ಎರ್ಮಾಳು ತೆಂಕ ಸ್ಕೈವಾಕ್ ಯೋಜನೆ: ಸಾರ್ವಜನಿಕರಿಗೆ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ?

ಸ್ಥಳ: ಎರ್ಮಾಳು ತೆಂಕ, ಉಡುಪಿ ಜಿಲ್ಲೆ ಸಾರ್ವಜನಿಕರ ಸುರಕ್ಷತೆಗಾಗಿ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಯೋಜನೆಯೂ ಜನರ ನೈಜ ಅಗತ್ಯಗಳನ್ನು ಆಧರಿಸಿರಬೇಕು. ಆದರೆ, ಎರ್ಮಾಳು ತೆಂಕದಲ್ಲಿ ನಿರ್ಮಿಸಲಾಗುತ್ತಿರುವ ಸ್ಕೈವಾಕ್ ಯೋಜನೆಯ ಅಗತ್ಯತೆ, ವಿನ್ಯಾಸ ಮತ್ತು ಸಾರ್ವಜನಿಕರಿಗೆ ಆಗುವ ಪ್ರಯೋಜನಗಳ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತಿವೆ. 🔹 ಈ ಸ್ಥಳದಲ್ಲಿ ಪಾದಚಾರಿಗಳ ಸಂಚಾರ ಎಷ್ಟಿದೆ?🔹 ಎರಡೂ ಬದಿಗಳಲ್ಲಿ 350 ಮೀಟರ್‌ಗಿಂತಲೂ ಹೆಚ್ಚಿನ ಉದ್ದದ ಸ್ಕೈವಾಕ್ ನಿರ್ಮಿಸುವ ಅಗತ್ಯವೇನು?🔹 ವಯಸ್ಸಾದವರು ಮತ್ತು ಗಾಲಿಕುರ್ಚಿ ಬಳಸುವ ದಿವ್ಯಾಂಗರು ಇದನ್ನು ಸುಲಭವಾಗಿ ಬಳಸಲು ಸಾಧ್ಯವೇ?🔹 […]

ಕಟಪಾಡಿ: ಕರ್ನಾಟಕದ ಪ್ರಪ್ರಥಮ ಸಂಪೂರ್ಣ ಅಮೃತಶಿಲಾಮಯ ಅಯ್ಯಪ್ಪ ಸ್ವಾಮಿ ದೇಗುಲ ನಿರ್ಮಾಣಕ್ಕೆ ಚಾಲನೆ

ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿಯ ಪಂಪಾಕ್ಷೇತ್ರ, ರಿಷಾಲ್ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕದ ಪ್ರಪ್ರಥಮ ಸಂಪೂರ್ಣ ಅಮೃತಶಿಲಾಮಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ರಾಜಸ್ಥಾನದಿಂದ ಪ್ರಥಮ ಹಂತದ ಅಮೃತಶಿಲೆ ಆಗಮಿಸಲಿದೆ. ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ವತಿಯಿಂದ ನಿರ್ಮಿಸಲಾಗುತ್ತಿರುವ ದೇವಸ್ಥಾನಕ್ಕೆ ಅಮೃತಶಿಲೆ ಹೊತ್ತು ತರುವ ವಾಹನವನ್ನು ಅ. 15ರಂದು ಗುರುವಾರ ಸಂಜೆ 4 ಗಂಟೆಗೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್‌ನಲ್ಲಿ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಗುವುದು. ಈ ಸ್ವಾಗತ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು […]

ಇನ್‌ಸ್ಟಾಗ್ರಾಮ್‌ನಲ್ಲಿ ಸ್ವೀಟು ಕೇಳಿದ ಕಂಟೆಂಟ್ ಕ್ರಿಯೇಟರ್ ಗೆ ಫಾಲೋವರ್ಸ್ ಕೊಟ್ಟರು ಯಾರೂ ಕೊಡದ ಟ್ರೀಟು: ‘ನಿನಗಿದು ಬೇಕಿತ್ತಾ ಮಗನೇ’ಎನ್ನುವಂತಾಯ್ತು ವೀರಮಣಿ ಸ್ಥಿತಿ!

ಮಧುರೈ: ದೀಪಾವಳಿಗೆ ಸಿಹಿತಿಂಡಿ ತಿನ್ನುವ ಆಸೆಯಿಂದ ತನ್ನ ವಿಳಾಸ ಹಂಚಿಕೊಂಡು, ಫಾಲೋವರ್ಸ್‌ಗೆ ಸ್ವೀಟ್ ಬಾಕ್ಸ್ ಕಳುಹಿಸುವಂತೆ ಮನವಿ ಮಾಡಿದ್ದ ತಮಿಳುನಾಡಿನ ಕಂಟೆಂಟ್ ಕ್ರಿಯೇಟರ್ ಒಬ್ಬರು ಇದೀಗ ಪೇಚೆಗೆ ಸಿಲುಕಿದ್ದಾರೆ. ಒಂದು ಸ್ವೀಟ್ ಬಾಕ್ಸ್ ಕೇಳಿದ್ದಕ್ಕೆ ಅವರ ಮನೆಗೆ ಸಿಹಿತಿಂಡಿಗಳ ಬದಲಿಗೆ ಟಿವಿ, ಫ್ರಿಜ್‌ ಸೇರಿದಂತೆ ವಿವಿಧ ವಸ್ತುಗಳು ಕ್ಯಾಶ್ ಆನ್ ಡೆಲಿವರಿ ಮೂಲಕ ಬರತೊಡಗಿದ್ದು, ಕೊನೆಗೆ ಅವರು ಕಣ್ಣೀರಿಡುತ್ತಾ ನೆರವು ಬೇಡುವಂತಾಗಿದೆ. ತಲೆನೋವಾಯ್ತು ಮನವಿ: ಮಧುರೈ ಮೂಲದ ವೀರಮಣಿ ಎಂಬ ಕಂಟೆಂಟ್ ಕ್ರಿಯೇಟರ್‌ಗೆ ದೀಪಾವಳಿಯ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು […]

ಉಡುಪಿ: ಅ.17, 18 ರಂದು ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಭಾ.ಕೃ.ಅ.ಪ –ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ದಕ್ಷಿಣ ಕನ್ನಡ, ಕರ್ನಾಟಕ ರಾಜ್ಯ […]

ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ನವರಾತ್ರಿ ಸಂಭ್ರಮ: ಬ್ರಹ್ಮಚಾರಿಣಿ ದೇವಿಗೆ ವಿಶೇಷ ಅಲಂಕಾರ

ಉಡುಪಿ: ಪ್ರಸಿದ್ಧ ಶಕ್ತಿಪೀಠ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.ನವರಾತ್ರಿಯ ಎರಡನೇ ದಿನ ತಪಸ್ಸು, ಸಂಯಮ ಮತ್ತು ಜ್ಞಾನದ ಸಂಕೇತವಾದ ಶ್ರೀ ಬ್ರಹ್ಮಚಾರಿಣಿ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಇಬ್ಬರು ಮುತ್ತೈದೆಯರಿಗೆ ಬಾಗೀನ ಸಮರ್ಪಿಸಲಾಯಿತು. ದೇವಸ್ಥಾನದಲ್ಲಿ ನಡೆಯುತ್ತಿರುವ ಚಂಡಿಕಾಯಾಗದಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನವರಾತ್ರಿ ಪೂಜೆಯಲ್ಲಿ […]