ಡಿಜೆ ಪ್ರಿಯರೇ ಇಲ್ಲಿ ಕೇಳಿ,ಜಾಸ್ತಿ ಡಿಜೆ ಸದ್ದಿಗೆ ಕುಣಿದರೆ ಢಮಾರ್ ಆಗುತ್ತೆ ಹೃದಯ!ಇಲ್ಲಿದೆ ವೈಜ್ಞಾನಿಕ ಸಾಕ್ಷಿಗಳು!

ಹಬ್ಬ, ಜಾತ್ರೆ, ಮೆರವಣಿಗೆ ಹಾಗೂ ವಿವಿಧ ಸಮಾರಂಭಗಳಲ್ಲಿ ಡಿಜೆ ಸಂಗೀತ ಮತ್ತು ಜೋರಾದ ಧ್ವನಿವರ್ಧಕಗಳ ಬಳಕೆ ಸಾಮಾನ್ಯವಾಗಿದೆ. ಆದರೆ, ಅತಿಯಾದ ವಾಲ್ಯೂಮ್ ಹಾಗೂ ಭಾರೀ ಬಾಸ್‌ಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ಒತ್ತಡದ ಪ್ರತಿಕ್ರಿಯೆ ಉಂಟಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಈಗಾಗಲೇ ಹೃದಯ ಸಂಬಂಧಿ ಸಮಸ್ಯೆ, ಅಧಿಕ ರಕ್ತದೊತ್ತಡ ಅಥವಾ ಹೃದಯದ ಲಯದ ಅಸ್ವಸ್ಥತೆ ಹೊಂದಿರುವವರು ಅತಿಯಾದ ಶಬ್ದದಿಂದ ದೂರವಿರುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ. […]

ಸುಂದರ ನಾಳೆಗಳಿಗೆ ಹಸಿರಿನ ಉಸಿರು ನೀಡುವ ಉಡುಪಿಯ ಟೀಮ್ ಯುವ ಓಜಸ್

 ಉಡುಪಿ: ಇಂದು ನೆಟ್ಟ ಸಸಿ ನಾಳೆ ನೆರಳು.. ಒಂದು ಸಸಿಯನ್ನು ನೆಡುವುದೆಂದರೆ ಮಣ್ಣಿನಲ್ಲಿ ಕೇವಲ ಒಂದು ಗಿಡ ನೆಡುವುದಲ್ಲ, ಸುಂದರ ನಾಳೆಗಳಿಗೆ ಭರವಸೆಗಳನ್ನು ಬಿತ್ತುವುದು. ಅಂತಹ ಭರವಸೆಯನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ಉಡುಪಿಯ ಟೀಮ್ ಯುವ ಓಜಸ್ ಹೌದು ಹಸಿರ ಕನಸುಗಳನ್ನು ಕಾಣುವ ಟೀಮ್ ಯುವ ಓಜಸ್, ಸುತ್ತಲೂ ಹಸಿರು ಮೂಡಿಸಲು ಶ್ರಮಿಸುತ್ತಿದೆ. ಹಸಿರೇ ಇಂದು, ನಾಳೆಗಳಿಗೆ ಉಸಿರು ನೀಡುತ್ತದೆ ಎನ್ನುವ ಅರಿವನ್ನು ಮೂಡಿಸುತ್ತಿದೆ. ಗಿಡ ನೆಡುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು; ಅದನ್ನು ಬೆಳೆಸುವುದು ನಮ್ಮ […]

ಅನುಕಂಪದ ಆಧಾರದ ಮೇಲೆ ನೇಮಕಾತಿ ಒಂದು ಸಲ ಮಾತ್ರ, ಉನ್ನತ ಹುದ್ದೆ ಕೇಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಅನುಕಂಪದ ಆಧಾರದ ಮೇಲಿನ ನೇಮಕಾತಿ ಒಂದು ಬಾರಿ ನೀಡುವ ಪರಿಹಾರ ಕ್ರಮವಾಗಿದ್ದು, ನಂತರ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಮುಂದಿಟ್ಟುಕೊಂಡು ಹೆಚ್ಚಿನ ಸೌಲಭ್ಯ ಅಥವಾ ಉನ್ನತ ಹುದ್ದೆ ಕೋರಿ ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿದ್ದ ಇಬ್ಬರು ನೌಕರರನ್ನು ಅವರ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) […]

ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್, ಮುಲ್ಕಿ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಮುಲ್ಕಿ, ಸೆಪ್ಟೆಂಬರ್ 27, 2026: ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್, ಮುಲ್ಕಿ (ACEM) ವತಿಯಿಂದ ಇಂಜಿನಿಯರ್ಸ್ ಡೇ 2026 ಕಾರ್ಯಕ್ರಮವನ್ನು ಸೆಪ್ಟೆಂಬರ್ 30, 2026ರ ಬುಧವಾರ ಸಂಜೆ 6:30 ಗಂಟೆಗೆ, ಮುಲ್ಕಿ ಸುಂದರ ರಾಮ ಶೆಟ್ಟಿ ಕನ್ವೆನ್ಶನ್ ಸೆಂಟರ್, ಕೊಳ್ನಾಡ್, ಮುಲ್ಕಿ ಇಲ್ಲಿ ಆಯೋಜಿಸಲಾಗಿದೆ. ಇಂಜಿನಿಯರ್ಸ್ ಡೇ ಅಂಗವಾಗಿ ನಡೆಯುವ ಈ ಕಾರ್ಯಕ್ರಮವು ದೇಶದ ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಹಾಗೂ ಗೌರವಿಸುವ ಉದ್ದೇಶವನ್ನು ಹೊಂದಿದೆ. ಕಾರ್ಯಕ್ರಮದ ಮುಖ್ಯ […]

ಪ್ರವಾಸವೆಂದರೆ ಬರೀ ಮೋಜಲ್ಲ, ಜವಾಬ್ದಾರಿ, ನೆಮ್ಮದಿಯ ದಾರಿ: ಇಂದು ವಿಶ್ವ ಪ್ರವಾಸೋದ್ಯಮ ದಿನ, ಎಲ್ಲಾ ಸಂಗತಿಗಳು ನೆನಪಿರಲಿ!

ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವ ಯೋಜನೆ ಮಾಡಿದ ತಕ್ಷಣ ಮನಸ್ಸಿನಲ್ಲಿ ಉತ್ಸಾಹ ಚಿಗುರೊಡೆಯುತ್ತದೆ. ಹೋಗಬೇಕಾದ ಸ್ಥಳದ ಮಾಹಿತಿ ಹುಡುಕುವುದು, ವಾಹನದ ವ್ಯವಸ್ಥೆ ಮಾಡುವುದು, ಹೋಟೆಲ್ ಅಥವಾ ಹೋಂಸ್ಟೇ ಬುಕ್ ಮಾಡುವುದು, ಪ್ರವಾಸದ ವೇಳೆ ಬೇಕಾಗುವ ಬಟ್ಟೆ-ಬರೆ, ಅಗತ್ಯ ವಸ್ತುಗಳ ಖರೀದಿ, ಆಟ-ಮೋಜಿಗೆ ಬೇಕಾದ ಸಾಮಗ್ರಿಗಳ ಸಿದ್ಧತೆ… ಹೀಗೆ ಪ್ರವಾಸದ ತಯಾರಿಯೇ ಒಂದು ರೀತಿಯ ಸಂಭ್ರಮ. ಇನ್ನು ಪ್ರವಾಸದ ಸಂದರ್ಭದಲ್ಲಿ ಮೊಬೈಲ್, ಕ್ಯಾಮೆರಾಗಳಲ್ಲಿ ಕ್ಷಣಗಳನ್ನು ಸೆರೆಹಿಡಿಯುವುದಂತೂ ಸಾಮಾನ್ಯ. ಹೊಸ ಸ್ಥಳಗಳಲ್ಲಿ ಓಡಾಡಿ, ಆಟವಾಡಿ, ಸ್ಥಳೀಯ ಆಹಾರ ಸವಿದು, ಸಂತೋಷಪಟ್ಟು ಮರಳಿದ […]