MSDC ಕೌಶಲ್ ಮಣಿಪಾಲ ಸ್ಕಿಲ್ ಕ್ಲಬ್ ವತಿಯಿಂದ ಉಚಿತ ಸದಸ್ಯತ್ವ ನೋಂದಣಿ:ಕಲಿಕಾ ಅವಕಾಶಗಳ ಜೊತೆಗೆ ಗಿಫ್ಟ್ ವೋಚರ್ ಪಡೆಯುವ ಅವಕಾಶ!

ಮಣಿಪಾಲ: ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಮತ್ತು ಹೊಸ ಕೌಶಲ್ಯಗಳ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ MSDC ಕೌಶಲ್ ಮಣಿಪಾಲ ಸ್ಕಿಲ್ ಕ್ಲಬ್ ವತಿಯಿಂದ ಉಚಿತ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ. ಸ್ಕಿಲ್ ಕ್ಲಬ್‌ನ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳು ಮತ್ತು ಕಲಿಕಾ ಅವಕಾಶಗಳ ಜೊತೆಗೆ ₹3,000 ಮೌಲ್ಯದ ಸ್ಕಿಲ್ ರೂಪೀಸ್ ಗಿಫ್ಟ್ ವೋಚರ್ ಪಡೆಯುವ ಅವಕಾಶವಿದೆ. ಸದಸ್ಯರಿಗೆ ಆನ್‌ಲೈನ್ ಪ್ರಮಾಣೀಕೃತ ಲೈವ್ ಇಂಟರಾಕ್ಟಿವ್ ಕೋರ್ಸ್‌ಗಳಿಗೆ 10ರಿಂದ 90ರಷ್ಟು ಕೋರ್ಸ್ […]
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ: ರಾಜ್ಯ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಸೆಪ್ಟಂಬರ್ 9 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 10.30 ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
MSDC ಕೊಡುತ್ತಿದೆ ಸೃಜನಶೀಲ ಪ್ರತಿಭೆಗೆ ವೇದಿಕೆ: ಸೆ.19 ರಂದು ‘ದಿ ಸ್ಕಿಲ್ ಫೆಸ್ಟ್–ಕೌಶಲ್ 2026: ವಿವಿಧ ಸ್ಪರ್ಧೆಗಳ ಸುರಿಮಳೆ

ಮಣಿಪಾಲ: ಯುವಜನರಲ್ಲಿರುವ ಸೃಜನಶೀಲತೆ ಹಾಗೂ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ MSDC–School of Fashion & Interior ವತಿಯಿಂದ ‘ದಿ ಸ್ಕಿಲ್ ಫೆಸ್ಟ್–ಕೌಶಲ್ 2026’ ಒಂದು ದಿನದ ಕಾರ್ಯಕ್ರಮವನ್ನು ಸೆಪ್ಟೆಂಬರ್ 19ರಂದು ಆಯೋಜಿಸಲಾಗಿದೆ. 15 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿರುವ ಕಾರ್ಯಕ್ರಮದಲ್ಲಿ ಪರ್ಲ್ ನೆಕ್ಲೇಸ್ ಮೇಕಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಫ್ಯಾಬ್ರಿಕ್ ಪೇಂಟಿಂಗ್, ಫ್ಯಾಬ್ರಿಕ್ ರಂಗೋಲಿ, ಬೆಸ್ಟ್ ಔಟ್ ಆಫ್ ವೇಸ್ಟ್ ಹಾಗೂ ನ್ಯೂಟ್ರಿಷಿಯಸ್ ಸಲಾಡ್ ಮೇಕಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಭಾಗವಹಿಸುವವರು ತಮ್ಮ ಕಲಾತ್ಮಕತೆ, ಸೃಜನಶೀಲತೆ ಹಾಗೂ ಕೌಶಲ್ಯವನ್ನು […]
ಕಾಪುವಿನಲ್ಲಿ ಸೆ.9ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ

ಕಾಪು: ಪೆರ್ಡೂರು ಕೇಂದ್ರ ಕಚೇರಿಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.)ದ 8ನೇ ಶಾಖೆಯ ಶುಭಾರಂಭ ಸಮಾರಂಭ ಸೆ.9ರಂದು ಬೆಳಗ್ಗೆ 10 ಗಂಟೆಗೆ ಕಾಪುವಿನ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಬ್ಯಾಂಕಿಂಗ್ ಕ್ಷೇತ್ರದ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹವಾನಿಯಂತ್ರಿತ ಶಾಖೆ ಇದಾಗಿದ್ದು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಮುಖ್ಯರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಕರ್ನಾಟಕ ಸರ್ಕಾರದ ಮಾಜಿ ಸಚಿವ […]
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೂವರ ಬಂಧನ

ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಿಟ್ಲ ಪೊಲೀಸರು ಜವಾದ್, ಶಹೀದ್ ಹಾಗೂ ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಎಂಬ ಮೂವರನ್ನು ಬಂಧಿಸಿದ್ದಾರೆ. 2026ರ ಫೆಬ್ರವರಿಯಿಂದ ಆಗಸ್ಟ್‌ವರೆಗೆ ಆರು ಮಂದಿ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸೆ.4ರಂದು ಬಾಲಕ ನೀಡಿದ ದೂರಿನ ಆಧಾರದಲ್ಲಿ ಆರು ಪ್ರತ್ಯೇಕ ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದ ಆರೋಪಿಗಳ ಪತ್ತೆಗಾಗಿ […]