ಯುಪಿಐ ವಹಿವಾಟು ಶುಲ್ಕ ಜಾರಿ ಮುಂದೂಡಿಕೆ: ದೀಪಾವಳಿ ಬಳಿಕ ಹೊಸ ನಿಯಮ ಜಾರಿ

ನವದೆಹಲಿ: ಯುಪಿಐ (UPI) ವಹಿವಾಟುಗಳ ಮೇಲಿನ ಶುಲ್ಕ ಜಾರಿಗೆ ಸಂಬಂಧಿಸಿದಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ವ್ಯಾಪಾರಿಗಳ ಮನವಿಯ ಹಿನ್ನೆಲೆಯಲ್ಲಿ ಶುಲ್ಕ ಜಾರಿಯನ್ನು ದೀಪಾವಳಿ ಬಳಿಕಕ್ಕೆ ಮುಂದೂಡಲಾಗಿದೆ ಈ ಹಿಂದೆ ಅಕ್ಟೋಬರ್ 15ರಿಂದ ಶುಲ್ಕ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಖರೀದಿ ಹೆಚ್ಚಾಗುವುದರಿಂದ ಪಾವತಿ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗದಂತೆ ಹಾಗೂ ಪಾವತಿ ಸೇವಾ ಸಂಸ್ಥೆಗಳು ತಮ್ಮ ತಾಂತ್ರಿಕ ವ್ಯವಸ್ಥೆಗಳನ್ನು ನವೀಕರಿಸಿಕೊಳ್ಳಲು ಕಾಲಾವಕಾಶ ನೀಡುವ ಉದ್ದೇಶದಿಂದ […]

ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಹೋರಾಟಗಾರನನ್ನು ಫೇಸ್‌ಬುಕ್ ಲೈವ್‌ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಮೆಡಿಕಲ್ ಮಾಲಿಕ!

ಚಂಡೀಗಢ: ಪಂಜಾಬ್‌ನ ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಮೆಡಿಕಲ್ ಶಾಪ್ ಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೆಡಿಕಲ್ ಶಾಪ್‌ನಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಪರ್ವಿಂದರ್ ಸಿಂಗ್ ಝೋಟಾ ಅವರು ಮೆಡಿಕಲ್ ಶಾಪ್‌ನಲ್ಲಿ ನಶೆಯುಂಟುಮಾಡುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್ ಮಾಡುತ್ತಿದ್ದರು. […]

ಸೀನಿಯರ್ ಕಿರುಕುಳ: ಐಪಿಎಸ್ ಅಧಿಕಾರಿ ಎಸ್. ರವಿ ದಿಢೀರ್ ರಾಜೀನಾಮೆ: ನಿವೃತ್ತಿಗೆ ಆರು ತಿಂಗಳು ಬಾಕಿ ಇರುವಾಗಲೇ ನಿರ್ಧಾರ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೆಎಸ್‌ಆರ್‌ಪಿಯ ಎಡಿಜಿಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಎಸ್. ರವಿ ಅವರು ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ನಿವೃತ್ತಿಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ಅವರು ಈ ನಿರ್ಧಾರ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. 1998ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಎಸ್. ರವಿ ಅವರು ಪೊಲೀಸ್ ಮಹಾನಿರ್ದೇಶಕರ (ಡಿಜಿ ಮತ್ತು ಐಜಿಪಿ) ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯನ್ನು ಡಿಜಿ ಮತ್ತು ಐಜಿಪಿ […]

ನಿಟ್ಟೆಯ ಹಲಸು ಸಂಸ್ಕರಣಾ ಘಟಕ ನಿಷ್ಕ್ರಿಯ ಸ್ಥಿತಿಗೆ: ₹5.70 ಕೋಟಿ ಅನುದಾನ ಬಳಕೆ ಬಗ್ಗೆ ತನಿಖೆಗೆ ಆಗ್ರಹ

ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ಭರವಸೆ ಈಡೇರಿಲ್ಲ; ಸರ್ಕಾರದ ಅನುದಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಉಡುಪಿ: ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಆರಂಭಿಸಲಾದ ಹಲಸು ಸಂಸ್ಕರಣಾ ಘಟಕ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಘಟಕ ನಾಮಕಾವಸ್ಥೆಯಲ್ಲಿ ಮುಂದುವರಿದಿದ್ದು, ಸರ್ಕಾರದಿಂದ ಪಡೆದ ಅನುದಾನದ ಬಳಕೆ ಕುರಿತು ಅನುಮಾನಗಳು ಮೂಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಆರೋಪಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಂಪ್ರದಾಯಿಕ […]

ಉಚ್ಚಿಲ ದಸರಾ ನೃತ್ಯೋತ್ಸವದಲ್ಲಿ ಉಡುಪಿಯ ಎಕ್ಸ್‌ಟ್ರೀಮ್ ಡಾನ್ಸ್ ಅಕಾಡೆಮಿಗೆ ಪ್ರಥಮ ಬಹುಮಾನ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ–2026ರ ಅಂಗವಾಗಿ ರವಿವಾರ ರಾತ್ರಿ ಆಯೋಜಿಸಲಾದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ‘ದಸರಾ ನೃತ್ಯೋತ್ಸವ’ ನೃತ್ಯ ಸ್ಪರ್ಧೆ ಪ್ರೇಕ್ಷಕರ ಮನಸೂರೆಗೊಳಿಸಿತು. ವಿವಿಧ ತಂಡಗಳ ಕಲಾವಿದರು ಲಯಬದ್ಧ ಹೆಜ್ಜೆಗಳು, ವೈವಿಧ್ಯಮಯ ನೃತ್ಯಶೈಲಿ ಹಾಗೂ ಆಕರ್ಷಕ ಪ್ರದರ್ಶನಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಸಂಗೀತ ಮತ್ತು ನೃತ್ಯದ ಸಮ್ಮಿಲನದಲ್ಲಿ ನಡೆದ ಸ್ಪರ್ಧೆ ಉಚ್ಚಿಲ ದಸರಾ ಮಹೋತ್ಸವದ ಸಾಂಸ್ಕೃತಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು. ಸ್ಪರ್ಧೆಯಲ್ಲಿ ಉಡುಪಿಯ ಎಕ್ಸ್‌ಟ್ರೀಮ್ […]