ಅಪ್ರಾಪ್ತರಿಗೆ ಸಾಮಾಜಿಕ ಜಾಲತಾಣ ಖಾತೆ ನಿರ್ಬಂಧ? ನಿಯಮ ತಿದ್ದುಪಡಿಗೆ ಕೇಂದ್ರದ ಚಿಂತನೆ

ನವದೆಹಲಿ: 18 ವರ್ಷದೊಳಗಿನ ಅಪ್ರಾಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಶಾಸನಬದ್ಧ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರನ್ನೊಳಗೊಂಡ ಪೀಠವು ‘ಜಸ್ಟ್ ರೈಟ್ಸ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, […]

ಭಾರತಕ್ಕೆ 7 ನೇ ಚಿನ್ನ: ಚೀನಾವನ್ನು ಮಣಿಸಿದ ಭಾರತದ ಮಹಿಳಾಮಣಿಯರು!

ನಗೋಯಾ: ಐಚಿ-ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಮಹಿಳೆಯರ ಕಾಂಪೌಂಡ್ ಆರ್ಚರಿ ತಂಡದ ಫೈನಲ್ ಪಂದ್ಯದಲ್ಲಿ ಚೀನಾವನ್ನು 238-234 ಅಂತರದಿಂದ ಮಣಿಸಿದ ಭಾರತ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಪ್ರೀಥಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಮ್ ಹಾಗೂ ಚಿಕಿಟಾ ತನಿಪರ್ಥಿ ಅವರನ್ನೊಳಗೊಂಡ ಭಾರತ ತಂಡ ಫೈನಲ್‌ನ ನಾಲ್ಕೂ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ ಭಾರತ, ಪಂದ್ಯದುದ್ದಕ್ಕೂ ಚೀನಾಕ್ಕೆ ಅವಕಾಶ ನೀಡದೆ ಮೇಲುಗೈ ಕಾಯ್ದುಕೊಂಡಿತು. ಮೊದಲ […]

ಮೈಸೂರಲ್ಲಿ ಕರಾವಳಿ ಗತವೈಭವ – ಈ ಬಾರಿ ದಸರಾದಲ್ಲಿ ಕಂಬಳದ ಅಬ್ಬರ

ಮೈಸೂರು ದಸರಾ (Mysuru Dasara) ಎಂದರೆ ಕೇವಲ ಅರಮನೆಯ ವೈಭವ, ಜಂಬೂಸವಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲ; ಕರ್ನಾಟಕದ ವಿವಿಧ ಭಾಗಗಳ ಜನಪದ ಕಲೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮಹೋತ್ಸವವೂ ಹೌದು. ಈ ಬಾರಿಯ ದಸರಾದಲ್ಲಿ (Dasara) ಕರಾವಳಿಯ ಹೆಮ್ಮೆಯ ಕಂಬಳದ (Kambala) ಸೊಗಡಿಗೂ ಅವಕಾಶ ಸಿಕ್ಕಿರುವುದು ವಿಶೇಷ. ಕೆಸರು ಗದ್ದೆಯಲ್ಲಿ ಕೋಣಗಳ ಓಟ, ರೈತರ ಉತ್ಸಾಹ ಹಾಗೂ ಕರಾವಳಿಯ ಜನಪದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳ, ಮೈಸೂರಿನ ದಸರಾ ಸಂಭ್ರಮಕ್ಕೆ ಹೊಸ ಆಯಾಮ […]

ಇಂದು ದೆಹಲಿಯಲ್ಲಿ INDIA ಒಕ್ಕೂಟದ ನಾಯಕರ ಮಹತ್ವದ ಸಭೆ

ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತಾದ ವಿವಾದದ ನಡುವೆ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿರುವ ವಿರೋಧ ಪಕ್ಷಗಳ ‘ಇಂಡಿಯಾ’ (INDIA Bloc) ಮೈತ್ರಿಕೂಟವು, ‘ಎಸ್‌ಐಆರ್’ (SIR) ಪ್ರಕ್ರಿಯೆಯ ವಿರುದ್ಧ ಜಂಟಿ ಪ್ರತಿಭಟನೆಗೆ ಕಾರ್ಯಯೋಜನೆಯನ್ನು ಅಂತಿಮಗೊಳಿಸಲು ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಲು ಬುಧವಾರ ಸಭೆ ಸೇರಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಟಿಎಂಸಿಯ ಮಮತಾ ಬ್ಯಾನರ್ಜಿ ಹಾಗೂ ಎಡಪಕ್ಷಗಳು (ಸಿಪಿಐ, ಸಿಪಿಎಂ), ಎನ್‌ಸಿಪಿ-ಎಸ್‌ಪಿ ಮತ್ತು […]

ಎಸ್ಎಂಎಸ್ ಫೈನಾನ್ಶಿಯಲ್ ಸರ್ವಿಸ್ ರಜತ ಮಹೋತ್ಸವ ಉಡುಪಿ

ಉಡುಪಿ ಎಸ್.ಎಂ.ಎಸ್. ಫೈನಾನ್ನಿ ಯಲ್ ಸರ್ವಿಸ್‌ನ ರಜತ ಮಹೋತ್ಸವ ಕಾರ್ಯಕ್ರಮ ಉಡುಪಿ ಕಿದಿಯೂರ್ ಹೋಟೆಲ್‌ನ ಶೇಷ ಶಯನ ಸಭಾಂಗಣದಲ್ಲಿ ನಡೆಯಿತು.ಕರ್ಣಾಟಕ ಬ್ಯಾಂಕ್ ಉಡುಪಿ ಎಜಿಎಂ ಮತ್ತು ರೀಜನಲ್ ಹೆಡ್ ರಮೇಶ್ ವೈದ್ಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿಯ ರೀಜನಲ್ ಮ್ಯಾನೇಜರ್ ಬಿ. ಪ್ರಕಾಶ್ ಅಡಿಗ, ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ 25 ವರ್ಷಗಳ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು.ಯೂನಿಯನ್ ಬ್ಯಾಂಕ್ ಉಡುಪಿ ಎಜಿಎಂ ಮತ್ತು ರೀಜನಲ್ ಹೆಡ್ ಅಶೋಕ ಅಂಬಾಸ ಭಾಂಡಗೆ, ಉದ್ಯಮಿ ಸಂದೀಪ್ […]