ಇನ್‌ಸ್ಪೆಕ್ಟರ್ ಮಾಡಬಾರದ್ದು ಏನು ಮಾಡಿಲ್ಲ, ಪೊಲೀಸ್‌ ಲಾಂಗ್ವೇಜ್‌ನಲ್ಲಿ ಹೇಳಿದ್ದಾರೆ; ಡಿಕೆಶಿ

ಬೆಂಗಳೂರು: ಇನ್‌ಸ್ಪೆಕ್ಟರ್ ಮಾಡಬಾರದ್ದು ಏನೂ ಮಾಡಿಲ್ಲ, ಅವರ ಲಾಂಗ್ವೇಜ್‌ನಲ್ಲಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಡಿಕೆ ಶಿವಕುಮಾರ್‌ (D K Shivakumar) ಧನಂಜಯ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿಚಾರವಾಗಿ ಜನರಿಗೆ ವಾರ್ನಿಂಗ್‌ ನೀಡಿದ್ದ ಇನ್‌ಸ್ಪೆಕ್ಟರ್ ಧನಂಜಯ್‌ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿರುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್‌ಸ್ಪೆಕ್ಟರ್ ಮಾಡಬಾರದ್ದು ಏನೂ ಮಾಡಿಲ್ಲ. ಅವರ ಭಾಷೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಅವರೇ ತಾನೇ […]

ಪಾನ್ ಮಸಾಲಾ ವಿವಾದ: ಶಾರುಖ್, ಅಜಯ್, ಟೈಗರ್‌ಗೆ ಸದ್ಯಕ್ಕಿಲ್ಲ ರಿಲೀಫ್ !ಅರ್ಜಿ ವಜಾ ಮಾಡಿದ ಹೈಕೋರ್ಟ್!

ನವದೆಹಲಿ: ಪಾನ್ ಮಸಾಲಾ ಜಾಹೀರಾತು ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ನೀಡಿದ್ದ ಶೋಕಾಸ್ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಈ ವಿಷಯವು ದೆಹಲಿ ಹೈಕೋರ್ಟ್‌ನ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ. ಅರ್ಜಿ ಸಲ್ಲಿಸಿದ್ದು ನಟರಲ್ಲ! […]

ಭಾರತದಲ್ಲಿ 2026 ರ ಎಂಜಿನಿಯರ್ ದಿನ: ದಿನಾಂಕ, ಥೀಮ್ ಮತ್ತು ಪ್ರಾಮುಖ್ಯತೆ

ಮೂಲಸೌಕರ್ಯ, ತಂತ್ರಜ್ಞಾನ, ಸಾರಿಗೆ, ನೀರಿನ ವ್ಯವಸ್ಥೆಗಳು ಮತ್ತು ನಾವೀನ್ಯತೆಗಳ ಮೂಲಕ ಎಂಜಿನಿಯರಿಂಗ್ ದೈನಂದಿನ ಜೀವನವನ್ನು ರೂಪಿಸುವುದರಿಂದ ಈ ದಿನವು ಮುಖ್ಯವಾಗಿದೆ. 2026 ರ ಅಧಿಕೃತ ಎಂಜಿನಿಯರ್‌ಗಳ ದಿನದ ಥೀಮ್ “ನಾವೀನ್ಯತೆ ಮತ್ತು ಡಿಜಿಟಲೀಕರಣದ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಸ್ಮಾರ್ಟ್ ಎಂಜಿನಿಯರಿಂಗ್.”ಇದು ಜವಾಬ್ದಾರಿಯುತ ಅಭಿವೃದ್ಧಿಯಲ್ಲಿ ಆಧುನಿಕ ಎಂಜಿನಿಯರಿಂಗ್ ಪಾತ್ರವನ್ನು ಎತ್ತಿ ತೋರಿಸುತ್ತದೆ. ಎಂಜಿನಿಯರ್‌ಗಳ ದಿನವು ಮಾನವ ಜೀವನವನ್ನು ಸುಧಾರಿಸುವಲ್ಲಿ ಎಂಜಿನಿಯರ್‌ಗಳ ಕಾರ್ಯವನ್ನು ಗುರುತಿಸುವ ಆಚರಣೆಯಾಗಿದೆ. ಭಾರತದಲ್ಲಿ, ಸಾರ್ವಜನಿಕ ಸೇವೆ ಮತ್ತು ತಾಂತ್ರಿಕ ದೃಷ್ಟಿಕೋನಕ್ಕಾಗಿ ಸ್ಮರಿಸುವ ಗೌರವಾನ್ವಿತ ಎಂಜಿನಿಯರ್ ಮತ್ತು ರಾಜಕಾರಣಿ ಸರ್ ಎಂ. ವಿಶ್ವೇಶ್ವರಯ್ಯ ಅವರ […]

ರೂ.2,000 ವರೆಗಿನ UPI ಪಾವತಿಗೆ ಯಾವುದೇ ಶುಲ್ಕವಿಲ್ಲ ಹಣಕಾಸು ಸಚಿವಾಲಯ ಹೊಸ ಅಧಿಸೂಚನೆ!

ನವದೆಹಲಿ: ₹2,000ವರೆಗಿನ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದೇ ರೀತಿ, ₹2,000ವರೆಗಿನ ರುಪೇ (RuPay) ಚಾಲಿತ ಡೆಬಿಟ್ ಕಾರ್ಡ್ ಪಾವತಿಗಳಿಗೂ ಶುಲ್ಕ ವಿಧಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯದ ಗೆಜೆಟ್ ಅಧಿಸೂಚನೆ ತಿಳಿಸಿದೆ. ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ, 2007ರ ಸೆಕ್ಷನ್ 10A ಅಡಿ ಕೇಂದ್ರ ಸರ್ಕಾರ ಈ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನು ನಿರ್ದಿಷ್ಟಪಡಿಸಿದೆ. UPI ಮೂಲಕ ₹2,000ವರೆಗಿನ ವಹಿವಾಟು ಹಾಗೂ ರುಪೇ ಡೆಬಿಟ್ ಕಾರ್ಡ್ […]

‘ತಮಿಳುನಾಡು ಅಭ್ಯರ್ಥಿಗಳಿಗೆ ಮಾತ್ರ’ಎನ್ನುವ ಬೆಂಗಳೂರು ಕಂಪೆನಿಯ ಉದ್ಯೋಗ ಜಾಹೀರಾತು: ಕೆರಳಿ ಕೆಂಡವಾದ ಬೆಂಗಳೂರಿನ ಉದ್ಯೋಗಿಗಳು!ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಬೆಂಗಳೂರು: ಉದ್ಯೋಗಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನರು ಬೆಂಗಳೂರಿಗೆ ಬರುತ್ತಾರೆ. ಆದರೆ, ಬೆಂಗಳೂರಿನಲ್ಲಿ ಪ್ರಕಟವಾದ ಖಾಸಗಿ ಕಂಪನಿಯೊಂದರ ಉದ್ಯೋಗ ಜಾಹೀರಾತಿನಲ್ಲಿ ‘ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು’ ಎಂಬ ಷರತ್ತು ವಿಧಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು, ಕೊಯಮತ್ತೂರು ಹಾಗೂ ನಮಕ್ಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಯೊಂದರ ಜನರಲ್ ಮ್ಯಾನೇಜರ್ ಹಾಗೂ ಎಚ್‌ಆರ್ ಟೀಮ್ ಹೆಡ್ ಬಾಲ ಎಂ. ಅವರು ವೃತ್ತಿಪರ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಡೇಟಾ ಅನಾಲಿಸ್ಟ್ ಹುದ್ದೆಗೆ ಉದ್ಯೋಗ ಜಾಹೀರಾತು ಪ್ರಕಟಿಸಿದ್ದರು. […]