ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಜಿಲ್ಲೆ ಎಂದು ಬದಲಾಗಬೇಕಾ? ಬೇಡವಾ? ನಿಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಲು ಇಲ್ಲಿದೆ ಒಂದು ಕೊನೆಯ ಅವಕಾಶ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಜಿಲ್ಲೆಯ ಹೆಸರಿನ ಬದಲಾವಣೆ ಪ್ರಕ್ರಿಯೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಹಂತಕ್ಕೆ ತಲುಪಿದ್ದು, ಪ್ರಸ್ತಾವನೆಯ ಪರ ಅಥವಾ ವಿರೋಧವಾಗಿ ತಮ್ಮ ಅಭಿಪ್ರಾಯ ತಿಳಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ, […]
ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲಿನ ಹಲ್ಲೆ ಪ್ರಕರಣ: ಮಾಲ್ಡೀವ್ಸ್ನ ಇಬ್ಬರು ಸಹ-ಪೈಲಟ್ಗಳು ಯುಎಇ ವಶಕ್ಕೆ

ದುಬೈ: ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಫ್ಲೈದುಬೈ ವಿಮಾನಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಲ್ಡೀವ್ಸ್ ಮೂಲದ ಇಬ್ಬರು ಸಹ-ಪೈಲಟ್ಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 30ರಂದು ವಿಮಾನಯಾನದ ವೇಳೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಮಿ ಹಲ್ಲೆ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಂದು ಇಬ್ಬರು ಮಾಲ್ಡೀವ್ಸ್ ಪ್ರಜೆಗಳನ್ನು […]
ಉಡುಪಿಯ ಬಲ್ಲಾಳ್ ಮೊಬೈಲ್ಸ್ನಲ್ಲಿ ‘ಮೆಗಾ ಫೆಸ್ಟಿವಲ್ ಆಫರ್ಸ್’ ಪೋಸ್ಟರ್ ಲಾಂಚ್, ಹಬ್ಬಕ್ಕೆ ಇಲ್ಲಿದೆ ಭರ್ಜರಿ ಆಫರ್ಗಳ ಸುಗ್ಗಿ: ರೂ. 25 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ

ಉಡುಪಿ: ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಉಡುಪಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆಯು ಗ್ರಾಹಕರಿಗಾಗಿ ವಿಶೇಷ ‘ಮೆಗಾ ಫೆಸ್ಟಿವಲ್ ಆಫರ್ಸ್’ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಅ. 12 ರಂದು ನಡೆಯಿತು. ರೂ. 25 ಲಕ್ಷ ಗೆಲ್ಲುವ ಭರ್ಜರಿ ಅವಕಾಶ: ‘ಹೆಚ್ಚು ಖರೀದಿಸಿ, ಹೆಚ್ಚಿನದನ್ನು ಗೆಲ್ಲಿರಿ’ (Shop More, Win More!) ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಈ ಅಭಿಯಾನವು ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯಲಿದೆ. ಗ್ರಾಹಕರಿಗೆ ₹25 ಲಕ್ಷಕ್ಕೂ ಅಧಿಕ […]
ದೆಹಲಿಯಲ್ಲಿ ಮುಖ್ಯ ಮಂತ್ರಿ ಡಿಕೆಶಿಯವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ನಿಜಕ್ಕೂ ಸಮಸ್ತ ಕನ್ನಡಿಗರಿಗೆ ಅವಮಾನ ತರುವಂತಿದೆ

ಪಾಪ ನಮ್ಮಮುಖ್ಯ ಮಂತ್ರಿ ಡಿಕೆಶಿ ಅವರಿಗೆ ತನ್ನ ಮುಖ ಒಮ್ಮೆ ಯಾದರುರಾಹುಲ್ ಗಾಂಧಿಗೆ ತೇೂರಿಸ ಬೇಕೆಂಬ ಹಂಬಲ.ರಾಹುಲ್ ನಾನೇ ಮುಂಚೂಣಿ ನಾಯಕನಾಗಿ ಮೆರೆಯ ಬೇಕೆಂಬ ಚಟ.ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಯಾವಾಗಲೂ ಮಕ್ಕಳಾಟಿಗೆ ಬುದ್ಧಿ ಪ್ರದಶ೯ನಮಾಡುವುದು ಅವರ ಹುಟ್ಟು ಗುಣ.ಈ ಮಧ್ಯದಲ್ಲಿ ನಮ್ಮಮುಖ್ಯ ಮಂತ್ರಿಗಳನ್ನು ಬೆನ್ನು ಪಟ್ಟಿ ಹಿಡಿದು ಹಿಂದಕ್ಕೆ ತಳಿದ ವೀಡಿಯೊ ವೈರಲ್ ಆಗುತ್ತಿದೆ.ಇದು ಕನ್ನಡಿಗರಿಗೆ ಅತ್ಯಂತ ಬೇಸರ ಅವಮಾನ ತರುವ ಸಂದರ್ಭ.ಒಂದು ರಾಜ್ಯದ ಮುಖ್ಯ ಮಂತ್ರಿ ಆದವರು ಇಂತಹ ಸಂದರ್ಭದಲ್ಲಿ ತಮ್ಮ ಸ್ಥಾನ ಮಾನ ಗೌರವಉಳಿಸಿಕೊಳ್ಳಲೇ […]
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ; 2028ರ ಚುನಾವಣೆಗೆ ಸ್ಪರ್ಧೆ ಖಚಿತ: ರಘುಪತಿ ಭಟ್

ಮಂಗಳೂರು: ಕಾಂಗ್ರೆಸ್ ಸೇರ್ಪಡೆ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚಿಸುತ್ತಿದ್ದೇನೆ. ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿಯಿಂದಲೂ ಆಹ್ವಾನ ಬರುವ ನಿರೀಕ್ಷೆಯಲ್ಲಿದ್ದೇನೆ. ಆಹ್ವಾನ ನೀಡಿದರೆ ಅದರ ಬಗ್ಗೆಯೂ ಯೋಚಿಸಬಹುದು ಎಂದರು. ಬಾಲ್ಯದಿಂದಲೇ ರಾಷ್ಟ್ರೀಯ […]