ಶತಮಾನದ ಹೊಸ್ತಿಲಲ್ಲಿರುವ ಉಡುಪಿ ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್’ಗೆ “Ayur Bhushana Award 2026” ಪುರಸ್ಕಾರ

ಉಡುಪಿ: ಶತಮಾನದ ಹೊಸ್ತಿಲಲ್ಲಿರುವ ಉಡುಪಿ ‘ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್‘ಗೆ ಕನ್ನಡಪ್ರಭ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ನ “Ayur Bhushana Award 2026” ಪ್ರಶಸ್ತಿಯನ್ನು ನೀಡಲಾಯಿತು. 100 ವರ್ಷಗಳ ನಿರಂತರ ಸೇವೆ, ಶುದ್ಧತೆ ಹಾಗೂ ಗುಣಮಟ್ಟದ ಬದ್ಧತೆಗೆ ದೊರೆತ ಗೌರವವಾಗಿದೆ.ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್’ನ ನಿರ್ದೇಶಕರಾದ ಕೆ.ಭರತ್ ಪ್ರಭು, ಕೆ.ರಘುಪ್ರಸಾದ್ ಪ್ರಭು, ಕೆ.ಮನೋಜ್ ಪ್ರಭು ಹಾಗೂ ಮನೆಯವರ ಈ ಅಪೂರ್ವ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ.

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಮಂಗಳೂರು–ಗೋವಾ ವಂದೇ ಭಾರತ್‌ ರೈಲು ಯಶವಂತಪುರದವರೆಗೆ ವಿಸ್ತರಣೆ: ಕರಾವಳಿಗೆ ಬೆಂಗಳೂರಿನೊಂದಿಗೆ ಹೊಸ ಸಂಪರ್ಕ!

ಬೆಂಗಳೂರು: ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ. ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಕರಾವಳಿ ಭಾಗದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರ ಬರೆದು […]

ಧರ್ಮಸ್ಥಳ: ಸೌಜನ್ಯಾ ಪ್ರಕರಣದ ಮರುತನಿಖೆ: ಎಸ್‌ಐಟಿ ತಂಡಕ್ಕೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ!

ಮಂಗಳೂರು: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗಾಗಿ ಸುಪ್ರೀಂಕೋರ್ಟ್ ಆದೇಶದಂತೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (SIT) 16 ಮಂದಿ ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಈ ಕುರಿತು ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಸೆ.29ರಂದು ಆದೇಶ ಹೊರಡಿಸಿದ್ದಾರೆ. ಪ್ರಕರಣದ ಮರುತನಿಖೆಗಾಗಿ ಐವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡವನ್ನು ಸೆ.24ರಂದು ರಾಜ್ಯ ಸರ್ಕಾರ ರಚಿಸಿತ್ತು. ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ […]

ಅಮಾಸೆಬೈಲು: ನೇಣು ಬಿಗಿದು ಮಹಿಳೆ ಆತ್ಮಹತ್ಯೆ; ಸಾವಿನ ಬಗ್ಗೆ ತಾಯಿಗೆ ಸಂಶಯ

ಅಮಾಸೆಬೈಲು: ಕೌಟುಂಬಿಕ ವೈಮನಸ್ಸಿನ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೇಡಿಮನೆ ಗ್ರಾಮದಲ್ಲಿ ಸೆ.29ರಂದು ನಡೆದಿದೆ. ಮೃತರನ್ನು ಶೇಡಿಮನೆ ಗ್ರಾಮದ ಮಾಲಿನಿ (27) ಎಂದು ಗುರುತಿಸಲಾಗಿದೆ. ಈ ಕುರಿತು ಮೃತರ ತಾಯಿ ಜಲಜಾ ಪೂಜಾರಿ (53) ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಲಜಾ ಪೂಜಾರಿ ಅವರು ಸೀತಾನದಿ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸೆ.29ರಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 3.15ರ ವೇಳೆಗೆ ಮನೆಯ ಸಮೀಪದ ವ್ಯಕ್ತಿಯೊಬ್ಬರು ಕಾರ್ಖಾನೆಯ […]

ಅರೇಬಿಯನ್ ಸಮುದ್ರದಲ್ಲಿ ₹3,000 ಕೋಟಿ ಮೌಲ್ಯದ ಮಾದಕವಸ್ತು ಜಾಲ ಭೇದಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ: ಐವರು ಪಾಕಿಸ್ತಾನಿ ಪ್ರಜೆಗಳ ಬಂಧನ

ಎರ್ನಾಕುಲಂ (ಕೇರಳ): ಲಕ್ಷದ್ವೀಪದ ಪಶ್ಚಿಮ ಭಾಗದ ಅರೇಬಿಯನ್ ಸಮುದ್ರದಲ್ಲಿ ಇರಾನ್ ಮೂಲದ ದೋಣಿಯೊಂದರಿಂದ ಸುಮಾರು ₹3,000 ಕೋಟಿ ಮೌಲ್ಯದ 526 ಕೆ.ಜಿ. ಮಾದಕವಸ್ತುಗಳನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕರಾವಳಿ ರಕ್ಷಣಾ ಪಡೆ ವಾಯು ಹಾಗೂ ನೌಕಾ ಕಣ್ಗಾವಲು ವ್ಯವಸ್ಥೆಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಿತ್ತು. ಸೆ.25ರಂದು ರೇಡಾರ್ […]