ಉಡುಪಿ: ಅಂಬಲಪಾಡಿಯ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ರಾಜ್ಯ ಸಂಭಾಲ್ ಜಿಲ್ಲೆಯ ಮೊಹಮ್ಮದ್ ಜಾಫರ್(22) ಹಾಗೂ ಕದೀರ್(32) ಬಂಧಿತ ಆರೋಪಿಗಳು.
ಜು.1ರಿಂದ ಜು.9ರ ಮಧ್ಯಾವಧಿಯಲ್ಲಿ ಎ.ಎಸ್.ರಾಮಮೂರ್ತಿ ಎಂಬವರ ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆಯ ಸಹಾರಾ ಅಪಾರ್ಟ್ ಮೆಂಟ್ ಬಳಿ ಇರುವ ಮನೆಗೆ ನುಗ್ಗಿದ ಕಳ್ಳರು, 6 ಲಕ್ಷ ರೂ. ನಗದು ಹಾಗೂ 10ಸಾವಿರ ರೂ. ಮೌಲ್ಯದ 3 ವಾಚ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಸೆ.25ರಂದು ಇನ್ನೋರ್ವ ಆರೋಪಿ ಕದೀರ್ನನ್ನು ಮೂಡಬಿದ್ರೆಯಲ್ಲಿ ಬಂಧಿಸಿ, ಆತನ ಬಳಿ ಇದ್ದ 1,65,000ರೂ. ನಗದು, 2 ಬೆಳ್ಳಿ ಕಾಯಿನ್ಗಳು, 5 ವಾಚ್ಗಳು, ಕೃತ್ಯಕ್ಕೆ ಬಳಸಿದ 2 ಸ್ಕೂಡ್ರೈವರ್ ಸೇರಿದಂತೆ ಒಟ್ಟು 4,50,500ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡರು. ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ನಿರ್ದೇಶನದಂತೆ, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ, ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರತ್ನಾಕರ್ ಕೆ., ಎಎಸ್ಐ ಹರೀಶ್ ಹಾಗೂ ಸಿಬಂದಿ ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಆನಂದ, ಓಬಳೇಶ್, ಆನಂದಯ್ಯ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಹಾಗೂ ಉಡುಪಿ ನಗರ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಹಲವು ಪ್ರಕರಣಗಳ ಆರೋಪಿಗಳು: ಆರೋಪಿಗಳಿಬ್ಬರು ಉತ್ತರ ಪ್ರದೇಶದ ಬಿಡಿಯಾ ಗ್ಯಾಂಗ್ನ ಸದಸ್ಯ ರಾಗಿದ್ದು ಇವರು ಮೂಲತ: ಉತ್ತರಪ್ರದೇಶದ ಬನಿಯಾಟೇರ್ ಚಂದೌಶಿ ಅಕ್ರೌಲಿ ನಿವಾಸಿಗಳಾಗಿದ್ದಾರೆ. ಮೊಹ್ಮದ್ ಜಾಫರ್ ವಿರುದ್ದ ಉತ್ತರಾಖಂಡದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ 1 ಮನೆಕಳ್ಳತನ ಪ್ರಕರಣ ದಾಖಲಾಗಿದೆ. ಕದೀರ್ ವಿರುದ್ದ ಉತ್ತರ ಪ್ರದೇಶ ರಾಜ್ಯದ ಬನಿಯಾಟೇರ್ ಪೊಲೀಸ್ ಠಾಣೆಯಲ್ಲಿ 1 ಅಕ್ರಮ ಶಸ್ತ್ರಾಸ್ತ ಪ್ರಕರಣ ಮತ್ತು ಮನೆಕಳ್ಳತನ ಪ್ರಕರಣ ದಾಖಲಾಗಿದೆ ಹಾಗೂ ಮುರದಾಬಾದ್ನ ಸಿವಿಲ್ ಲೈನ್ ಪೊಲೀಸ್ ಠಾಠಾಣೆಯಲ್ಲಿ 1 ಅಕ್ರಮ ಶಸ್ತ್ರಾಸ್ತ ಪ್ರಕರಣ ಮತ್ತು ಮನೆಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ.















