ದೇಶದ ಸುಂದರ ಕನಸುಗಳನ್ನು ಕಟ್ಟುವ ಇಂಜಿನಿಯರ್ಸ್ ಗಳಿಗೆ ದೊಡ್ಡ ಸಲಾಂ: ಇಂದು ಇಂಜಿನಿಯರ್ಸ್ ಡೇ,ವಿಶ್ವೇಶ್ವರಯ್ಯನವರನ್ನ ನೆನಪು ಮಾಡುವ ಸುಂದರ ಕ್ಷಣ

ನೀರನ್ನು ಸಂಗ್ರಹಿಸುವ ಅಣೆಕಟ್ಟುಗಳಿಂದ ಹಿಡಿದು ಪ್ರವಾಹ ನಿಯಂತ್ರಣ ವ್ಯವಸ್ಥೆಯವರೆಗೆ, ಕೈಗಾರಿಕೆಗಳಿಂದ ಶಿಕ್ಷಣದವರೆಗೆ—ಭಾರತದ ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ತಮ್ಮ ದೂರದೃಷ್ಟಿಯ ಹೆಜ್ಜೆಗುರುತು ಮೂಡಿಸಿದ ಮಹಾನ್ ಇಂಜಿನಿಯರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ದೇಶಾದ್ಯಂತ ‘ಇಂಜಿನಿಯರ್ಸ್ ಡೇ’ ಆಚರಿಸಲಾಗುತ್ತದೆ.ಆಧುನಿಕ ಭಾರತದ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಕೊಡುಗೆಯನ್ನು ಸ್ಮರಿಸುವ ಈ ದಿನವು ಕೇವಲ ವೃತ್ತಿಯೊಂದರ ಸಂಭ್ರಮವಲ್ಲ; ದೇಶದ ಅಭಿವೃದ್ಧಿಗೆ ತಮ್ಮ ಜ್ಞಾನ, ಕೌಶಲ್ಯ ಮತ್ತು ಶ್ರಮವನ್ನು ಸಮರ್ಪಿಸಿದ ಇಂಜಿನಿಯರ್‌ಗಳಿಗೆ ಗೌರವ ಸಲ್ಲಿಸುವ ದಿನವೂ ಹೌದು.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲೇ ಇಂಜಿನಿಯರ್ಸ್ […]