹಾಡು ಕೇಳುವುದು, ಸಿನಿಮಾ ನೋಡುವುದು ಅಥವಾ ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಇಂತಹ ಅಶಿಸ್ತಿನ ವರ್ತನೆಗೆ ಕಡಿವಾಣ ಹಾಕಲು ದಕ್ಷಿಣ ರೈಲ್ವೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲಿನ ಬೋಗಿಗಳಲ್ಲಿ ಮೊಬೈಲ್ ಸ್ಪೀಕರ್ ಮೂಲಕ ಆಡಿಯೋ ಅಥವಾ ವಿಡಿಯೋಗಳನ್ನು ಜೋರಾಗಿ ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ. ಗುಂಪುಗೂಡಿ ಗದ್ದಲ ಮಾಡುವುದು, ಕಿರುಚುವುದು ಹಾಗೂ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ವರ್ತನೆಗಳನ್ನೂ ಉಪದ್ರವ ಎಂದು ಪರಿಗಣಿಸಲಾಗುತ್ತದೆ. […]

ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: 15 ಪೊಲೀಸ್ ತಂಡಗಳಿಂದ ಶೋಧ ಕಾರ್ಯ, ಆರೋಪಿಗಳ ಫಸ್ಟ್ ಫೋಟೋ ರಿಲೀಸ್

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಲು ಮುಂಬೈ ಪೊಲೀಸರು 15 ವಿಶೇಷ ತಂಡಗಳನ್ನು ರಚಿಸಿದ್ದಾರೆ.ಈಗಾಗಲೇ ಆರೋಪಿಗಳ ಫಸ್ಟ್ ಫೋಟೋ ಕೂಡ ರೆಡಿಯಾಗಿದೆ. ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಮುಂಬೈನ ಜುಹು ಪ್ರದೇಶದ ಪುಷ್ಪಾ ಪಾರ್ಕ್ ಬಳಿ ಅಕ್ಟೋಬರ್ 18ರ ಭಾನುವಾರ ಸಂಜೆ ಈ ಘಟನೆ ನಡೆದಿದೆ. 36 ವರ್ಷದ ನಟ ಟೈಗರ್ ಶ್ರಾಫ್ ಅಪಾಯದಿಂದ ಪಾರಾಗಿದ್ದಾರೆ. ಮೂರರಿಂದ ನಾಲ್ಕು […]

ಉಡುಪಿಯ ದಿನಾಂಕ 18ರ ಆದಿತ್ಯವಾರದಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಪ್ರಮುಖ ವಿಷಯಗಳ ಕುರಿತು ಸಭೆ

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರ ಮಾರ್ಗದರ್ಶನದಲ್ಲಿ ತಾ. 18.10.2026ರ ಆದಿತ್ಯವಾರದಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಪ್ರಮುಖ ವಿಷಯಗಳ ಕುರಿತು ಸಭೆ ನಡೆಯಿತು. ಕೇಂದ್ರ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ರಾಷ್ಟ್ರವ್ಯಾಪಿ ಅನೇಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಜನಪರ ಒಕ್ಕೂಟಗಳು ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಬಿಜೆಪಿ ಸರ್ಕಾರದ […]

ದೆಹಲಿಯಲ್ಲಿ ಮುಖ್ಯ ಮಂತ್ರಿ ಡಿಕೆಶಿಯವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ನಿಜಕ್ಕೂ ಸಮಸ್ತ ಕನ್ನಡಿಗರಿಗೆ ಅವಮಾನ ತರುವಂತಿದೆ

ಪಾಪ ನಮ್ಮಮುಖ್ಯ ಮಂತ್ರಿ ಡಿಕೆಶಿ ಅವರಿಗೆ ತನ್ನ ಮುಖ ಒಮ್ಮೆ ಯಾದರುರಾಹುಲ್‌ ಗಾಂಧಿಗೆ ತೇೂರಿಸ ಬೇಕೆಂಬ ಹಂಬಲ.ರಾಹುಲ್‌ ನಾನೇ ಮುಂಚೂಣಿ ನಾಯಕ ನಾಗಿ ಮೆರೆಯ ಬೇಕೆಂಬ ಚಟ.ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಯಾವಾಗಲೂ ಮಕ್ಕಳಾಟಿಗೆ ಬುದ್ಧಿ ಪ್ರದಶ೯ನಮಾಡುವುದು ಅವರ ಹುಟ್ಟು ಗುಣ.ಈ ಮಧ್ಯದಲ್ಲಿ ನಮ್ಮಮುಖ್ಯ ಮಂತ್ರಿಗಳನ್ನು ಬೆನ್ನು ಪಟ್ಟಿ ಹಿಡಿದು ಹಿಂದಕ್ಕೆ ತಳಿದ ವೀಡಿಯೊ ವೈರಲ್ ಆಗುತ್ತಿದೆ.ಇದು ಕನ್ನಡಿಗರಿಗೆ ಅತ್ಯಂತ ಬೇಸರ ಅವಮಾನ ತರುವ ಸಂದರ್ಭ.ಒಂದು ರಾಜ್ಯದ ಮುಖ್ಯ ಮಂತ್ರಿ ಆದವರು ಇಂತಹ ಸಂದರ್ಭದಲ್ಲಿ ತಮ್ಮ ಸ್ಥಾನ ಮಾನ […]

ಉಡುಪಿಯ ಹಿರಿಯಡ್ಕ ಈಜಿ ಲೈಫ್ ಎಂಟರ್ಪ್ರೈಸಸ್ ನಲ್ಲಿ ಉದ್ಯೋಗಾವಕಾಶ.

ಹಿರಿಯಡ್ಕ ಈಜಿ ಲೈಫ್ ಎಂಟರ್ಪ್ರೈಸಸ್ ನಲ್ಲಿ ಬಿಲ್ಲಿಂಗ್ ಎಕ್ಸಿಕ್ಯೂಟಿವ್ ಹುದೆಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿ ಉಳ್ಳವರು ಕೂಡಲೇ ಸಂಪರ್ಕಿಸಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7996210666