ನಾವು ಒಳ್ಳೆಯ ಪ್ರವಾಸಿಗರಾಗೋಣ, ಇಂದು ವಿಶ್ವ ಪ್ರವಾಸೋದ್ಯಮ ದಿನ, ಈ ಸಂಕಲ್ಪ ಮಾಡೋಣ ಬನ್ನಿ

ಪ್ರವಾಸಿಗರಾಗಿ ನಮ್ಮ ಜವಾಬ್ದಾರಿ ಹಲವು. ನಾವು ನಿಜವಾದ ಯಶಸ್ವಿ ಪ್ರವಾಸಿಗರಾಗೋದು ಬರೀ ಫೋಟೋ ವಿಡಿಯೋ ಗಳನ್ನು ತೆಗೆದು ಅಲ್ಲವೇ ಅಲ್ಲ. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಸಂರಕ್ಷಿಸಿ, ಪ್ರೀತಿ, ಉಳಿಸಿಕೊಂಡರೆ ಮಾತ್ರ ಒಳ್ಳೆಯ ಪ್ರವಾಸಿಗರೆನ್ನಿಸಿಕೊಳ್ಳುತ್ತೇವೆ. ಹಾಗಾದ್ರೆ ಒಳ್ಳೆಯ ಪ್ರವಾಸಿಗರಾಗಲು ಯಾವೆಲ್ಲಾ ಗುಣಗಳು ನಮಗಿರಬೇಕು?ಪ್ರಕೃತಿಯನ್ನು ಕಾಪಾಡೋಣ:ಪ್ಲಾಸ್ಟಿಕ್, ಆಹಾರದ ಪೊಟ್ಟಣ, ಬಾಟಲಿ ಸೇರಿದಂತೆ ಯಾವುದೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಸವನ್ನು ಸೂಕ್ತ ಸ್ಥಳದಲ್ಲೇ ವಿಲೇವಾರಿ ಮಾಡಬೇಕು. ಸ್ಥಳೀಯ ಸಂಸ್ಕೃತಿಗೆ ಗೌರವ ನೀಡೋಣ:ಸ್ಥಳೀಯರ ಭಾಷೆ, ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಜೀವನಶೈಲಿಯನ್ನು ಗೌರವಿಸಬೇಕು. […]

ಉಡುಪಿ: ಅಂಬಲಪಾಡಿ ಮನೆ ಕಳ್ಳತನ ಪ್ರಕರಣ- ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್‌ನ ಇಬ್ಬರು ಆರೋಪಿಗಳ ಬಂಧನ, 4,50,500ರೂ. ಮೌಲ್ಯದ ಸೊತ್ತುಗಳ ವಶ

ಉಡುಪಿ: ಅಂಬಲಪಾಡಿಯ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ರಾಜ್ಯ ಸಂಭಾಲ್ ಜಿಲ್ಲೆಯ ಮೊಹಮ್ಮದ್ ಜಾಫರ್(22) ಹಾಗೂ ಕದೀರ್(32) ಬಂಧಿತ ಆರೋಪಿಗಳು. ಜು.1ರಿಂದ ಜು.9ರ ಮಧ್ಯಾವಧಿಯಲ್ಲಿ ಎ.ಎಸ್.ರಾಮಮೂರ್ತಿ ಎಂಬವರ ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆಯ ಸಹಾರಾ ಅಪಾರ್ಟ್ ಮೆಂಟ್ ಬಳಿ ಇರುವ ಮನೆಗೆ ನುಗ್ಗಿದ ಕಳ್ಳರು, 6 ಲಕ್ಷ ರೂ. ನಗದು ಹಾಗೂ 10ಸಾವಿರ ರೂ. ಮೌಲ್ಯದ 3 ವಾಚ್‌ಗಳನ್ನು […]

ವಾಲಿಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಇದರ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಹೆಬ್ರಿ ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಉಡುಪಿ ಜಿಲ್ಲಾಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಹಾಗೂ ಪ್ರೌಢಶಾಲಾ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡು ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿವೆ. ಈ ಮೂಲಕ ಸಂಸ್ಥೆಯೊಂದರ ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ಬಾಲಕಿಯರ ಎರಡೂ ತಂಡಗಳು ಮೈಸೂರು ವಿಭಾಗ […]